twitter
    For Quick Alerts
    ALLOW NOTIFICATIONS  
    For Daily Alerts

    ಭಿಕ್ಷುಕನ ಪಾತ್ರವಾದರೂ ಕೊಡಿ ಮಾಡ್ತೀನಿ: ನಟ ಮಿತ್ರ

    |

    'ಸಿಲ್ಲಿ-ಲಲ್ಲಿ' ಧಾರಾವಾಹಿಯಲ್ಲಿ ಜಾಣೇಶನಾಗಿ ಗುರುತಿಸಿಕೊಂಡು ಆ ನಂತರ ಹಲವು ಸಿನಿಮಾ, ಧಾರಾವಾಗಳಲ್ಲಿ ನಟಿಸಿದ ಮಿತ್ರ ಈಗ ತುಸು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

    'ರಾಗ' ಸಿನಿಮಾದಲ್ಲಿ ನಾಯಕ ನಟರಾಗಿಯೂ ನಟಿಸಿದ್ದ ಮಿತ್ರ ರಂಗಭೂಮಿ ಹಿನ್ನೆಲೆಯಿಂದ ಬಂದವರು, ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಿತ್ರ, ನಾನೊಬ್ಬ ಹೀರೋ ಅಲ್ಲ ನಾನೊಬ್ಬ ಕಲಾವಿದ ಅಷ್ಟೆ, ನನಗೆ ಹೊಂದುವ ಯಾವುದೇ ಪಾತ್ರ ನೀಡಿದರೂ ಮಾಡುವೆ ಅದು ಭಿಕ್ಷುಕನ ಪಾತ್ರವಾದರೂ ಸರಿ ನಟಿಸುವೆ ಪಾತ್ರ ನೀಡಿ ಅಷ್ಟೆ ಎಂದು ಮನವಿ ಮಾಡಿದ್ದಾರೆ.

    ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು ನಟ ಮಿತ್ರ, ನನಗೆ ಮಾತ್ರವಲ್ಲ 300-400 ಸಿನಿಮಾಗಳಲ್ಲಿ ನಟಿಸಿರುವ ನಟರು ಇದ್ದಾರೆ, ಡಾ.ರಾಜ್‌ಕುಮಾರ್ ಜೊತೆ ನಟಿಸಿರುವ ಅದ್ಭುತ ಕಲಾವಿದರು ನಮ್ಮಲ್ಲಿದ್ದಾರೆ ಅವರಿಗೆ ಅವಕಾಶ ನೀಡಿ. ಸಂಭಾವನೆ ಕಡಿಮೆ ಆದರೂ ಪರವಾಗಿಲ್ಲ, ಅವರನ್ನು ಗುರುತಿಸಿ, ಪ್ರೀತಿಯಿಂದ ಮಾತನಾಡಿಸಿ ಒಂದು ಪಾತ್ರ ನೀಡಿ ಎಂದು ಮಿತ್ರ ಮನವಿ ಮಾಡಿದ್ದಾರೆ.

    Actor Mithra Said He Is Ready To Act In Any Character

    ನಾನು ರಂಗಭೂಮಿ ಕಲಾವಿದ, ನಾನು ಈವರೆಗೆ ಎಂದೂ ಖಾಲಿ ಕುಳಿತಿಲ್ಲ. ಅಲ್ಲದೆ ನಾನು ಯಾರನ್ನೂ ಪಾತ್ರಕ್ಕಾಗಿ ಕೇಳಿಕೊಂಡಿಯೂ ಇಲ್ಲ. ಪಾತ್ರಗಳು ತಾವಾಗಿಯೇ ಅರಸಿ ನನಗೆ ಬಂದಿವೆ. ನಾನು ನಾಯಕ ನಟ ಸಹ ಅಲ್ಲ. ನನ್ನ ಕಪ್ಪು ಬಣ್ಣಕ್ಕೆ, ದಡೂತಿ ದೇಹಕ್ಕೆ ಒಪ್ಪಿಗೆ ಆಗುವ ಪಾತ್ರಗಳಿದ್ದರೆ ನೀಡಿ. 'ರಾಗ' ಸಿನಿಮಾದಲ್ಲಿ ಸಹ ನಾನು ನಾಯಕನಲ್ಲ, ಅಲ್ಲಿ ಆ ಕುರುಡನ ಪಾತ್ರ ನಾಯಕ ನಾನಲ್ಲ'' ಎಂದಿದ್ದಾರೆ ಮಿತ್ರ.

