'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಚಿತ್ರದ ಫ್ಯಾಂಟಮ್ ಲೋಕದ ಝಲಕ್ ಅನ್ನು ರಿವೀಲ್ ಮಾಡಿ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿದ್ದಾರೆ. ಈಗಾಗಲೆ ಸಿನಿಮಾ ಎರಡು ಅದ್ಭುತ ವಿಡಿಯೋಗಳು ರಿಲೀಸ್ ಆಗಿದೆ. ಜೊತೆಗೆ ಸುದೀಪ್ ಲುಕ್ ಬಿಡುಗಡೆಯಾಗಿದೆ.

Recommended Video

Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

ಫ್ಯಾಂಟಂ ಪ್ರಪಂಚದಿಂದ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಗಳು ಸಿಗುತ್ತಲೆ ಇದೆ. ಇದೀಗ ಫ್ಯಾಂಟಮ್ ಸಿನಿಮಾದಿಂದ ಮತ್ತೊಂದು ಗಿಫ್ಟ್ ಅಭಿಮಾನಿಗಳಿಗೆ ಸಿಕ್ಕಿದೆ. ಹೌದು, ಫ್ಯಾಂಟಮ್ ಸಿನಿಮಾ ಮತ್ತೊಂದು ಪ್ರಮುಖ ಪಾತ್ರಧಾರಿಯ ಲುಕ್ ರಿಲೀಸ್ ಆಗಿದೆ. ಮತ್ಯಾರು ಅಲ್ಲ ನಟ ನಿರೂಪ್ ಭಂಡಾರಿಯ ಪಾತ್ರ ಮತ್ತು ಲುಕ್ ಬಿಡುಗಡೆ ಮಾಡಿದೆ ಸಿನಿಮಾತಂಡ. ಮುಂದೆ ಓದಿ...

ನಿರೂಪ್ ಪಾತ್ರದ ಬಗ್ಗೆ ಅನೂಪ್ ವಿವರಣೆ

ನಿರೂಪ್ ಪಾತ್ರದ ಬಗ್ಗೆ ಅನೂಪ್ ವಿವರಣೆ

"ಫ್ಯಾಂಟಮ್ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಸಂಜೀವ್ ಗಂಭೀರ. ಸಂಜು ಲಂಡನ್ ನಲ್ಲಿ ಬೆಳೆದು, ಹುಟ್ಟಿದ ಊರಿಗೆ ವಾಪಸ್ ಬರುತ್ತಾನೆ. ಸಂಜು ನಗ್ತಾನೆ, ನಗಿಸ್ತಾರೆ, ತರ್ಲೆ ಮಾಡುತ್ತಾನೆ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಾನೆ. ಸಂಜು ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪ್ ಹುಟ್ಟುಹಬ್ಬದ ಶುಭಾಶಯಗಳು" ಎಂದು ಅನೂಪ್ ಪ್ರೀತಿಯ ಸಹೋದರನ ಪಾತ್ರ ರಿವೀಲ್ ಮಾಡಿ ಶುಭಕೋರಿದ್ದಾರೆ.

ನಿರೀಪ್ ಭಂಡಾರಿಗೆ ಸುದೀಪ್ ವಿಶ್

ನಿರೀಪ್ ಭಂಡಾರಿಗೆ ಸುದೀಪ್ ವಿಶ್

ಮೊದಲ ಬಾರಿಗೆ ನಿರೂಪ್ ಭಂಡಾರಿ ಕಿಚ್ಚ ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿರೂಪ್ ಗೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಜೊತೆಗೆ ನಿರೂಪ್ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ಸರ್ಪೈಸ್ ನೀಡುವುದಾಗಿ ಸುದೀಪ್ ನಿನ್ನಯೇ ಅನೌನ್ಸ್ ಮಾಡಿದ್ದರು. ಮಾತಿನಂತೆ ನಿರೂಪ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ವಿಕ್ರಾಂತ್ ರೋಣ ಪಾತ್ರದ ಬಗ್ಗೆ

ವಿಕ್ರಾಂತ್ ರೋಣ ಪಾತ್ರದ ಬಗ್ಗೆ

ಇತ್ತೀಚಿಗೆ ಚಿತ್ರತಂಡ ಕಿಚ್ಚ ಸುದೀಪ್ ಪಾತ್ರ ವಿಕ್ರಾಂತ್ ರೋಣನ ಬಗ್ಗೆ ವಿವರಣೆ ನೀಡಿ ಸಿಂಹಾಸನದ ಮೇಲೆ ಕುಳಿತಿರುವ ಲುಕ್ ರಿಲೀಸ್ ಮಾಡಿದ್ದರು. 'ಫ್ಯಾಂಟಮ್ ಚಿತ್ರದ ಮುಖ್ಯ ಪಾತ್ರಧಾರಿ ವಿಕ್ರಾಂತ್ ರೋಣ. ಈ ಹೆಸರಿನಲ್ಲಿ ಎಷ್ಟು ಪವರ್ ಇದೆಯೋ ಆ ಪಾತ್ರವೂ ಅಷ್ಟೇ ಪವರ್ ಫುಲ್ ಆಗಿದೆ. ವಿಕ್ರಾಂತ್ ರೋಣ ಏನು ಮಾಡ್ತಾನೆ, ಹೇಗೆ ಮಾಡ್ತಾನೆ, ಯಾಕೆ ಮಾಡ್ತಾನೆ ಇದು ಯಾರಿಗೂ ಅರ್ಥವಾಗಲ್ಲ. ಆದರೆ, ಅವನು ಏನೇ ಮಾಡಿದ್ರೂ ಅದಕ್ಕೆ ಕಾರಣ ಇರುತ್ತೆ'' ಎಂದು ಹೀರೋ ಪಾತ್ರದ ಬಗ್ಗೆ ಅನೂಪ್ ಭಂಡಾರಿ ವಿವರಣೆ ನೀಡಿದ್ದರು.

More from Filmibeat

English summary
Actor Nirup Bhandari's Phantom movie look release for his birthday special. Anup Bhandari release Nirup Bhandari look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X