ಸಾಯೋವರೆಗೂ ಈ ಪ್ರೀತಿ ಮರೆಯೋದಿಲ್ಲ: ಮನೋರಂಜನ್ ರವಿಚಂದ್ರನ್!

ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಎನ್ನುವ ಹೆಸರು ಬಹುದೊಡ್ಡ ಹೆಸರು. ಈಗ ಕ್ರೇಜಿ ಸ್ಟಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪನ ಹಾದಿಯಲ್ಲಿ ಭಿನ್ನ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಸದ್ಯ ಕ್ರೇಜಿ ಸ್ಟಾರ್‌ ಹಿರಿಯ ಪುತ್ರ ಮನೋರಂಜನ್ ಅಭಿನಯದ 'ಮುಗಿಲ್‌ ಪೇಟೆ' ರಿಲೀಸ್‌ ಆಗಿದೆ.

ಮನೋರಂಜನ್ 2017ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಮನೋರಂಜನ್ ಅಭಿನಯದ ಮೂರನೆಯ ಸಿನಿಮಾ 'ಮುಗಿಲ್‌ ಪೇಟೆ' ರಿಲೀಸ್ ಆಗಿದೆ.

'ಮುಗಿಲ್‌ ಪೇಟ್' ರಿಲೀಸ್‌ಗೂ ಮುನ್ನ ನಿರೀಕ್ಷೆ ಹುಟ್ಟಿಸಿತ್ತು. ಚಿತ್ರದಲ್ಲಿ ಆ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡಿದೆ.

ಜನರೊಂದಿಗೆ ಕೂತು ಸಿನಿಮಾ ನೋಡಿದ ಮನೋರಂಜನ್!

ಜನರೊಂದಿಗೆ ಕೂತು ಸಿನಿಮಾ ನೋಡಿದ ಮನೋರಂಜನ್!

'ಮುಗಿಲ್ ಪೇಟೆ' ಚಿತ್ರದ ಮೊದಲ ಶೋ ನೋಡಲು ನಾಯಕ ನಟ ಮನೋರಂಜನ್ ಮತ್ತು ಮನೋರಂಜನ್‌ ಸಹೋದರ ವಿಕ್ರಂ ರವಿಚಂದ್ರನ್‌ ಚಿತ್ರ ಮಂದಿರಕ್ಕೆ ಆಗಮಸಿದ್ದರು. ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. ಪ್ರೇಕ್ಷಕರ ಜೊತೆಗೆ ಸಿನಿಮಾ ನೋಡಿ ಮನೋರಂಜನ್ ಖುಷಿ ಪಟ್ಟಿದ್ದಾರೆ. ಚಿತ್ರಕ್ಕೆ ರೆಸ್ಪಾನ್ಸ್ ಕಂಡು ಸಂತಸಗೊಂಡಿದ್ದಾರೆ.

ಜನರ ಪ್ರೀತಿಗೆ ಮನಸೋತ ಕ್ರೇಜಿ ಪುತ್ರ!

ಜನರ ಪ್ರೀತಿಗೆ ಮನಸೋತ ಕ್ರೇಜಿ ಪುತ್ರ!

ಮುಗಿಲ್‌ ಪೇಟೆ ಸಿನಿಮಾಗೆ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆ ಕಂಡು ನಟ ಮನೋರಂಜನ್ ಖುಷಿಯಲ್ಲಿ ತೇಲಾಡಿದ್ದಾರೆ. ಅವರು ಅಂದುಕೊಂಡಂತೆ ಸಿನಿಮಾ ಮೂಡಿ ಬಂದಿದ್ದು, ಚಿತ್ರದಲ್ಲಿನ ಹಲವು ಸನ್ನಿವೇಶಗಳಿಗೆ ಅವರ ಊಹೆಯಂತೆಯೇ ಶಿಳ್ಳೆ ಚಪ್ಪಾಳೆ ಬಿದ್ದಿವೆ. ಈ ಖುಷಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. " ಈ ಪ್ರೀತಿಯನ್ನು ನಾನು ಸಾಯೋ ತನಕ ಮರೆಯುದಿಲ್ಲ." ಎಂದಿದ್ದಾರೆ.

ಪ್ರೇಕ್ಷಕರು ಮೆಚ್ಚಿದ ಮುಗಿಲ್ ಪೇಟೆ!

ಪ್ರೇಕ್ಷಕರು ಮೆಚ್ಚಿದ ಮುಗಿಲ್ ಪೇಟೆ!

ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು 'ಮುಗಿಲ್‌ ಪೇಟೆ'ಗೆ ಮರುಳಾಗಿದ್ದಾರೆ. ಸಿನಿಮಾ ನೋಡಿ ಚಿತ್ರ ಮಂದಿರದಿಂದ ಹೊರ ಬಂದ ಪ್ರೇಕ್ಷಕರು ಮುಗಿಲ್‌ ಪೇಟೆ ಸಿನಿಮಾ ಸೂಪರ್ ಎಂದಿದ್ದಾರೆ. ಚಿತ್ರದಲ್ಲಿ ಇರುವ ಕೌಟುಂಬಿಕ ಕಥೆ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಿದೆ. ಮೊದಲ ದಿನವೇ ಮುಗಿಲ್ ಪೇಟೆ ಸಿನಿಮಾ ನೋಡಲು ಕೌಟುಂಬಿಕ ಪ್ರೇಕ್ಷಕರು ಬಂದಿದ್ದು ವಿಶೇಷ.

ಮನೋರಂಜನ್ ಸಿನಿಮಾ ಜರ್ನಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ ಮುಗಿಲ್ ಪೇಟೆ!

ಮನೋರಂಜನ್ ಸಿನಿಮಾ ಜರ್ನಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ ಮುಗಿಲ್ ಪೇಟೆ!

ಮುಗಿಲ್ ಪೇಟೆ ಸಿನಿಮಾ ಮನೋರಂಜನ್‌ ಸಿನಿಮಾ ಜರ್ನಿಯಲ್ಲಿ ವಿಭಿನ್ನ ಎನಿಸಿಕೊಂಡಿದೆ. ಮನೋರಂಜನ್ ಐದು ವರ್ಷಗಳಲ್ಲಿ ಮೂರು ಸಿನಿಮಾ ಮಾಡಿದ್ದಾರೆ. ಸಾಹೇಬ ಮತ್ತು ಬೃಹಸ್ಪತಿ ಚಿತ್ರಗಳು ಎರಡು ಬೇರೆ ರೀತಿಯ ಚಿತ್ರಗಳು. ಮುಗಿಲ್‌ ಪೇಟೆ ಸರಳವಾದ ಪ್ರೇಮ ಕಥೆಯೊಂದಿಗೆ, ಕೌಟುಂಬಿಕ ಮೌಲ್ಯವನ್ನೂ ಸಾರುತ್ತೆ. ಹಾಗಾಗಿ ಈ ಚಿತ್ರದಲ್ಲಿ ಮನೋರಂಜನ್‌ ಪಾತ್ರ ಅಬ್ಬರವಿಲ್ಲದೆ ಸಟಲ್ ಆಗಿ ಮೂಡಿ ಬಂದಿದೆ.

More from Filmibeat

English summary
Actor Manoranjan Ravichandran Happy over Audience Reaction On The Mugil Pete Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X