ರೈಗಳ 'ಕಾವೇರಿ' ರಾಮಾಯಣ: ಕನ್ನಡಿಗರಾಗಿ ಪ್ರಕಾಶ್ ಹೀಗಾ ಮಾಡೋದು?

By Sony

ಬಹುಮುಖ ಪ್ರತಿಭೆ ನಟ ಪ್ರಕಾಶ್ ರೈ ಅವರು ಬರೀ ಸಿನಿಮಾ ಮಾತ್ರವಲ್ಲದೇ ಸಿನಿಮೇತರ ಕೆಲಸಗಳಾದ ಸಮಾಜ ಸೇವೆ, ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಮಾಡೋದು ಇತ್ಯಾದಿ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕನ್ನಡಿಗರಾದ ನಟ ಪ್ರಕಾಶ್ ರಾಜ್ ಅವರು ಮೊದಲು ಕನ್ನಡ ಚಿತ್ರರಂಗದಲ್ಲಿಯೇ ತಮ್ಮ ಜರ್ನಿ ಶುರು ಮಾಡಿ, ತದನಂತರ ಬೇರೆ-ಬೇರೆ ಭಾಷೆಗಳಲ್ಲಿ ಮಿಂಚುವ ಮೂಲಕ, ಇದೀಗ ಒಬ್ಬ ಪ್ರತಿಭಾವಂತ ಕಲಾವಿದನಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಇವರಿಗೆ ಎಲ್ಲಾ ಚಿತ್ರರಂಗದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಬರೀ ಇವರ ಸಿನಿಮಾ ನೋಡಿ ಮಾತ್ರವಲ್ಲದೇ ಇವರ ಸಮಾಜ ಸೇವೆಯನ್ನು ಕೂಡ ಗುರುತಿಸಿ ಕೆಲವರು ಇವರಿಗೆ ಅಭಿಮಾನಿಗಳಾಗಿದ್ದಾರೆ. ಸದ್ಯಕ್ಕೆ 'ಇದೊಳ್ಳೆ ರಾಮಾಯಣ' ಅಂತ ಕನ್ನಡ ಸಿನಿಮಾ ಮಾಡಿದ್ದು, ಅದು ತೆರೆಗೆ ಬರಲು ಸಜ್ಜಾಗಿದೆ.['ಯು' ಪ್ರಮಾಣಪತ್ರಕ್ಕೆ ಪ್ರಕಾಶ್ ರಾಜ್ ಹೆಚ್ಚಿನ ಒತ್ತು ಕೊಡೋದ್ಯಾಕೆ?]

ಇಂತಹ ಅಪರೂಪದ ನಟ ಇದೀಗ 'ಕಾವೇರಿ ನೀರು' ವಿಚಾರದಲ್ಲಿ ಮಾತ್ರ ಬೇಕಾ-ಬಿಟ್ಟಿ ವರ್ತಿಸಿದ್ದು, ಕನ್ನಡಿಗರ ಕಣ್ಣು ಕೆಂಪು ಮಾಡಿದೆ. ಅಷ್ಟಕ್ಕೂ ಏನಾಯ್ತು, ನೋಡಲು ಮುಂದೆ ಓದಿ....

ಪ್ರಕಾಶ್ ರೈ ಸಂದರ್ಶನ

ಪ್ರಕಾಶ್ ರೈ ಸಂದರ್ಶನ

'ಇದೊಳ್ಳೆ ರಾಮಾಯಣ' ಚಿತ್ರ ಅಕ್ಟೋಬರ್ 7 ರಂದು ತೆರೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಖಾಸಗಿ ಚಾನೆಲ್ ಜನಶ್ರೀಯವರು, ನಟ ಪ್ರಕಾಶ್ ರಾಜ್ ಅವರನ್ನು ಸಂದರ್ಶನ ಮಾಡಿದ್ದರು. ಸಂದರ್ಶನದ ನಡುವೆ ಸಂದರ್ಶಕಿ, ನಟ ಪ್ರಕಾಶ್ ರೈ ಅವರಿಗೆ 'ಕಾವೇರಿ ನೀರು' ವಿವಾದದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರಕಾಶ್ ಅವರು ನೀಡಿದ ಉತ್ತರ ಇದೀಗ ಸುದ್ದಿಗೆ ಗ್ರಾಸವಾಗಿದೆ.[50ರ ಹರೆಯದಲ್ಲಿ ಗಂಡು ಮಗುವಿಗೆ ತಂದೆಯಾದ ಪ್ರಕಾಶ್ ರೈ]