    ''ಪರಭಾಷೆ ಕಲಾವಿದರಿಗೆ ಅವಕಾಶ ಕೊಡಿ ಬೇಡ ಎನ್ನುವುದಿಲ್ಲ, ಕಲೆಗೆ ಭಾಷೆ ಇಲ್ಲ, ಚಾರ್ಲಿ ಚಾಪ್ಲಿನ್ ಅನ್ನು ಭಾಷೆಗೆ ಸೀಮಿತಗೊಳಿಸಲಾಗುವುದಿಲ್ಲ. ಆದರೆ ಸ್ಥಳೀಯ ಕಲಾವಿದರಿಗೆ ತುಸು ಹೆಚ್ಚಿನ ಆದ್ಯತೆ ನೀಡಿದರೆ ಇಲ್ಲಿನ ಕಲಾವಿದರು ಉಳಿಯುತ್ತಾರೆ, ಕಲಾವಿದರ ಕುಟುಂಬ ಬೆಳಕು ಕಾಣುತ್ತದೆ. ಅವಕಾಶ ಕೊಟ್ಟ ಅನ್ನದಾತರನ್ನು ನೆನಪಿಸಿಕೊಳ್ಳುತ್ತಾರೆ. ಕಲಾವಿದರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ ಹಾಗಾಗಿ ಇಲ್ಲಿನ ಕಲಾವಿದರಿಗೆ ತುಸು ಹೆಚ್ಚಿನ ಅವಕಾಶ ನೀಡಿ'' ಎಂದು ಮಿತ್ರ ಮನವಿ ಮಾಡಿದ್ದಾರೆ.

    ಅವಕಾಶಕ್ಕಾಗಿ ಅರಸಿಕೊಂಡು ಹೋಗುವ ಪರಿಸ್ಥಿತಿಯನ್ನು ದೇವರು ಕೊಟ್ಟಿಲ್ಲ. ರಂಗಭೂಮಿಯಲ್ಲಿದ್ದಾಗಲೂ ಕರೆದು ಪಾತ್ರ ಕೊಟ್ಟಿದ್ದಾರೆ. ಕರೆದು ಅನ್ನ ಹಾಕಿದ್ದಾರೆ. ನನ್ನನ್ನು ಕಲಾವಿದನಾಗಿ ರಾಜ್ಯದ ಜನತೆಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಕನ್ನಡದಲ್ಲಿ ಈವರೆಗೆ 150 ಸಿನಿಮಾಗಳಲ್ಲಿ ನಟಿಸಿದ್ದೇನೆ. ತುಳುವಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದೀನಿ. ತುಳು ಮತ್ತು ಕೊಂಕಣಿ ನಿರರ್ಗಳವಾಗಿ ಮಾತನಾಡಬಲ್ಲೆ. ಮಲಯಾಳಂ ನನ್ನ ಮಾತೃಭಾಷೆ ಆದರೆ ಈವರೆಗೆ ಆ ಭಾಷೆಯಲ್ಲಿ ನಟಿಸಲಾಗಿಲ್ಲ. ಮುಂದೆ ನಟಿಸುವ ಅವಕಾಶ ಸಿಗಬಹುದೇನೋ ನೋಡೋಣ. ಯಾವ ಭಾಷೆಯಾದರೂ ಸರಿ ನಾನು ಅಭಿನಯಿಸಲು ಸಿದ್ಧವಾಗಿದ್ದೇನೆ ಅವಕಾಶ ಕೊಡಬೇಕಷ್ಟೆ'' ಎಂದಿದ್ದಾರೆ ಮಿತ್ರ.

    'ಸಿಲ್ಲಿ-ಲಲ್ಲಿ' ಧಾರಾವಾಹಿಯಲ್ಲಿ ಯಶ್ ಹಾಗೂ ಗಣೇಶ್ ನಟಿಸಿದ್ದನ್ನು ನೆನಪಿಸಿಕೊಂಡ ಮಿತ್ರ. ಅವರಿಬ್ಬರನ್ನೂ ನಾನು ಬಹಳ ಕೆಳಹಂತದಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರಿಬ್ಬರೂ 'ಸಿಲ್ಲಿ-ಲಲ್ಲಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇಬ್ಬರೂ ಬಹಳ ದೊಡ್ಡ ಸ್ಟಾರ್‌ಗಳಾದರು. ಇಬ್ಬರೂ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು ಎಂದು ಹೊಗಳಿದರು ನಟ ಮಿತ್ರ.

    ಮಿತ್ರ ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ಪೋಷಕ ನಟ, ಹಾಸ್ಯ ನಟನ ಪಾತ್ರಗಳಲ್ಲಿ ನಟಿಸಿದ್ದಾರೆ. 'ರಾಗ' ಹೆಸರಿನ ಸಿನಿಮಾದಲ್ಲಿ ನಾಯಕ ನಟನಾಗಿಯೂ ಮಿತ್ರ ನಟಿಸಿದ್ದಾರೆ. ಆ ಸಿನಿಮಾಕ್ಕೆ ಅವರೇ ಬಂಡವಾಳ ಸಹ ಹೂಡಿದ್ದರು. ಸಿನಿಮಾದಲ್ಲಿ ಮಲಯಾಳಂ ಸುಂದರಿ ಭಾಮಾ ನಾಯಕಿಯಾಗಿ ನಟಿಸಿದ್ದರು. ಸಿನಿಮಾವನ್ನು ಬಹಳ ಗುಣಮಟ್ಟದಿಂದ ಚಿತ್ರೀಕರಿಸಲಾಗಿತ್ತು, ಸಿನಿಮಾದ ಹಾಡುಗಳು ಸಹ ಸಖತ್ ಹಿಟ್ ಆಗಿದ್ದವು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.

    English summary
    Actor Mithra said he is ready to act in any type of character. He said I want chance I can play in any character.
    Monday, September 27, 2021, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X