For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೆ ಕನ್ನಡದಲ್ಲಿ ಶುಭ ಕೋರಿದ ತೆಲುಗು ನಟ ಪವನ್ ಕಲ್ಯಾಣ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷ ಅದ್ದೂರಿಯಾಗಿ ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಸಂಭ್ರಮ, ಸಡಗರಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದ ಮೂಲಕ ಕಿಚ್ಚನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada

  ಅಭಿಮಾನಿಗಳು, ಸ್ನೇಹಿತರು ಚಿತ್ರರಂಗದ ಗಣ್ಯರು ಪ್ರೀತಿಯಿಂದ ಕಿಚ್ಚನಿಗೆ ಶುಭಕೋರಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷಾ ಸಿನಿ ಗಣ್ಯರು ವಿಶ್ ಮಾಡಿದ್ದಾರೆ. ವಿಶೇಷ ಅಂದರೆ ಕಿಚ್ಚನಿಗೆ ಪಕ್ಕದ ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಕನ್ನಡದಲ್ಲಿ ಶುಭಹಾರೈಸಿದ್ದಾರೆ. ಪವನ್ ಕಲ್ಯಾಣ್ ಕನ್ನಡಕ್ಕೆ ಕನ್ನಡ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಮುಂದೆ ಓದಿ..

  ಇಬ್ಬರ ಹುಟ್ಟುಹಬ್ಬ ಒಂದೇ ದಿನ

  ಇಬ್ಬರ ಹುಟ್ಟುಹಬ್ಬ ಒಂದೇ ದಿನ

  ಪವನ್ ಕಲ್ಯಾಣ್ ಮತ್ತು ಸುದೀಪ್ ಹುಟ್ಟುಹಬ್ಬ ಒಂದೇ ದಿನ. ಇಬ್ಬರು ಸೆಪ್ಟಂಬರ್ 2ರಂದು ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ. ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಸುದೀಪ್ ಪ್ರೀತಿಯ ಶುಭಾಶಯ ಕಳುಹಿಸಿದ್ದರು.

  "ಹುಟ್ಟುಹಬ್ಬದ ಶುಭಾಶಯಗಳು ಪವನ್ ಕಲ್ಯಾಣ್ ಸರ್. ಮತ್ತಷ್ಟು ಯಶಸ್ಸು, ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ. ಉತ್ತಮವಾದ ವರ್ಷ ನಿಮ್ಮದಾಗಲಿ." ಎಂದು ಟ್ವೀಟ್ ಮಾಡಿದ್ದಾರೆ.

  'ಪೈಲ್ವಾನ್ ನೋಡಿ ಆನಂದಿಸಿದೆ...'

  'ಪೈಲ್ವಾನ್ ನೋಡಿ ಆನಂದಿಸಿದೆ...'

  ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪವನ್ ಕಲ್ಯಾಣ್ "ಪ್ರಿಯ ಕಿಚ್ಚ ಸುದೀಪ್ ಜೀ. ನಿಮ್ಮ ಬೆಚ್ಚಗಿನ ಹುಟ್ಟುಹಬ್ಬದ ಶುಭಾಶಯಗಳಿಗಾಗಿ ತುಂಬಾ ಧನ್ಯವಾದಗಳು. 'ಪೈಲ್ವಾನ್' ನಲ್ಲಿ ನಿಮ್ಮ ಅಭಿನಯವನ್ನು ನಾನು ನಿಜವಾಗಿಯೂ ಆನಂದಿಸಿದೆ." ಎಂದು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ಪವನ್ ಕಲ್ಯಾಣ್ ವಿಶ್

  ಪವನ್ ಕಲ್ಯಾಣ್ ವಿಶ್

  ಸುದೀಪ್ ಅಭಿನಯ ಹೊಗಳುವ ಜೊತೆಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ." ಹುಟ್ಟುಹಬ್ಬಕ್ಕೆ ಶುಭಾಶಯಗಳು. ನಾವು ಹುಟ್ಟುಹಬ್ಬದ ದಿನಾಂಕವನ್ನು ಹಂಚಿಕೊಳ್ಳುತ್ತೇವೆ ಎಂದು ಈಗ ಗೊತ್ತಾಯಿತು. ಅದ್ಭುತ ಭವಿಷ್ಯ ನಿಮ್ಮದಾಗಲಿ" ಎಂದು ಪವನ್ ಕಲ್ಯಾಣ್, ಕಿಚ್ಚನಿಗೆ ವಿಶ್ ಮಾಡಿದ್ದಾರೆ.

  ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ಸುದೀಪ್

  ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ಸುದೀಪ್

  ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಶೂಟಿಂಗ್ ಗೆ ಬ್ರೇಕ್ ಹಾಕಿ ಮನೆಗೆ ವಾಪಸ್ ಆಗಿದ್ದರು. ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ, ಮನೆಯ ಬಳಿ ಬರಬೇಡಿ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದರು. ಕಿಚ್ಚ ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಇಡೀ ಚಿತ್ರತಂಡ ಅಲ್ಲೇ ಬೀಡು ಬಿಟ್ಟಿದೆ.

  English summary
  Tollywood Actor Pawan Kalyan Birthday Wishes to Sudeep in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X