'ಆಕ್ಟರ್' ಆದ ನವೀನ್ ಕೃಷ್ಣ ಕಥೆ ಏನು?

By Suneetha

ಎಲ್ಲೆಡೆ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡ 'ಹಗ್ಗದ ಕೊನೆ' ಚಿತ್ರದ ನಂತರ ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ನಟ ನವೀನ್ ಕೃಷ್ಣ ಅವರು ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಇದೀಗ ಚಿತ್ರರಂಗದ ವಿಷಯವನ್ನೇ ಆರಿಸಿಕೊಂಡಿರುವ ನಿರ್ದೇಶಕ ದಯಾಳ್ ಅವರು ಚಿತ್ರರಂಗದ ಮತ್ತೊಂದು ಮಗ್ಗಲನ್ನು 'ಆಕ್ಟರ್' ಎಂಬ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ.

ಇದೇ ಮೊದಲ ಬಾರಿಗೆ ಚಿತ್ರಲೋಕ ಡಾಟ್ ಕಾಮ್ ನ ವೀರೇಶ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, 'ಆಕ್ಟರ್' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಚಿತ್ರಲೋಕ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ.

ಶೇ. 80 ರಷ್ಟು ಚಿತ್ರವನ್ನು 'ಹಗ್ಗದ ಕೊನೆ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ನವೀನ್ ಕೃಷ್ಣ ಅವರ ಪಾತ್ರ ಆವರಿಸಿಕೊಂಡಿದ್ದು, ಚಿತ್ರದ ಕೊನೆಯ ಹಂತದಲ್ಲಿ ಸಿಹಿಕಹಿ ಗೀತಾ ನಟಿಸಿರುವ ಪಾತ್ರ ಬರಲಿದೆ. ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರದ ಚಿತ್ರೀಕರಣ ನವೆಂಬರ್ 16 ರಿಂದ ಆರಂಭವಾಗಲಿದೆ.

ಅತ್ಯಂತ ಉಚ್ಛ ಸ್ಥಿತಿಯಲ್ಲಿರುವ ನಟನೋರ್ವ ಏಕಾಏಕಿ ಕುಸಿಯುವ ಕಥಾವಸ್ತುವನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಒಂದೇ ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಒಬ್ಬ ನಟನಿಗೆ ಎರಡು ಮುಖಗಳಿರುತ್ತವೆ. ಅದನ್ನು ಈ ಚಿತ್ರದಲ್ಲಿ ಹೇಳುವುದಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.

ಬೆಳಿಗ್ಗೆ 6 ಘಂಟೆಯಿಂದ ಮಧ್ಯಾಹ್ನ 12ರ ವರೆಗೆ ನಡೆಯಲಿರುವ ಘಟನೆಯು ಸುಮಾರು ಎರಡೂವರೆ ಘಂಟೆ ಸಿನಿಮಾ ರೂಪದಲ್ಲಿ ಪ್ರೇಕ್ಷಕರೆದುರು ಬರಲಿದೆ. ಈಗಾಗಲೇ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 19 ರಂದು ಬಿಡುಗಡೆಯಾಗಲಿದೆ. ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸುರೇಶ್ ಭೈರಸಂದ್ರ ಅವರು ಕ್ಯಾಮರ ಕೈಚಳಕ ತೋರಲಿದ್ದಾರೆ.

More from Filmibeat

English summary
After the critical acclaim of Haggada Kone last year, Dayal Padmanabhan seems to have a penchant for standing out. He has joined hands once more with Naveen Krishna, the lead actor of Haggada Kone, for a film titled Actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X