For Quick Alerts
  ALLOW NOTIFICATIONS  
  For Daily Alerts

  ನಟ ನಿಖಿಲ್ ಕುಮಾರ್ ಹೊಸ ಸಿನಿಮಾ ಕಿಕ್ ಸ್ಟಾರ್ಟ್!

  |

  ಕನ್ನಡದ ನಟ ನಿಖಿಲ್‌ ಕುಮಾರ್‌ ಅವರು ಸದ್ಯ ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಆದರೆ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈಗಾಗೇ ಅವರ ಮುಂದಿನ ಚಿತ್ರದ ಶೂಟಿಂಗ್‌ ಕೂಡ ಆರಂಭ ಆಗಿದೆ. ಯಾವುದೇ ಸುಳಿವು ನೀಡದೇ ನಿಖಿಲ್ ಕುಮಾರ್‌ ಶೂಟಿಂಗ್ ಸ್ಟಾರ್ಟ್ ಮಾಡಿ ಬಿಟ್ಟಿದ್ದಾರೆ.

  ರೈಡರ್ ಚಿತ್ರದ ಮೂಲಕ ನಟ ನಿಖಿಲ್ ಕುಮಾರ್ ಹೊಸ ಭರವಸೆ ನೀಡಿದ್ದಾರೆ. ರೈಡರ್‌ ಸಿನಿಮಾದಲ್ಲಿ ನಿಖಿಲ್‌ ಅಭಿನಯದ ಮತ್ತೊಂದು ಮಜಲು ತೆರೆದುಕೊಂಡಿತ್ತು ಎಂದೇ ಹೇಳಬಹುದು. ಈ ಚಿತ್ರದಲ್ಲಿ ನಟ ನಿಖಿಲ್ ಕುಮಾರ್‌ ತುಂಬಾನೆ ಸೆಟಲ್‌ ಆಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.

  ಹಾಗಾಗಿ ನಿಖಿಲ್ ಮುಂದಿನ ಚಿತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿದ್ದವು. ಸದ್ಯ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಹೊಸ ಚಿತ್ರ ತಂಡದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಮುಂದೆ ಓದಿ...

  ನವ ಮಂಜು ಅಥರ್ವ್ ನಿರ್ದೇಶಕ ನಿಂದ ನಿಖಿಲ್‌ಗೆ ಡೈರೆಕ್ಷನ್!

  ನವ ಮಂಜು ಅಥರ್ವ್ ನಿರ್ದೇಶಕ ನಿಂದ ನಿಖಿಲ್‌ಗೆ ಡೈರೆಕ್ಷನ್!

  ನಿಖಿಲ್ ಕುಮಾರ್ ಅವರ ಈ ಚಿತ್ರವನ್ನು ನವ ನಿರ್ದೇಶಕ ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಅಥರ್ವ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಾರೆ. ತಮಿಳಿನ ಕದಿರನ್ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, 'ಮಫ್ತಿ' ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  ಮೊದಲ‌ ಹಂತದಲ್ಲಿ ಯುವರಾಜನ ಹೊಸ ಸಿನಿಮಾ!

  ಮೊದಲ‌ ಹಂತದಲ್ಲಿ ಯುವರಾಜನ ಹೊಸ ಸಿನಿಮಾ!

  ನಿಖಿಲ್ ಹಾಗೂ ಮಂಜು ಅಥರ್ವ ಸಹಯೋಗದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರಕ್ಕೆ ಸದ್ಯಕ್ಕೆ ಟೈಟಲ್ ಇನ್ನು ನಿಗದಿಯಾಗಿಲ್ಲ. ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

  ಕೌಟುಂಬಿಕ ಕಥೆ ಜೊತೆಗೆ ನಿಖಿಲ್ ಆ್ಯಕ್ಷನ್ ಇರುತ್ತೆ!

  ಕೌಟುಂಬಿಕ ಕಥೆ ಜೊತೆಗೆ ನಿಖಿಲ್ ಆ್ಯಕ್ಷನ್ ಇರುತ್ತೆ!

  ನಿಖಿಲ್ ಕುಮಾರ್‌ ಅವರು ಸಿನಿಮಾದಿಂದ ಸಿನಿಮಾಗೆ ಬದಲಾವಣೆ ಮಾಡಿಕೊಳ್ಳುತ್ತಾ ಇರುತ್ತಾರೆ. ಅಂತೆಯೇ ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್‌ ಮೂರು ಚಿತ್ರಗಳಲ್ಲಿಯೂ ನಟ ನಿಖಿಲ್‌ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಮುಂಬರುವ ಈ ಚಿತ್ರದಲ್ಲೂ ಕೂಡ ನಿಖಿಲ್‌ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನವ ಸೂಚನೆ ಸಿಕ್ಕಿದೆ. ನಿಖಿಲ್ ಅವರ ಆ್ಯಕ್ಷನ್‌ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಇದೆ. ಆದರೆ ಅದರ ಜೊತೆಗೆ ಸುಂದರ ಕೌಟುಂಬಿಕ ಕಥಾ ಹಂದರ ಕೂಡ ಇದೆಯಂತೆ.

  ತಾರ ಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ!

  ತಾರ ಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ!

  ಸದ್ಯಕ್ಕೆ ಚಿತ್ರದ ಎಲ್ಲಾ ಪಾತ್ರಗಳು ಪೈನಲ್ ಆಗಿಲ್ಲ. ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ. ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರ ತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ಹೊರ ಬೀಳಲಿದೆ.

  English summary
  Actor Nikhil Kumar New Movie Shooting Started, It Will A Family Action Drama,
  Saturday, January 15, 2022, 13:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X