ನಂಬಿದ್ರೆ ನಂಬಿ, ಬಿಟ್ರೆ ಬಿಡಿ ನಿರಂಜನ್ ಗೂ 'ಕಾಸ್ಟಿಂಗ್ ಕೌಚ್' ಎದುರಾಗಿತ್ತು.!

By Bharath Kumar

ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅವಕಾಶ ಕೊಡುವುದಾಗಿ ಅಥವಾ ಕೊಡಿಸುವುದಾಗಿ ಹೇಳಿ ಅವರನ್ನ ದೈಹಿಕವಾಗಿ ಬಳಸಿಕೊಳ್ಳುವ ಕೆಟ್ಟ ಸಂಸ್ಕ್ರತಿ ಚಿತ್ರರಂಗದಲ್ಲಿ ಹೆಚ್ಚಾಗಿದೆ ಎಂಬುದು ಹಲವರು ಆರೋಪ. ಇದಕ್ಕೆ ಕಾಸ್ಟಿಂಗ್ ಕೌಚ್ ಎಂದು ಹೆಸರು.!

ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ನಟಿಯರು ಬಹಿರಂಗವಾಗಿ ಮಾತನಾಡಿದ್ದು, ತಾವು ಎದುರಿಸಿದ್ದ ಕಷ್ಟಗಳನ್ನ ಹೊರಹಾಕಿದ್ರು. ಬಹುಶಃ ಈ ಸಮಸ್ಯೆ ಬರಿ ಯುವತಿಯರಿಗೆ ಮಾತ್ರ ಎದುರಾಗುತ್ತೆ ಎಂದು ಅಂದುಕೊಂಡಿದ್ದರೇ ತಪ್ಪು. ಇಂತಹ ಸಮಸ್ಯೆಗಳು ಯುವಕರಿಗೂ ಕೂಡ ಎದುರಾಗಿದೆ.

ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಕನ್ನಡ ನಟ-ನಿರೂಪಕ ನಿರಂಜನ್ ದೇಶಪಾಂಡೆ ಅವರಿಗೂ ಇಂತಹ ಅನುಭವ ಆಗಿದ್ದು, ಈ ಬಗ್ಗೆ ಅವರೇ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ, ನಿರಂಜನ್ ಗೆ ಎದುರಾಗಿದ್ದು ಎಲ್ಲಿ, ಯಾವಾಗ.? ಎಂದು ತಿಳಿಯಲು ಮುಂದೆ ಓದಿ.....

ಗಂಡ್ಮಕ್ಕಳಿಗೂ ಕಾಸ್ಟಿಂಗ್ ಕೌಚ್ ಎದುರಾಗುತ್ತೆ

ಗಂಡ್ಮಕ್ಕಳಿಗೂ ಕಾಸ್ಟಿಂಗ್ ಕೌಚ್ ಎದುರಾಗುತ್ತೆ

ನಿರಂಜನ್ ಅವರು ಈ ಹಿಂದೆ ಮುಂಬೈನಲ್ಲಿ ಅವಕಾಶಕ್ಕಾಗಿ ಹುಡುಕಿಕೊಂಡು ಹೋದಾಗ, ಅವರ ಮೇಲೆಯೂ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತಂತೆ. ''ಅರಂಭದ ದಿನಗಳಲ್ಲಿ ಒಂದು ಕ್ರೇಜ್ ಇತ್ತು. ಹೈದ್ರಾಬಾದ್, ಮುಂಬೈಗೆ ಹೋದ್ರೆ ಅವಕಾಶ ಹೆಚ್ಚು ಸಿಗುತ್ತೆ ಅಂತ. ಅಲ್ಲಿಗೆ ಒಮ್ಮೆ ಹೋಗಿದ್ದಾಗ ನನ್ನ ಬಳಿಯೂ ಒಬ್ಬರು ಈ ರೀತಿ ಕೇಳಿದ್ರು'' ಎಂದು ನಿರಂಜನ್ ತಿಳಿಸಿದ್ದಾರೆ.

