ರೇವತಿ ಜೊತೆ ಎಂಗೇಜ್ ಆದ ನಿಖಿಲ್: ಅದ್ದೂರಿ ಸಮಾರಂಭದ ವಿಶೇಷತೆಗಳಿವು

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಇದ್ದಾರೆ. ಕುಟುಂಬದವರು ಹುಡುಕಿದ ಹುಡುಗಿ ರೇವತಿ ಜೊತೆ ನಿಖಿಲ್ ಇಂದು ಎಂಗೇಜ್ ಆಗಿದ್ದಾರೆ. ಇಂದು ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಖಿಲ್, ರೇವತಿಗೆ ಉಂಗುರ ತೊಡಿಸುವ ಮೂಲಕ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ.

ಇಂದು ಬೆಳಗ್ಗೆ 10.30ರ ಮುಹೂರ್ತದಲ್ಲಿ ನಿಖಿಲ್ ಮತ್ತು ರೇವತಿ ಇಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಒಕ್ಕಲಿಗರ ಸಂಪ್ರದಾಯಂತೆ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 6 ಸಾವಿರಕ್ಕು ಹೆಚ್ಚು ಜನಭಾಬಾಗಿಯಾಗುವ ಸಾಧ್ಯತೆ ಇದೆ.

ಬಿಳಿ ಬಣ್ಣದ ಥೀಮ್ ವಿಶೇಷ

ಬಿಳಿ ಬಣ್ಣದ ಥೀಮ್ ವಿಶೇಷ

ಬಿಳಿ ಬಣ್ಣದ ಥೀಮ್ ನಲ್ಲಿ ನಿಶ್ಚಿತಾರ್ಥದ ಹಾಲ್ ಸಿಂಗಾರಗೊಂಡಿರುವುದು ವಿಶೇಷವಾಗಿತ್ತು. ನಿಖಿಲ್ ಮತ್ತು ರೇವತಿ ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಕಾಸ್ಟ್ಯೂಮ್ ಜೊತೆಗೆ ಮಂಟಪ, ಡೆಕೋರೇಶನ್, ಹೂ, ಕಾರ್ಪೆಟ್ ಸೇರಿದಂತೆ ಪ್ರತಿಯೊಂದು ಸಹ ಬಿಳಿ ಬಣ್ಣದಿಂದ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿತು. ಶ್ವೇತ ವರ್ಣದಲ್ಲಿ ಅಲಂಕಾರ ಮಾಡಬೇಕು ಎನ್ನುವುದು ನಿಖಿಲ್ ಆಸೆಯಾಗಿತ್ತಂತೆ.

ಗಮನ ಸೆಳೆದ ಅಂಶಗಳು

ಗಮನ ಸೆಳೆದ ಅಂಶಗಳು

ಗಣಪತಿ ಪೂಜೆ, ಕುಂಕುಮ ಶಾಸ್ತ್ರ, ಇಬ್ಬರು ಕುಟುಂಬದವರನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರ ತಂಡ ನಿಶ್ಚಿತಾರ್ಥದಲ್ಲಿ ಗಮನ ಸಳೆಯುತಿತ್ತು. ಕೇರಳದ ಚಂಡೆ ಬಾರಿಸುವ ಮೂಲಕ ಹುಡುಗ-ಹುಡುಗಿಯನ್ನು ಬರಮಾಡಿಕೊಳ್ಳಲಾಯಿತು. ಹೂಮಳೆ ಸುರಿಸಿ ನಿಖಿಲ್ ಮತ್ತು ರೇವತಿಯನ್ನು ವೇದಿಕೆ ಮೇಲೆ ಬರಮಾಡಿಕೊಳ್ಳಲಾಯಿತು. ಉಂಗುರ ಬದಲಾಯಿಸಿಕೊಂಡ ನಂತರ ವಿಶೇಷವಾದ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ನಿಶ್ಚಿತಾರ್ಥ ಸಂಭ್ರಮದಲ್ಲಿ ಪವರ್ ಸ್ಟಾರ್

ನಿಶ್ಚಿತಾರ್ಥ ಸಂಭ್ರಮದಲ್ಲಿ ಪವರ್ ಸ್ಟಾರ್

ನಿಖಿಲ್ ನಿಶ್ಟಿತಾರ್ಥ ಸಮಾರಂಭದಲ್ಲಿ ದೊಡ್ಡಗೌಡರ ಕುಟುಂಬ ಮತ್ತು ರೇವತಿ ಕುಟುಂಬದ ಜೊತೆಗೆ ಗಣ್ಯರು ಕೂಡ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ. ಜೊತೆಗೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಾಗಿ ಶುಭ ಹಾರೈಸಿದ್ದಾರೆ.

ಊಟಕ್ಕೆ 50ಕ್ಕು ಹೆಚ್ಚು ಖಾದ್ಯಗಳು

ಊಟಕ್ಕೆ 50ಕ್ಕು ಹೆಚ್ಚು ಖಾದ್ಯಗಳು

ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥಕ್ಕೆ ಸುಮಾರು 50ಕ್ಕು ಹೆಚ್ಚು ಬಗೆಯ ಸಸ್ಯಹಾರಿ ಖಾದ್ಯಗಳನ್ನು ತಯಾರಿಸಲಾಗಿದೆ. ಪರೋಟ, ರೋಟಿ, ವಿವಿಧ ಬಗೆಯ ಪಲ್ಯ, ಹೋಳಿಗೆ, ಚಿರೋಟಿ, ಡ್ರೈ ಫ್ರೂಟ್ಸ್ ಪಾಯಸ, ಮೈಸೂರ್ ಪಕ್, ಮೆಸ್ಮಲಯ್, ಜಾಮೂನ್, ವಿವಿಧ ಬಗೆಯ ಐಸ್ ಕ್ರೀಮ್ ಸೇರಿದಂತೆ ದೊಡ್ಡ ಲಿಸ್ಟ್ ಇದೆ. ಇಲ್ಲಿ ವಿಐಪಿ, ವಿವಿಐಪಿಗಳು ಸೇರಿದಂತೆ ಸಾಮಾನ್ಯ ಜನರಿಗೂ ಒಂದೇ ರೀತಿಯ ಭೋಜನ ವ್ಯವಸ್ಥೆ ಮಾಡಿಸಲಾಗಿದೆ. ಸುಮಾರು 6 ಸಾವೀರ ಜನರಿಗೆ ಊಟದ ವ್ಯವಸ್ಥೆ ಮಾಡಿಸಲಾಗಿದೆ.

ಏಪ್ರಿಲ್ ನಲ್ಲಿ ಮದುವೆ ಸಾಧ್ಯತೆ

ಏಪ್ರಿಲ್ ನಲ್ಲಿ ಮದುವೆ ಸಾಧ್ಯತೆ

ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚಿಂತನೆ ನಡೆಸಿದೆ ಎಂಬ ಮಾಹಿತಿಯಿದೆ. ರಾಮನಗರ-ಚನ್ನಪಟ್ಟಣದ ಮಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದು, ಆ ಕುರಿತು ಶೀಘ್ರದಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂಬ ಮಾಹಿತಿಯಿದೆ.

More from Filmibeat

English summary
Actor Nikhil Kumar engaged with Revathi today in Taj Westend hotel at Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X