ಸಿದ್ಧಾರ್ಥ ಸಾವು ನಂಬಲು ಅಸಾಧ್ಯ ಎಂದ ನಿಖಿಲ್ ಕುಮಾರ್

Recommended Video

V G Siddhartha : ದುಃಖದಲ್ಲಿದ್ದಾರೆ ನಿಖಿಲ್ ಕುಮಾರಸ್ವಾಮಿ | FILMIBEAT KANNADA

ಕೆಫೆ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ಸಿದ್ಧಾರ್ಥ ಸಾವು ಅನೇಕರಿಗೆ ಆಘಾತ ಉಂಟು ಮಾಡಿದೆ. ನಟ ನಿಖಿಲ್ ಕುಮಾರ್ ಕೂಡ ಈ ಘಟನೆಯಿಂದ ದುಃಖದಲ್ಲಿ ಇದ್ದಾರೆ.

ಸಿದ್ಧಾರ್ಥ ಅವರ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ನಿಖಿಲ್ ''ನಮ್ಮ ರಾಜ್ಯದ ಹೆಮ್ಮೆಯ ಉದ್ಯಮಿ, ಸಾವಿರಾರು ಕನ್ನಡಿಗರ ಕುಟುಂಬಗಳಿಗೆ ಉದ್ಯೋಗ ನೀಡಿದ್ದ ಸಿದ್ದಾರ್ಥ ಅವರ ಜೀವನ ಈ ರೀತಿ ಅಂತ್ಯವಾಗಿದ್ದನ್ನು ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ.'' ಎಂದಿದ್ದಾರೆ.

ಸಿದ್ಧಾರ್ಥರವರ ಅಗಲಿಕೆ ವೈಯಕ್ತಿಕವಾಗಿ ನಿಖಿಲ್ ಕುಮಾರ್ ರಿಗೆ ತೀರ ದುಃಖವನ್ನುಂಟು ಮಾಡಿದೆಯಂತೆ. ''ಈ ಘೋರ ದುರಂತದ ಆಘಾತವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ'' ಎಂದು ನಿಖಿಲ್ ಪ್ರಾರ್ಥಿಸಿದ್ದಾರೆ.

Actor Nikhil Kumar Condolences For Siddhartha Death

ಚಿತ್ರರಂಗದ ಸಾಕಷ್ಟು ಕಲಾವಿದರು ಸಿದ್ಧಾರ್ಥ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್, ಉಪೇಂದ್ರ, ಸುಮಲತಾ ಅಂಬರೀಶ್, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥರಿಗೆ ನಮನ ಸಲ್ಲಿಸಿದ್ದಾರೆ.

More from Filmibeat

English summary
Kannada actor Nikhil Kumar condolences for cafe coffee day owner Siddhartha death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X