'ಕುರುಕ್ಷೇತ್ರ' ಪ್ರಚಾರದಿಂದ ದೂರವೇ ಉಳಿದ 'ಅಭಿಮನ್ಯು' ನಿಖಿಲ್
ಸ್ಯಾಂಡಲು ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ ಕುರುಕ್ಷೇತ. ಈಗಾಗಲೆ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಕುರುಕ್ಷೇತ್ರ ಐದು ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿರುವ ಚಿತ್ರ.
ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಕುರುಕ್ಷೇತ್ರ ಅಬ್ಬರಿಸಲಿದೆ. ಮುನಿರತ್ನ ಮತ್ತು ಚಂಡದವರು ಕುರುಕ್ಷೇತ್ರ ರಿಲೀಸ್ ನ ಒತ್ತಡದಲ್ಲಿದ್ದರೆ, ಅಭಿಮನ್ಯು ಮಾತ್ರ ಕುರುಕ್ಷೇತ್ರ ಪ್ರಮೋಷನ್ ನಿಂದ ದೂರ ಉಳಿದ ಹಾಗೆ ಕಾಣುತ್ತೆ. ಯಾಕಂದ್ರೆ ನಿನ್ನೆ ನಡೆದ ಪ್ರೆಸ್ ಮೀಟ್ ನಲ್ಲೂ ನಿಖಿಲ್ ಕಾಣಿಸಿಕೊಂಡಿಲ್ಲ.

ಪ್ರೆಸ್ ಮೀಟ್ ಗೆ ನಿಖಿಲ್ ಗೈರು
ಕುರುಕ್ಷೇತ್ರ ಚಿತ್ರದ ರಿಲೀಸ್ ಸಮಯದಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ದೊಡ್ಡ ಸಿನಿಮಾ ಮಾಡಿದ್ದೀವಿ ಎನ್ನುವ ಸಂತಸದ ಜೊತೆಗೆ ರಿಲೀಸ್ ನ ಒತ್ತಡದಲ್ಲಿದ್ದ ಚಿತ್ರತಂಡ ತಮ್ಮ ಪಾತ್ರದ ಬಗ್ಗೆ ಮತ್ತು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಆದ್ರೆ ಇಡೀ ಚಿತ್ರತಂಡದಲ್ಲಿ ಅಭಿಮನ್ಯು ನಿಖಿಲ್ ಗೈರು ಎದ್ದು ಕಾಣುತ್ತಿತ್ತು. ನಿಖಿಲ್ ಕುರುಕ್ಷೇತ್ರದ ಯಾವುದೇ ಪ್ರಚಾರ ಚಟುವಟಿಕೆಯಲ್ಲೂ ಭಾಗಿಯಾಗುತ್ತಿಲ್ಲ. ಆದ್ರೆ ನಿಖಿಲ್ ಗೈರು ಮಾತ್ರ ನಿಗೂಢವಾಗಿದೆ.

ಪ್ರಚಾರದಿಂದ ನಿಖಿಲ್ ದೂರ
ಕುರುಕ್ಷೇತ್ರ ಚಿತ್ರದ ರಿಲೀಸ್ ಪ್ರೆಸ್ ಮೀಟ್ ಮಾತ್ರವಲ್ಲದೆ, ಕುರುಕ್ಷೇತ್ರದ ಯಾವುದೆ ಕಾರ್ಯಕ್ರಮದಲ್ಲು ನಿಖಿಲ್ ಭಾಗಿಯಾಗಿಲ್ಲ. ಚಿತ್ರದ ಆಡಿಯೋ ರಿಲೀಸ್, ತೆಲುಗು ಆಡಿಯೋ ರಿಲೀಸ್ ಮತ್ತು ಈ ಹಿಂದೆ ನಡೆದ ಪ್ರೆಸ್ ಮೀಟ್ ಗಳಲ್ಲಿಯೂ ನಿಖಿಲ್ ಕಾಣಿಸಿಕೊಂಡಿಲ್ಲ. ದರ್ಶನ್ 50ನೇ ಸಿನಿಮಾ ಎನ್ನುವ ಕಾರಣಕ್ಕೊ ಅಥವಾ ಮುಂಡ್ಯ ಚುನಾವಣೆಯ ಮುನಿಸು ಇನ್ನು ಕಮ್ಮಿಯಾಗಿಲ್ಲವಾ ಅಥವಾ ಬೇರೆ ಇನ್ನೇನಾದ್ರು ಕಾರಣ ಇದೆಯಾ ಎನ್ನುವುದು ಚಿತ್ರಾಭಿಮಾನಿಗಳಲ್ಲಿ ಅನುಮಾನ ಮೂಡಿದೆ.

