ನಟ ವಿಷ್ಣುವರ್ಧನ್ ಮನೆಗೆ ರಾತ್ರಿ ಕಲ್ಲು ತೂರಾಟ

By ಅನಂತರಾಮು, ಹೈದರಾಬಾದ್

Dhenikaina Ready still
ನಟ ಕಮ್ ರಾಜಕಾರಣಿ ಡಾ.ಮೋಹನ್ ಬಾಬು ನಿರ್ಮಾಣದ 'ದೇನಿಕೈನಾ ರೆಡಿ' (ಯಾವುದಕ್ಕೂ ರೆಡಿ) ಚಿತ್ರದ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿಬಿದ್ದಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಬ್ರಾಹ್ಮಣರನ್ನು ಲೇವಡಿ ಮಾಡಲಾಗಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬ್ರಾಹ್ಮಣ ಸಮುದಾಯ ಕಾನೂನು ಕ್ರಮಕ್ಕೂ ಮುಂದಾಗಿದೆ. ಈ ಘಟನೆ ನಡೆದ ಬಳಿಕ ಎಲ್ಲಾ ತಣ್ಣಗಾಯಿತು ಎಂದುಕೊಂಡಿರುವಾಗಲೇ ಚಿತ್ರದ ನಾಯಕ ನಟ ಮಂಚು ವಿಷ್ಣುವರ್ಧನ್ ಅವರ ಮನೆಗೆ ರಾತ್ರಿ ವೇಳೆಯಲ್ಲಿ ಯಾರೋ ಕಲ್ಲು ತೂರಿದ ಘಟನೆ ನಡೆದಿದೆ.

ಸರಿಸುಮಾರು 40 ಮಂದಿಯಿದ್ದ ತಂಡ ಹೈದರಾಬಾದಿನ ಅವರ ಮನೆಗೆ ಕಲ್ಲು ತೂರಿ ಅವರ ಮನೆ ಬಾಗಿಲನ್ನು ಜಖಂ ಗೊಳಿಸಿದ್ದಾರೆ. ಅವರ ಮನೆಯ ಮುಂದಿನ ದೀಪಗಳು ಕಲ್ಲಿನ ದಾಳಿಗೆ ಪುಡಿಪುಡಿಯಾಗಿವೆ. ಆದರೆ ಈ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಮನೆಯಲ್ಲಿರಲಿಲ್ಲವಂತೆ. ಅವರ ತಾಯಿ ಮಾತ್ರ ಇದ್ದರಂತೆ.

ಈ ಘಟನೆಯಿಂದ ಕಂಗೆಟ್ಟಿರುವ ಅವರು ತಮ್ಮನ್ನು ಕಾಪಾಡಿ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಮೊರೆಹೋಗಿದ್ದಾರೆ. ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಪುರೋಹಿತರನ್ನು ತಮಾಷೆಯಾಗಿ, ಲೇವಡಿ ಮಾಡಿ ತೋರಿಸಲಾಗಿದೆ ಎಂದು ವಿವಿಧ ಬ್ರಾಹ್ಮಣ ಸಂಘಟನೆಗಳು ಆರೋಪಿಸಿವೆ. (ಏಜೆನ್ಸೀಸ್)

More from Filmibeat

English summary
The controversy surrounding the Telugu movie Dhenikaina Ready is getting worse with about 40 people attacking hero Manchu Vishnu's house and destroying doors and lights by pelting stones on Wednesday night (October 31). The Telugu actor, who was in a mood to celebrate its successful opening, had to knock the door of the Human Rights Commission (HRC) for justice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X