ಪಂಚಭೂತಗಳಲ್ಲಿ ಲೀನವಾದ ಮಾಸ್ಟರ್ ಹಿರಣ್ಣಯ್ಯ
ರಂಗಭೂಮಿಯ ಆಸ್ತಿ ಮಾಸ್ಟರ್ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು.
ಇಂದು ಸಂಜೆ 5 : 30 ರ ಸುಮಾರಿಗೆ, ಬ್ರಾಹ್ಮಣ ಸಂಪ್ರಾದಯದಂತೆ ಅಂತ್ಯಕ್ರಿಯೆ ನಡೆಯಿತು. ಮೂರು ಜನ ಪುರೋಹಿತರಿಂದ ವಿಧಿ ವಿಧಾನ ಕಾರ್ಯಗಳನ್ನು ಮಾಡಲಾಯಿತು. ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುವ ಕಾರಣ, ಸಾಂಕೇತಿಕವಾಗಿ ಪುತ್ರ ಬಾಬು ಹಿರಣ್ಣಯ್ಯ ಅಗ್ನಿ ಸ್ಪರ್ಶ ಮಾಡಿದರು.
ಮಗ ಬಾಬು ಹಿರಣ್ಣಯ್ಯ, ಶಿಷ್ಯಂದಿರು, ಸ್ನೇಹಿತರು ಹಾಗೂ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನರು ಬನಶಂಕರಿ ಚಿತಾಗಾರದ ಬಳಿ ಬಂದಿದ್ದರು. ಇದಕ್ಕೂ ಮುಂಚೆ ಬನಶಂಕರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಂಡಲಾಗಿತ್ತು.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಇಹಲೋಕ ತ್ಯಜಿಸಿದರು.
ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ದರ್ಶನ್, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಸಾಕಷ್ಟು ಜನರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











