ಸೆನ್ಸೇಷನಲ್ ಸುದ್ದಿಯನ್ನು 'ಬಹಿರಂಗ' ಪಡಿಸಿದ ಕ್ವಾಟ್ಲೆ ಸತೀಶ
'ಲೂಸಿಯಾ' ಖ್ಯಾತಿಯ ನಾಯಕ ನಿನಾಸಂ ಸತೀಶ್ ಅಭಿಮಾನಿಗಳಿಗೆ ಸೆನ್ಸೇಷನಲ್ ಸುದ್ದಿಯೊಂದನ್ನು ಹೊರತಂದಿದ್ದಾರೆ. ಅದೇನು ಅಂತೀರಾ ನಮ್ ಕ್ವಾಟ್ಲೆ ಸತೀಶ ಇದೀಗ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.
ಅಂದಹಾಗೆ ಸತೀಶ್ ನಿನಾಸಂ ಅವರಿಗೆ ತುಮಕೂರು ಶಿರಾದ ಹುಡುಗಿ ಸುಪ್ರೀತಾ ಎಂಬುವವರ ಜೊತೆ ಒಂದು ವರ್ಷದ ಹಿಂದೆಯೇ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದು, ಅನಿವಾರ್ಯ ಕಾರಣಗಳಿಂದ ಮದುವೆ ವಿಚಾರವನ್ನು ಮಾಧ್ಯಮದಿಂದ ದೂರ ಇರಿಸಿದ್ದರು. [ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್]

ಇದೀಗ ನಿನಾಸಂ ಸತೀಶ್ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಸೀತಾ ಸರ್ಕಲ್ ನ ವಿನಾಯಕ ನರ್ಸಿಂಗ್ ಹೋಮ್ ನಲ್ಲಿ ನಿನಾಸಂ ಸತೀಶ್ ಹೆಂಡತಿ ಸುಪ್ರೀತಾ ಅವರು ಹೆಣ್ಣು ಮಗುವಿಗೆ ಭಾನುವಾರ (ಜುಲೈ26) ಜನ್ಮ ನೀಡಿದ್ದಾರೆ.
ನಾರ್ಮಲ್ ಡೆಲಿವರಿ ಆಗಿರುವುದರಿಂದ ಈಗಾಗಲೇ ತಾಯಿ ಮಗು ಆರಾಮವಾಗಿದ್ದಾರೆ ಎನ್ನುವ ವಿಚಾರವನ್ನು ಸ್ವತಃ ನಿನಾಸಂ ಸತೀಶ್ ಅವರೇ ಖಾಸಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ.[ವಿಮರ್ಶೆ: 'ಅಂಜದ ಗಂಡು' ಸೂಪರ್ ಕಲಾ]
ಸತೀಶ್ ವಯಸ್ಸಾದ ತಾಯಿಗೋಸ್ಕರ ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದರು. ಆದರೆ ತಮಗೆ ಮದುವೆಯಾಗಿರುವ ವಿಚಾರವನ್ನು ತಮ್ಮ ಮುಂಬರುವ ಚಿತ್ರ 'ರಾಕೆಟ್' ತೆರೆ ಕಂಡ ಮೇಲೆ ಬಹಿರಂಗ ಪಡಿಸುವ ಇರಾದೆಯಲ್ಲಿದ್ದರು. ಆದರೆ ಇಂದು ಮಗುವಿನ ತಂದೆಯಾಗುವ ಮೂಲಕ ತಮಗೆ ಈ ಮೊದಲೇ ಮದುವೆಯಾಗಿದ್ದ ವಿಚಾರವನ್ನು ಎಲ್ಲರ ಮುಂದೆ ಬಹಿರಂಗಗೊಳಿಸಿದ್ದಾರೆ.

ನೆನ್ನೆ ಮಧ್ಯಾಹ್ನ ದ ಹೊತ್ತಿಗೆ ಸುಪ್ರೀತಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಇಂದು ಡೆಲಿವರಿ ಆಗುವವರೆಗೂ ನಿನಾಸಂ ಸತೀಶ್ ಅವರು ತಮ್ಮ ಹೆಂಡತಿ ಜೊತೆ ಆಸ್ಪತ್ರೆಯಲ್ಲಿ ಕಳೆದು ಹೆಂಡತಿ ಮಗುವಿನ ಆರೈಕೆ ಮಾಡುತ್ತಿದ್ದಾರೆ.
ನಾನು ಇಲ್ಲಿ ತನಕ ಎಲ್ಲೂ ಎಡವಿದ್ದಿಲ್ಲ ಮುಂದೆನು ಅಂತಹ ಕೆಲಸ ಮಾಡುವುದಿಲ್ಲ. ಇದೀಗ ನಾನು ಈ ಸ್ಥಾನದಲ್ಲಿ ನಿಂತಿದ್ದೇನೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಂದರೆ ನನ್ನ ಅಭಿಮಾನಿಗಳು. ನಾನೀಗ ಸಂತೋಷವಾಗಿ ಇದ್ದೇನೆ, ಎಲ್ಲರ ಪ್ರೀತಿ ಹಾರೈಕೆ ಯಾವಾಗಲೂ ನನ್ನ ಮೇಲಿರಲಿ ಅಂತ ಸತೀಶ್ ಅವರು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಅದೇನೆ ಇರಲಿ ಒಟ್ಟಿನಲ್ಲಿ ಮುದ್ದಾದ ಮಗುವಿನ ತಂದೆಯಾದ ಕ್ವಾಟ್ಲೆ ಸತೀಶ್ ಅವರಿಗೆ ನಮ್ಮ ಕಡೆಯಿಂದ ಹಾರ್ದಿಕ ಶುಭಾಶಯಗಳು.


Click it and Unblock the Notifications











