ಗಲ್ಲಾ ಪೆಟ್ಟಿಗೆಗೆ ಕನ್ನ ಹಾಕಿದ್ದ ಗದರ್ 2, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ಟೀಕಿಸಿದ ನಟ ನಾಸಿರುದ್ದೀನ್ ಶಾ!

ಬಾಲಿವುಡ್‌ನ ಖ್ಯಾತ ನಟ ನಾಸಿರುದ್ದೀನ್ ಶಾ ಇತ್ತೀಚೆಗೆ 'ಕೇರಳ ಸ್ಟೋರಿ', 'ಗದರ್ 2' ಮತ್ತು 'ದಿ ಕಾಶ್ಮೀರ್ ಫೈಲ್ಸ್' ನಂತಹ ಚಲನಚಿತ್ರಗಳ ಜನಪ್ರಿಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಸಿನಿಮಾಗಳು ಹಾನಿಕಾರ ಎಂದು ಕಟುವಾಗಿ ಟೀಕಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ಅನ್ನಿ ಡಿಯೋಲ್ ಅಭಿನಯದ ಗದರ್ 2 ಸಿನಿಮಾ ಬರೋಬ್ಬರಿ 500 ಕೋಟಿಗಳನ್ನು ಬಾಚಿಕೊಂಡಿದೆ. ಈ ವರ್ಷ ಶಾರುಖ್ ಖಾನ್‌ ಅವರ ಪಠಾಣ್ ಬಳಿಕ ಬಾಲಿವುಡ್‌ನ ಮತ್ತೊಂದು ಹಿಟ್ ಆಗಿತ್ತು. ಆದರೆ, ಇಂತಹ ಸಿನಿಮಾಗಳ ಕಥೆ, ವಿಚಾರಗಳು ತುಂಬಾ ಹಾನಿಕಾರಕ ಎಂದು ನಟ, ನಿರ್ದೇಶಕ ನಾಸಿರುದ್ದೀನ್ ಶಾ ಕಿಡಿಕಾರಿದ್ದಾರೆ.

Actor Naseeruddin Shah slams popularity of films like Kerala Story, Gadar 2, The Kashmir Files

ನಾಸಿರುದ್ದೀನ್ ಶಾ 17 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಪ್ರಸ್ತುತ ತಮ್ಮದೆ ನಿರ್ದೇಶನದ 'Man Woman Man Woman' ಸಿನಿಮಾ ಮಾಡಿದ್ದಾರೆ. ಅವರ ಪತ್ನಿ ರತ್ನಾ ಪಾಠಕ್ ಶಾ ಸಹ ನಟಿಸಿದ್ದಾರೆ. ಫ್ರೀ ಪ್ರೆಸ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ, ಬಾಲಿವುಡ್‌ನಲ್ಲಿ ಚಲನಚಿತ್ರ ನಿರ್ಮಾಣ ಬದಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಾಸಿರುದ್ದೀನ್ ಶಾ ಅವರು ಈಗ ಸಿನಿಮಾಗಳು ಜನಪ್ರಿಯತೆಯು ಜಿಂಗೊಯಿಸಂನಿಂದ ಅಂದರೆ ಅಬ್ಬರದ ದೇಶಭಕ್ತಿ ಪ್ರೇರೇಪಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವು ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ. "ಈಗ ನೀವು ಅತೀವ ದೇಶಪ್ರೇಮಿ ಆಗಿದ್ದೀರಿ ಎಂದರೇ, ನೀವು ಹೆಚ್ಚು ಜನಪ್ರಿಯರಾಗುತ್ತೀರಿ. ಏಕೆಂದರೆ ಈಗ ಈ ದೇಶವನ್ನು ಆಳುತ್ತಿರುವುದೇ ಅದು. ನಿಮ್ಮ ದೇಶವನ್ನು ಪ್ರೀತಿಸಿದರೇ ಈಗ ಸಾಕಾಗುವುದಿಲ್ಲ. ಅದರ ಬಗ್ಗೆ ಘೋಷಿಸಬೇಕು. ಇಲ್ಲದ ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಬೇಕು" ಎಂದು ಆತಂಕ ಹೊರಹಾಕಿದ್ದಾರೆ.

