"ನಮ್ಮ ಅಕ್ಕ ಕಾಣೆ ಆಗಿದ್ದಾರೆ.. ಕಂಡರೆ ಕೂಡಲೇ ತಿಳಿಸಿ": ನವೀನ್ ಕೃಷ್ಣ

ನಟ ನವೀನ್ ಕೃಷ್ಣ ಸಹೋದರಿ ನೀತಾ ಪವಾರ್ ಕಳೆದ 3 ದಿನಗಳಿಂದ ಕಾಣೆ ಆಗಿದ್ದಾರೆ. ಯಾರಿಗಾದರೂ ಮಾಹಿಸಿ ಸಿಕ್ಕಿದರೆ ತಿಳಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ನವೀನ್ ಕೃಷ್ಣ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಪುತ್ರ ನವೀನ್ ಕೃಷ್ಣ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಾಯಕರಾಗಿಯೂ ನವೀನ್ ಕೃಷ್ಣ ಅದೃಷ್ಟ ಪರೀಕ್ಷಿಸಿಕೊಂಡಿದ್ದರು.

Actor Naveen Krishnas sister Neeta Pawar is missing; Actor posted on social media

ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17ರಂದು ಕಾಣೆ ಆಗಿದ್ದಾರೆ. ಅಂದು ಮಧ್ಯಾಹ್ನ 2.57 ನಿಮಿಷಕ್ಕೆ ಮನೆಯಿಂದ ಹೊರಗೆ ಹೋದವರು ಇನ್ನು ಬಂದಿಲ್ಲ. ಈ ಮೆಸೇಜ್‌ ಅನ್ನು ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿಮಗೆ ಆಕೆಯ ಬಗ್ಗೆ ತಿಳಿದರೆ, ಎಲ್ಲಿದ್ದಾರೆ ಎಂದು ಗೊತ್ತಾದರೆ ಈ ನಂಬರ್‌ಗಳಿಗೆ ಕರೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ಅನಂತ್- 6364830333, ಅರುಣ್- 9886624340, ಶ್ವೇತಾ- 8861526185, ಸುನಿಲ್- 988652521 ನಂಬರ್‌ಗಳಿಗೆ ಕರೆ ಮಾಡಿ ಎಂದಿದ್ದಾರೆ. ಈ ಬಗ್ಗೆ ನಟ ನವೀನ್ ಕೃಷ್ಣ ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿತ್ತು. "ನೀತಾ ಪವಾರ್ ನಮ್ಮ ಪತ್ನಿ ಅಶ್ವಿನಿ ಅವರ ಸಹೋದರಿ. 3 ದಿನಗಳಿಂದ ಕಾಣೆಯಾಗಿದ್ದಾರೆ. ಹುಡುಕುತ್ತಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಬಂದ ನವೀನ್ ಕೃಷ್ಣ ಮುಂದೆ 'ಕದಂಬ', 'ಅಮೃತವಾಣಿ', ಧಿಮಾಕು, ಶ್ರೀಹರಿಕಥೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಮೂಲಕ ಶೀಘ್ರದಲ್ಲೇ ವೀಕ್ಷಕರನ್ನು ರಂಜಿಸಲು ಬರ್ತಿದ್ದಾರೆ.

More from Filmibeat

English summary
Actor Naveen Krishna's sister Neeta Pawar is missing; Actor posted on social media. Naveen Krishna Requested to contact him if there is any information regarding his sister. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X