ಸೋನು ಸೂದ್, ದ್ಯಾನೀಶ್ ದೂರದಿಂದ ಬರ್ತಾರೆ
ಕುರುಕ್ಷೇತ್ರ ಚಿತ್ರದ ಮುಖ್ಯ ಪಾತ್ರಗಳಲ್ಲಿ ಬಹುಭಾಷ ನಟ ಸೋನ್ ಸೂದ್ ಮತ್ತು ದ್ಯಾನೀಶ್ ಅಖ್ತರ್ ಅಭಿನಯಿಸಿದ್ದಾರೆ. ಆದ್ರೆ ಇವರು ಪ್ರತಿ ಪ್ರೆಸ್ ಮೀಟ್ ಹಾಗು ಕುರುಕ್ಷೇತ್ರದ ಯಾವುದೆ ಕಾರ್ಯಕ್ರಮಕ್ಕಾದ್ರು ತಪ್ಪದೆ ಬರುತ್ತಾರೆ. ಮುನಿರತ್ನ ಅವರೆಗ ಹೇಳಿದ ಹಾಗೆ "ಕುರುಕ್ಷೇತ್ರ ಪ್ರೆಸ್ ಮೀಟ್ ಇದೆ ಅಂತ ಒಂದು ಮಾತು ಹೇಳಿದ್ರೆ ಸಾಕು ದೂರದ ಮುಂಬೈಯಿಂದ ಬರುತ್ತಾರೆ" ಆದ್ರೆ ಇಲ್ಲೆ ಇರುವ ನಿಖಿಲ್ ಯಾಕೆ ಗೈರಾಗುತ್ತಾರೆ ಎನ್ನುವುದು ಅನೇಕರ ಪ್ರಶ್ನೆ.

ಕೊನೆ ಕ್ಷಣದಲ್ಲಿ ಡಬ್ಬಿಂಗ್
ಕುರುಕ್ಷೇತ್ರ ರಿಲೀಸ್ ಗೆ ಇನ್ನೇನು ಒಂದು ವಾರ ಇದೆ ಎನ್ನುವಾಗ ನಿಖಿಲ್ ಕೊನೆಕ್ಷಣದಲ್ಲಿ ಅಭಿಮನ್ಯು ಪಾತ್ರಕ್ಕೆ ಡಬ್ ಮಾಡಿದ್ದಾರೆ. ಟ್ರೈಲರ್ ನಲ್ಲಿ ನಿಖಿಲ್ ಪಾತ್ರಕ್ಕೆ ಬೇರೆಯವರ ಬಳಿ ಡಬ್ ಮಾಡಿಸಿಲಾಗಿತ್ತು. ಆದ್ರೆ ಅದು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಆದ್ರೀಗ ಕೊನೆಯ ಕ್ಷಣಕ್ಕೆ ಬಂದು ನಿಖಿಲ್ ಅವರೆ ತಮ್ಮ ಪಾತ್ರಕ್ಕೆ ಡಬ್ ಮಾಡಿ ಕೊಟ್ಟಿದ್ದಾರೆ.


Click it and Unblock the Notifications