ರೈಗಳ ಕಾವೇರಿ ಕಿಡಿ-ಕಿಡಿ

ರೈಗಳ ಕಾವೇರಿ ಕಿಡಿ-ಕಿಡಿ

'ಕಾವೇರಿ ನೀರು' ವಿವಾದದ ಬಗ್ಗೆ ಒಬ್ಬ ಕನ್ನಡಿಗರಾಗಿ ನೀವು ಏನು ಹೇಳೋಕೆ ಇಚ್ಛಿಸ್ತೀರಾ ಅಂತ ಸಂದರ್ಶಕಿ ಕೇಳಿದ ಪ್ರಶ್ನೆಗೆ, ಪ್ರಕಾಶ್ ರಾಜ್ ಅವರು ಸಿಡಿಮಿಡಿಗೊಂಡು 'ನಟ-ನಿರ್ಮಾಪಕ-ನಿರ್ದೇಶಕ ಪ್ರಕಾಶ್ ರೈ ಅವರು, 'ಇದೊಳ್ಳೆ ರಾಮಾಯಣ' ಸಿನಿಮಾದ ಬಗ್ಗೆ ಮಾತಾಡ್ತಾ ಇದ್ದೀವಿ. ಆದ್ರೆ ನೀವು ಏನೂಂತ ಪ್ರಶ್ನೆ ಮಾಡುತ್ತೀದ್ದೀರಾ' ಎಂದು ಕೋಪದಿಂದ ಕಿಡಿಯಾಗಿದ್ದಾರೆ.[ಕಾವೇರಿ ವಿವಾದದ ಬಗ್ಗೆ 'ಕುರುಬನ ರಾಣಿ' ನಗ್ಮಾ ಉವಾಚ]

ನನ್ನನ್ನು ಈ ವಿಚಾರಕ್ಕೆ ಎಳಿಬೇಡಿ-ಪ್ರಕಾಶ್

ನನ್ನನ್ನು ಈ ವಿಚಾರಕ್ಕೆ ಎಳಿಬೇಡಿ-ಪ್ರಕಾಶ್

'ಇಲ್ಲಿ ರಾಜಕೀಯ ಅನ್ನೋದು ದೊಡ್ಡ ವಿಷ್ಯ, ಅದು ಬೇರೆ ವಿಷ್ಯ. ನಾವು ಅಂದುಕೊಂಡಷ್ಟು ಚಿಕ್ಕ ವಿಷಯ ಅಲ್ಲ ಅದು. ತುಂಬಾ ಆಳವಾದ ವಿಷಯ ಅದು. ನಮ್ಮ ರೈತರ ಸಮಸ್ಯೆ ಬರೀ ನೀರು ಮಾತ್ರ ಅಲ್ಲ, ಬಹಳಷ್ಟು ಸಮಸ್ಯೆಗಳಿವೆ ತುಂಬಾ ಗಂಭೀರವಾಗಿ ಮಾತಾಡಬೇಕು. ಈ ತರದ ಸಿನಿಮಾ ವಿಚಾರದ ಕಾರ್ಯಕ್ರಮಗಳಲ್ಲಿ ಸುಮ್ಮ-ಸುಮ್ಮನೆ ಬಾಯಿಗೆ ಬಂದಂತೆ ಪ್ರಶ್ನೆಗಳನ್ನು ಕೇಳಿ, ನನ್ನನ್ನು ಈ ವಿಚಾರಕ್ಕೆ ