Vidhyapati: ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಸಿನಿಮಾಗಾಗಿ ಕರಾಟೆ ಕಿಂಗ್ ಆದ ನಟ ನಾಗಭೂಷಣ್

ವರ್ಷದ ಮೊದಲ ಹಬ್ಬ ಸಂಕ್ರಾಂತಿ ಕಳೆಗಟ್ಟಿದೆ. ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ತೆಲುಗು ಸಿನಿರಂಗದಲ್ಲಿ ಸಾಲು ಸಾಲಿ ಸಿನಿಮಾಗಳು ಬಿಡುಗಡೆಯಾಗಿವೆ. ಹಲವು ಸಿನಿಮಾಗಳು ಘೋಷಣೆಯಾಗಿವೆ. ಕನ್ನಡದಲ್ಲಿಯೂ ಕೂಡ ಸುಗ್ಗಿ ಸಂಭ್ರಮ ಕಳೆಗಟ್ಟಿದ್ದು, ಡಾಲಿ ಪಿಕ್ಷರ್ಸ್ ಹೊಸ ಸಿನಿಮಾ ಘೋಷಿಸಿದೆ.

ಸಂಕ್ರಾಂತಿ ಸಂಭ್ರಮವನ್ನು ದುಪ್ಪಟ್ಟು ಮಾಡಲು ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಹೊಸ ಸಿನಿಮಾಕ್ಕೂ ಟಗರು ಪಲ್ಯ ನಾಯಕ ನಾಗಭೂಷಣ ನಾಯಕರಾಗಿದ್ದಾರೆ.

Actor Nagabhushana Became Vidhyapati for Dhananjaya Productions 4th Film

ಡಾಲಿ ಪಿಕ್ಚರ್ಸ್ ನಾಲ್ಕನೇ ಸಿನಿಮಾ 'ವಿದ್ಯಾಪತಿ'

'ಟಗರು ಪಲ್ಯ' ಸಿನಿಮಾ ಮೂಲಕ ಕಳೆದ ವರ್ಷ ಡಾಲಿ ಪಿಚ್ಚರ್ಸ್ ಪ್ರೇಕ್ಷಕರಿಗೆ ಮನರಂಜನೆಯ ಬಾಡೂಟ ಬಡಿಸಿತ್ತು. ಹೊಸ ನಿರ್ದೇಶಕರಿಗೆ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ಜನತೆಗೆ ಸದಾಭಿರುಚಿ ಸಿನಿಮಾಗಳನ್ನು ನೀಡುವಲ್ಲಿ ಡಾಲಿ ಪಿಚ್ಚರ್ಸ್ ಹೆಜ್ಜೆ ಇಡುತ್ತಿದೆ. ಈಗಾಗಲೇ ಮೂರು ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿರುವ ಡಾಲಿ ಪಿಕ್ಷರ್ಸ್ ನಾಲ್ಕನೇ ಸಿನಿಮಾ ಘೋಷಿಸಿದೆ.

ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಸಿನಿಮಾ 'ವಿದ್ಯಾಪತಿ' ಘೋಷಣೆಯಾಗಿದೆ. ಸಿನಿಮಾದ ಫಸ್ಟ್ ಲುಕ್ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದೆ. ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

'ವಿದ್ಯಾಪತಿ' ಟೀಸರ್ ವಿಡಿಯೋ ಹಂಚಿಕೊಂಡಿರುವ ಡಾಲಿ ಪಿಕ್ಚರ್ಸ್, " 'ಇಕ್ಕಟ್'ನಲ್ಲಿ ಮನೆಯವರದ್ದೇ ಕಿತಾಪತಿ.. 'ಟಗರುಪಲ್ಯ'ದಲ್ಲಿ ಊರೌರ‍್ದೆಲ್ಲಾ ಜಟಾಪಟಿ... ಈ ಸತಿ ಏನ್ ವಿಷಯ 'ವಿದ್ಯಾಪತಿ'. ಮಕರ ಸಂಕ್ರಾತಿಯ ಶುಭಾಶಯಗಳು" ಎಂದು ಶೀರ್ಷಿಕೆ ಬರೆದಿದೆ. ಈ ವಿಡಿಯೋ ಮತ್ತು ಪೋಸ್ಟರ್‌ನಲ್ಲಿ ನಾಯಕ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

ವಿದ್ಯಾಪತಿ

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಸಿನಿಮಾದ ಶೂಟಿಂಗ್ ಜನವರಿ ಮೂರನೇ ವಾರದಿಂದ ಶುರುವಾಗಲಿದೆ. ನಟ ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ.

More from Filmibeat

English summary
Actor Nagabhushana's new film Vidhyapati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X