For Quick Alerts
ALLOW NOTIFICATIONS  
For Daily Alerts

  ತವರಿನಲ್ಲಿ ಮಲ್ಲಿಕಾ ಶೆರಾವತ್ ಮೇಲೆ ಮುಗಿಬಿದ್ದ ಜನ

  By Srinath
  |

  ಅತ್ಯಪರೂಪಕ್ಕೆ ಅಂತ ತವರೂರಿಗೆ ಹೋಗಿದ್ದ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಅವರು ಅಲ್ಲಿನ ಜನರ ಪ್ರೀತ್ಯಾಭಿಮಾನಗಳನ್ನು ಕಂಡು ಬೆಚ್ಚಿಬಿದ್ದು, ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸಾಗಿದ್ದಾರೆ.

  ಹರಿಯಾಣದ ಹಿಸಾರ್ ಜಿಲ್ಲೆಯ ಮೊತ್ ರಂಗ್ರಾನ್ ಎಂಬುದು ನಟಿ ಮಲ್ಲಿಕಾ ಹುಟ್ಟೂರು. 36 ವರ್ಷದ ನಟಿ ಮಲ್ಲಿಕಾ ಸುಮಾರು 15 ವರ್ಷಗಳ ಬಳಿಕ ನಿನ್ನೆ ಮಂಗಳವಾರ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದರು. ಬಹುಚರ್ಚಿತ 'ದಿ ಬ್ಯಾಚಲರೇಟ್ ಇಂಡಿಯಾ' ಟಿವಿ ರಿಯಾಲ್ಟಿ ಷೋ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಆ ವೇಳೆ ಆಕೆಯನ್ನು ನೋಡಲು ಜನರ ದಂಡೇ ಸೇರಿತ್ತು.

  The Bachelorette India -- Mere Khayalon ki Mallika

  'ದಿ ಬ್ಯಾಚಲರೇಟ್ ಇಂಡಿಯಾ ಮೇರೆ ಕಯಾಲೋಂಕಿ ಮಲ್ಲಿಕಾ' ರಿಯಾಲ್ಟಿ ಷೋಗಾಗಿ ನಟಿ ಮಲ್ಲಿಕಾ ತನ್ನ ಪೂರ್ವಿಕರ ಮನೆ ಹಾಗೂ ಗ್ರಾಮದ ಗುರುದ್ವಾರಕ್ಕೆ ಭೇಟಿ ನೀಡುವುದು ಮತ್ತು ಟ್ರ್ಯಾಕ್ಟರಿನಲ್ಲಿ ಊರಲ್ಲೆಲ್ಲಾ ರೌಂಡ್ಸ್ ಹೊಡೆಯುವುದನ್ನು ಚಿತ್ರೀಕರಣ ಮಾಡಬೇಕಿತ್ತು.
  ಆದರೆ ಮಲ್ಲಿಕಾ ಕಾರಿನಲ್ಲಿ ಬರುತ್ತಿದ್ದಂತೆ ಮೂರ್‍ನಾಲ್ಕು ಸಾವಿರ ಜನ ಆಕೆಯನ್ನು ನೋಡಲು ಸೇರಿದ್ದಲ್ಲದೆ ಒಂದು ಗುಂಪು ಆಕೆಯ ಕಾರನ್ನು ಸುತ್ತುವರಿದ್ದಿದ್ದರು. ಇದರಿಂದ ಕಾರಿನಿಂದಲೂ ಇಳಿಯಲು ಆಗದೆ ನಟಿ ಮಲ್ಲಿಕಾ ಗ್ರಾಮದಿಂದ ಹಿಂತಿರುಗಿದ್ದಾಳೆ.

  Actor Mallika Sherawat native Moth Rangran, Hisar district

  ಅಂದಹಾಗೆ ಮೂಲತಃ ಹರಿಯಾಣದ ಮೊತ್ ರಂಗ್ರಾನ್ ಗ್ರಾಮದವಳಾದ ಮಲ್ಲಿಕಾಳ ಮೂಲ ಹೆಸರು ರೀಮಾ ಲಂಬಾ. ಈಕೆಯ ತಂದೆ ಮುಖೇಶ್ ಲಂಬಾ. ಇವರು ಹರಿಯಾಣದಲ್ಲಿ ಇಂಜಿನಿಯರ್. ಮುಖೇಶ್ ಲಂಬಾ, ಗುರುದ್ವಾರದ ಬಳಿ ದೊಡ್ಡ ಸಂಖ್ಯೆಯಲ್ಲಿದ್ದ ಚಿತ್ರೀಕರಣ ತಂಡದ ಮಧ್ಯೆ ಹೇಗೋ ದಾರಿ ಮಾಡಿಕೊಂಡು ಮಗಳಿಗಾಗಿ ಕಾಯುತ್ತಿದ್ದರು.

  Reema Lamba D/o Mukesh Lamba

  ಆದರೆ ಮಗಳು ಮಲ್ಲಿಕಾ, ಗ್ರಾಮಕ್ಕೆ ಭೇಟಿ ಕೊಟ್ಟರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಕೂಡಲೇ ಹಿಂತಿರುಗಿದ್ದರು. ಇದರಿಂದ ಅಪ್ಪ ಮುಖೇಶ್ ಅವರಿಗೂ ಬೇಸರವಾಗಿತ್ತು. ಅಲ್ಲದೆ, ಆಕೆಯ ಪೂರ್ವಿಕರ ನಿವಾಸದ ಬಳಿ ನೆರೆದಿದ್ದ ನೂರಾರು ಮಂದಿ ಸಂಬಂಧಿಕರಿಗೂ ನಿರಾಸೆಯಾಯಿತು. Murder ಖ್ಯಾತಿಯ ನಟಿ ಮಲ್ಲಿಕಾ, ಹಿಸ್ಸಾರಿನ ದೊಡ್ಡ ದಾನಿ, ಖ್ಯಾತ ಸೇಠ್ ಛಾಜು ರಾಮ್ ಅವರ ಮರಿಮೊಮ್ಮಗಳು.

  Hisar SHO Bijendar Singh

  ಕಾರ್ಯಕ್ರಮ ಆಯೋಜಕರು ಮೊದಲೇ ಪೊಲೀಸರಿಗೆ ವಿಷಯ ತಿಳಿಸದೆ ಇದ್ದಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದೂ ಶೆರಾವತ್ ಅವರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಿಜೇಂದರ್ ಸಿಂಗ್ ಹೇಳಿದ್ದಾರೆ.

  English summary
  Actor Mallika Sherawat mobbed at native village in Haryana makes hasty return. Actor Mallika Sherawat was mobbed by a crowd as she reached her native village Moth Rangran in Hisar district to shoot for a TV serial on Tuesday afternoon. Sherawat, whose real name is Reema Lamba, visited her village after 15 years and was surrounded by a crowd of 3,000 to 4,000 people.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more