twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಕಾಲದಲ್ಲೊಂದು ಅಂತರ್ಜಾತಿ ವಿವಾಹ: ಸಾಕ್ಷಿಯಾದ ನಟ

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ಮದುವೆ ಮಾಡುವುದೇ ಕಷ್ಟವಾಗಿದೆ. ಅಂಥಹುದರಲ್ಲಿ ಅಂತರ್ಜಾತಿ ವಿವಾಹವೊಂದು ಇಂದು ನಡೆದಿದೆ.

    Recommended Video

    Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Get Adjusted with Corona

    ಬೇರೆ ಬೇರೆ ಜಾತಿಗೆ ಸೇರಿದ ಅರ್ಜುನ್ ಮತ್ತು ನಂದಿನಿ ಅವರದ್ದು 10 ವರ್ಷಗಳ ಪ್ರೀತಿ. ಆದರೆ ಬೇರೆ ಜಾತಿ ಎಂಬ ಕಾರಣಕ್ಕೆ ಎರಡೂ ಮನೆಯವರಿಂದ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿತ್ತು.

    ಮನೆಯವರಿಲ್ಲದೆ ಮದುವೆಯಾಗುವುದು ಬೇಡ ಎಂದು ಕಾದ ಆ ಜೋಡಿ, ನಿರಂತರ 10 ವರ್ಷಗಳ ಪ್ರಯತ್ನದ ನಂತರ ಈಗ ಕೊನೆಗೂ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅದ್ಧೂರಿಯಾಗಿ ಮದುವೆಯಾಗುವಂತಿಲ್ಲ

    ಅದ್ಧೂರಿಯಾಗಿ ಮದುವೆಯಾಗುವಂತಿಲ್ಲ

    ಮದುವೆಗೆ ಹಿರಿಯರು ಒಪ್ಪಿದರಾದರೂ ಅದ್ಧೂರಿಯಾಗಿ ಮದುವೆ ಆಗಲು ಅವಕಾಶವಿಲ್ಲದ ಕಾರಣ ಸರ್ಕಾರಿ ನಿಯಮಗಳಂತೆ ಸರಳವಾಗಿ ಮದುವೆ ಆದರು.

    ಉಳಿತಾಯದ ಹಣ ಸಿಎಂ ಪರಿಹಾರ ನಿಧಿಗೆ

    ಉಳಿತಾಯದ ಹಣ ಸಿಎಂ ಪರಿಹಾರ ನಿಧಿಗೆ

    ಈ ಸರಳ ಮದುವೆ ಕಾರಣ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ ಈ ಯುವ ಜೋಡಿ.

    ಚೆಕ್ ಸ್ವೀಕರಿಸಿದ ನಟ ನವೀನ್ ಕೃಷ್ಣ

    ಚೆಕ್ ಸ್ವೀಕರಿಸಿದ ನಟ ನವೀನ್ ಕೃಷ್ಣ

    ಖ್ಯಾತ ನಟರಾದ ನವೀನ್ ಕೃಷ್ಣ ಅವರು ಈ ಮದುವೆಗೆ ಆಗಮಿಸಿ ಆಶೀರ್ವದಿಸಿದರಲ್ಲದೆ ಆ ₹50000 ಗಳ ಪರಿಹಾರದ ಚೆಕ್ ಅನ್ನು ದಂಪತಿಗಳಿಂದ ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸಿದರು. ಹಾಗೆ ನೂರು ಬಡ ಜನರಿಗೆ ಆಹಾರದ ಕಿಟ್ ಗಳನ್ನು ಸಹ ವಿತರಿಸಿದರು.

    ಸರಳವಾಗಿ ನಡೆದ ನಿಖಿಲ್ ಮದುವೆ

    ಸರಳವಾಗಿ ನಡೆದ ನಿಖಿಲ್ ಮದುವೆ

    ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಸೀಮಿತ ಜನರ ಉಪಸ್ಥಿತಿಯಲ್ಲಿ ಸರಳವಾಗಿಯೇ ಮದುವೆ ಆಗಬೇಕಿದೆ. ಕುಮಾರಸ್ವಾಮಿ ಅವರೂ ಸಹ ತಮ್ಮ ಪುತ್ರ ನಿಖಿಲ್ ಮದುವೆಯನ್ನು ಸರಳವಾಗಿಯೇ ನೆರವೇರಿಸಿದರು.

    English summary
    Actor Naveen Krishna supported inter caste marriage. He receive cheque from newly wed couple and promise them to give it to CM relief fund.
    Sunday, May 17, 2020, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X