ಲಾಯರ್ ಆದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ
ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂದ್ಹಾಗೆ, ರಾಗಿಣಿ ಯಾಕೆ ಕೋರ್ಟ್ ಗೆ ಹೋಗಿದ್ದಾರೆ ಅಂತ ಅಚ್ಚರಿ ಪಡಬೇಡಿ. ಇದು ರಿಯಲ್ ಅಲ್ಲ ರೀಲ್. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಮುಂದಿನ ಸಿನಿಮಾದಲ್ಲಿ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಗಿಣಿ ಚಂದ್ರನ್ ಚೊಚ್ಚಲ ಬಾರಿಗೆ ನಾಯಕಿಯಾಗಿ 'ಲಾ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ರಾಗಿಣಿ ಕೋಟ್ ಧರಿಸಿ ಕೋರ್ಟ್ ನಲ್ಲಿ ವಾದ ಮಂಡಿದ್ದಾರೆ. ಹೌದು, 'ಲಾ' ಸಿನಿಮಾದಲ್ಲಿ ರಾಗಿಣಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಲಾ' ಹೆಸರೇ ಹೇಳುವ ಹಾಗೆ ಇದು ಕಾನೂನಿನ ಬಗ್ಗೆ ಇರುವ ಸಿನಿಮಾ. ಜೊತೆಗೆ ನಾಯಕಿ ಪ್ರಧಾನ ಚಿತ್ರವಾಗಿದೆ. ನಿರ್ದೇಶಕ ರಘು ಸಮರ್ಥ್ ನಿರ್ದೇಶದಲ್ಲಿ ಮೂಡಿಬಂದಿರುವ 'ಲಾ' ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ತಯಾರಾಗಿದೆ.

'ಲಾ' ಇದು ಕ್ರೈಂ ಥ್ರಿಲ್ಲರ್ ಸಿನಿಮಾ ವಾಗಿದೆ. ಚಿತ್ರದ ನಾಯಕಿ ಕಾನೂನು ಪಧವಿದರೆ, ಆಕೆ ತನ್ನದೆ ಪ್ರಕರಣದಲ್ಲಿ ಸಿಲುಕಿಕೊಂಡು ಹೇಗೆ ಹೊರ ಬರುತ್ತಾಳೆ ಅನ್ನುವುದೇ ಚಿತ್ರದ ಮುಖ್ಯ ತಿರುಳು.

ಪ್ರಜ್ವಲ್ ಪತ್ನಿ ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಚಿತ್ರ ಇದಾಗಿದೆ. ಈ ಮೊದಲು ಜಾಹಿರಾತು ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಜೊತೆಗೆ 'ರಿಷಭ ಪ್ರಿಯ' ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ಈಗಾಗಲೇ 'ಲಾ' ಚಿತ್ರತಂಡ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.


Click it and Unblock the Notifications











