ಮಾಫಿಯಾ ಲೋಕದಲ್ಲಿ ಪತ್ತೆಯಾದ ಪ್ರಜ್ವಲ್ ದೇವರಾಜ್.!

By Suneetha

ಬೇರೆ-ಬೇರೆ ಸಿನಿಮಾಗಳಲ್ಲಿ ತಮ್ಮನ್ನು ತಾವು ವಿಭಿನ್ನ ಪ್ರಯೋಗಕ್ಕೆ ಒಡ್ಡಿಕೊಂಡ ನಟ ಪ್ರಜ್ವಲ್ ದೇವರಾಜ್ ಅವರು, ಮೊದ-ಮೊದಲು ಭೂಗತ ವಿಷಯಗಳಾದ 'ಜೀವ', ಗೆಳೆಯ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ತದನಂತರ ಲವ್-ರೋಮ್ಯಾಂಟಿಕ್ ಸಿನಿಮಾಗಳಲ್ಲೇ ಹೆಚ್ಚಾಗಿ ಅಭಿಮಾನಿಗಳನ್ನು ಮೆಚ್ಚಿಸಿದರು. ಆದರೂ ತಮ್ಮ ಸಿನಿಮಾ ಜರ್ನಿಯಲ್ಲಿ ಅಷ್ಟಾಗಿ ಯಶಸ್ಸು ಕಾಣದ ಡೈನಾಮಿಕ್ ಪ್ರಿನ್ಸ್ ಮತ್ತೆ ವಿಭಿನ್ನ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆ ಮಾಡಲು ತಯಾರಾಗಿದ್ದಾರೆ.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

ಈ ಬಾರಿ ಪ್ರಜ್ವಲ್ ದೇವರಾಜ್ ಅವರು ಭೂಗತ ಲೋಕದತ್ತ ತಮ್ಮ ಕಣ್ಣು ನೆಟ್ಟಿದ್ದಾರೆ. ಮಾಫಿಯಾ ವಿಷಯವಾದ 'ಠಾಕ್ರೆ' ಎಂಬ ಚಿತ್ರದ ಮೂಲಕ ಡೈನಾಮಿಕ್ ಪ್ರಿನ್ಸ್ ಮತ್ತೆ ಸುದ್ದಿ ಮಾಡಿದ್ದಾರೆ. ಮುಂದೆ ಓದಿ.....

ಡೆಡ್ಲಿ ಆದಿತ್ಯರ ಜಾಗಕ್ಕೆ ಪ್ರಜ್ವಲ್ ದೇವರಾಜ್

ಡೆಡ್ಲಿ ಆದಿತ್ಯರ ಜಾಗಕ್ಕೆ ಪ್ರಜ್ವಲ್ ದೇವರಾಜ್

ಈ ಮೊದಲು ಈ ಚಿತ್ರದಲ್ಲಿ ನಟ 'ಡೆಡ್ಲಿ' ಆದಿತ್ಯ ಅವರು ನಾಯಕನ ಪಾತ್ರ ವಹಿಸಬೇಕಿತ್ತು. ಆದರೆ ಕೆಲವಾರು ಬದಲಾವಣೆಗಳಿಂದ ಆದಿತ್ಯ ಜಾಗಕ್ಕೆ ಪ್ರಜ್ವಲ್ ದೇವರಾಜ್ ಅವರು ಬಂದಿದ್ದಾರೆ.[ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ?]

ಠಾಕ್ರೆ ಕುಟುಂಬಕ್ಕೂ ಸಿನಿಮಾಗೂ ಸಂಬಂಧವಿಲ್ಲ

ಠಾಕ್ರೆ ಕುಟುಂಬಕ್ಕೂ ಸಿನಿಮಾಗೂ ಸಂಬಂಧವಿಲ್ಲ

ಅಂದಹಾಗೆ ಮಾಫಿಯಾ ಕಥೆಯಾಧರಿತ ಈ ಚಿತ್ರಕ್ಕೂ, ಮುಂಬೈನ ದಿವಂಗತ ರಾಜಕಾರಣಿ ಭಾಳಾ ಸಾಹೇಬ್ ಠಾಕ್ರೆ ಮತ್ತವರ ಕುಟುಂಬಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುತ್ತಾರೆ ಚಿತ್ರತಂಡದವರು. ಶೀರ್ಷಿಕೆ ತುಂಬಾ ಸ್ಟ್ರಾಂಗ್ ಇರೋದ್ರಿಂದ ಇದನ್ನೇ ಚಿತ್ರಕ್ಕೆ ಇಡಲಾಗಿದೆಯಂತೆ.

ಕ್ರೇಜಿಸ್ಟಾರ್ ಕೂಡ ಇದ್ದಾರೆ

ಕ್ರೇಜಿಸ್ಟಾರ್ ಕೂಡ ಇದ್ದಾರೆ

ಈ ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ನಟ ಪ್ರಜ್ವಲ್ ದೇವರಾಜ್ ಅವರ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ 'ರಾಜಾಹುಲಿ' ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಕೇಶ ವಿನ್ಯಾಸ ಬದಲಾಯಿಸಿದ ಪ್ರಜ್ವಲ್

ಕೇಶ ವಿನ್ಯಾಸ ಬದಲಾಯಿಸಿದ ಪ್ರಜ್ವಲ್

ಸದ್ಯಕ್ಕೆ ಪ್ರಜ್ವಲ್ ಅವರು ಈ ಚಿತ್ರಕ್ಕಾಗಿ ತಮ್ಮ ಕೇಶ ವಿನ್ಯಾಸವನ್ನು ಬದಲಾಯಿಸಿದ್ದು, ಉದ್ದ ಕೂದಲು ಬೆಳೆಸುತ್ತಿದ್ದಾರೆ. ಜೊತೆಗೆ ಪ್ರಜ್ವಲ್ ಅವರು ಎರಡು ಛಾಯೆಯಲ್ಲಿ ಮಿಂಚುತ್ತಿದ್ದು, ಒಳ್ಳೆಯ ಮತ್ತು ಕೆಟ್ಟ ಛಾಯೆಯನ್ನು ಸಮತೋಲನ ಮಾಡುತ್ತಿದ್ದಾರೆ.

More from Filmibeat

English summary
Kannada Actor Prajwal Devaraj seems to be going back to his initial days of success with gangster movies like 'Gelaya' and 'Jeeva'. With his next movie is 'Thackeray'. Actor Ravichandran lead role. The movie is directed by Guru Deshpande.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X