ಡೈರೆಕ್ಟ್ ಆಗಿ ಕೇಳಿದ್ರಂತೆ

ಡೈರೆಕ್ಟ್ ಆಗಿ ಕೇಳಿದ್ರಂತೆ

ಜಾಹೀರಾತು ಒಂದರಲ್ಲಿ ನಿರಂಜನ್ ನಟಿಸುತ್ತಿದ್ದಾಗ, ಅಲ್ಲೊಬ್ಬರು ''ನಿನಗೆ ಏನ್ ಬೇಕು ಕೇಳು ಕೊಡಿಸ್ತೀನಿ, ವಾಚ್, ಗಿಫ್ಟ್ ಎಲ್ಲವೂ ತಗೋ. ಆದ್ರೆ, ನಮಗೆ ಸಹಕಾರ ನೀಡಬೇಕು ಎಂದು ಕೇಳಿದ್ರಂತೆ. ಅದಕ್ಕೆ ನಿರಂಜನ್ ಅವರು ಬಹುಶಃ ನಟನೆಗೆ ಮೆಚ್ಚಿ ಹೀಗೆ ಕೇಳ್ತಿದ್ದಾರೆ ಅಂತ ಸರಿ ಸರ್ ಅಂದ್ರಿದಂತೆ. ಆಮೇಲೆ ನೋಡಿದ್ರೆ ಮೆಸೆಜ್, ಫೋನ್ನನಲ್ಲಿ ಡೈರೆಕ್ಟ್ ಅಲ್ಲಿಗೆ ಬಾ, ಇಲ್ಲಿಗೆ ಬಾ ಅಂತಿದ್ರಂತೆ'' ಎಂದು ನಿರಂಜನ್ ಹೇಳಿಕೊಂಡಿದ್ದಾರೆ.

ಅಲ್ಲಿಂದ ಓಡಿ ಬಂದೆ

ಅಲ್ಲಿಂದ ಓಡಿ ಬಂದೆ

''ಮೊದ ಮೊದಲು ಅವರು ಏನ್ ಹೇಳ್ತಿದ್ದಾರೆ ಎಂಬುದು ನನಗೆ ಗೊತ್ತಾಗ್ಲಿಲ್ಲ. ಆದ್ರೆ, ಡೈರೆಕ್ಟ್ ಆಗಿಯೇ ಹೇಳಿದ್ಮೇಲೆ ಅಲ್ಲಿಂದ ಹೇಳದೆ, ಕೇಳದೆ ಓಡಿ ಬಂದೆ. ಅದೇ ಕೊನೆ, ಮತ್ತೆ ಆ ಕಡೆ ನಾನು ಹೋಗಿಲ್ಲ. ಒಂದಂತೂ ನಿಜ ಕಾಸ್ಟಿಂಗ್ ಕೌಚ್ ಬರಿ ಹೆಣ್ಮಕ್ಳಿಗೆ ಮಾತ್ರವಲ್ಲ, ಗಂಡಸರಿಗೂ ಎದುರಾಗುತ್ತೆ'' ಎಂದು ನಿರಂಜನ್ ಬಹಿರಂಗಪಡಿಸಿದ್ದಾರೆ.

ಹೆಣ್ಣು-ಗಂಡು-ಮಂಗಳಮುಖಿ ಮೇಲೆಯೂ ದೌರ್ಜನ್ಯ

ಹೆಣ್ಣು-ಗಂಡು-ಮಂಗಳಮುಖಿ ಮೇಲೆಯೂ ದೌರ್ಜನ್ಯ

ಕಾಸ್ಟಿಂಗ್ ಕೌಚ್ ಎಂಬುದು ಕೇವಲ ಒಂದು ವರ್ಗದವರ ಮೇಲೆ ಮಾತ್ರವಲ್ಲ, ಹೆಣ್ಣು-ಗಂಡು ಎನ್ನುವುದನ್ನ ನೋಡದೇ, ಮಂಗಳಮುಖಿಯೂ ಮೇಲೆ ಕಾಸ್ಟಿಂಗ್ ಕೌಚ್ ದೌರ್ಜನ್ಯ ನಡೆದಿರುವ ಉದಾಹರಣೆಗಳಿವೆ.

More from Filmibeat

English summary
Kannada Actor Niranjan deshpande spoke about Male Casting couch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X