ಸುಮಲತಾ ಪರ ಪ್ರಚಾರಕ್ಕೆ ಹೊರಟ ನೆನಪಿರಲಿ ಪ್ರೇಮ್
Recommended Video

ರಾಜ್ಯದ ಜನರ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ನಾಳೆಯಿಂದ ಚಿತ್ರರಂಗದ ಸಾಕಷ್ಟು ಗಣ್ಯರು ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ಹೊರಡುತ್ತಿದ್ದಾರೆ. ದರ್ಶನ್, ಯಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದಿಂದ ಸಾಕಷ್ಟು ಮಂದಿ ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.
ಸ್ಟಾರ್ ನಟ ಪ್ರಚಾರಕರ ಪಟ್ಟಿಗೆ ಈಗ ನಟ ನೆನಪಿರಲಿ ಪ್ರೇಮ್ ಕೂಡ ಸೇರಿಕೊಂಡಿದ್ದಾರೆ. ಸುಮಲತಾ ಪರ ಪ್ರಚಾರಕ್ಕೆ ಹೋಗುವುದಾಗಿ ನಟ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ನಾಳೆಯಿಂದ ಸುಮಲತಾ ಅಕ್ಕನ ಪರ ಪ್ರಚಾರಕ್ಕೆ ಹೋಗುತ್ತಿದ್ದೀನಿ. ನಿಮ್ಮೆಲ್ಲರ ಸಹಕಾರ ಸುಮಲತಾ ಅಕ್ಕನಿಗೆ ಬೇಕು'' ಎಂದು ಪ್ರೇಮ್ ಕೇಳಿಕೊಂಡಿದ್ದಾರೆ.
ಪ್ರೇಮ್ ಚುನಾವಣಾ ಪ್ರಚಾರ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಇಳಿದ್ದರು. ಆದ್ರೆ, ಯಾವುದೇ ಪಕ್ಷದ ಪರ ಗುರುತಿಸಿಕೊಳ್ಳದ ಪ್ರೇಮ್ ಆಪ್ತರ ಪರ ಮಾತ್ರ ಪ್ರಚಾರ ಮಾಡಿದ್ದರು.

ಈ ಬಾರಿ ಕೂಡ ಸುಮಲತಾ ಅವರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟು ಸುಮಲತಾ ಅವರಿಗಾಗಿ ದರ್ಶನ್ ಮತ್ತು ಯಶ್ ಜೊತೆ ಪ್ರಚಾರಕ್ಕೆ ಧುಮುಕ್ಕಿದ್ದಾರೆ. ನಟ ಪ್ರೇಮ್ ಜೊತೆಗೆ ಇನ್ನು ಯಾರೆಲ್ಲ ನಟರು ಭಾಗಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