Actor Naseeruddin Shah slams popularity of films like Kerala Story, Gadar 2, The Kashmir Files

"ಈ ಜನರು ಮಾಡುತ್ತಿರುವುದು ತುಂಬಾ ಹಾನಿಕಾರಕ . ವಾಸ್ತವವಾಗಿ, 'ಕೇರಳ ಸ್ಟೋರಿ' ಮತ್ತು 'ಗದರ್ 2' ನಂತಹ ಚಲನಚಿತ್ರಗಳನ್ನು ನಾನು ನೋಡಿಲ್ಲ ಆದರೆ ಅವು ಏನೆಂದು ನನಗೆ ತಿಳಿದಿದೆ. ಸುಧೀರ್ ಮಿಶ್ರಾ, ಅನುಭವ್ ಸಿನ್ಹಾ ಮತ್ತು ಹನ್ಸಲ್ ಮೆಹ್ತಾ ಅವರಂತಹ ನಿರ್ದೇಶಕರ ತಮ್ಮ ಕಾಲದ ಸತ್ಯವನ್ನು ಬಿಂಬಿಸುವ ಚಲನಚಿತ್ರಗಳು ಹೆಚ್ಚು ಜನರ ಗಮನಕ್ಕೆ ಬರುವುದಿಲ್ಲ" ಎಂದು ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.

"ಕಾಶ್ಮೀರ ಫೈಲ್ಸ್" ನಂತಹ ಚಲನಚಿತ್ರಗಳು ಬಹಳ ಜನಪ್ರಿಯವಾಗಿವೆ. ಆದರೆ ಸುಧೀರ್ ಮಿಶ್ರಾ, ಅನುಭವ್ ಸಿನ್ಹಾ ಮತ್ತು ಹನ್ಸಲ್ ಮೆಹ್ತಾ ಅವರು ತಮ್ಮ ಕಾಲದ ಸತ್ಯವನ್ನು ಬಿಂಬಿಸಲು ಪ್ರಯತ್ನಿಸುತ್ತಿದ್ದು, ಜನ ಅಂತಹ ಚಲನಚಿತ್ರಗಳನ್ನು ನೋಡದಿರುವುದು ಗೊಂದಲದ ಸಂಗತಿಯಾಗಿದೆ. ಆದರೆ ಈ ನಿರ್ದೇಶಕರು ಮುಖ್ಯವಾಗಿದ್ದಾರೆ" ಎಂದು ಹೇಳಿದ್ದಾರೆ.

ಗದರ್ 2

ಆಗಸ್ಟ್ 11 ರಂದು ಬಿಡುಗಡೆಯಾದ ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರ ಈ ವರ್ಷದ ಬಹುದೊಡ್ಡ ಹಿಟ್ ಚಿತ್ರಗಳಲ್ಲಿ ಒಂದು. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವು ಥಿಯೇಟರ್‌ಗಳಲ್ಲಿ ಮೊದಲ ದಿನದಂದು 40 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ 2 ಮತ್ತು ಪಠಾಣ್‌ ಅಬ್ಬರದಂತೆಯೇ ಈ ಸಿನಿಮಾ ಕೂಡ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ.

ಐತಿಹಾಸಿಕ ಗದರ್ ಚಿತ್ರದ ಮುಂದುವರಿದ ಭಾಗವಾಗಿದ್ದ ಈ ಸಿನಿಮಾ ಮೊದಲ ವಾರದಲ್ಲಿ ಗದರ್ 2 ಸಿನಿಮಾ 284.63 ಕೋಟಿ ಗಳಿಸಿದರೆ, ಎರಡನೇ ವಾರದಲ್ಲಿ 134.47 ಕೋಟಿ ಮತ್ತು ಮೂರನೇ ವಾರದಲ್ಲಿ 63.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಸನ್ನಿ ಡಿಯೋಲ್ ತಾರಾ ಸಿಂಗ್ ಮತ್ತು ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Naseeruddin Shah slams popularity of films like Kerala Story, Gadar 2, The Kashmir Files.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X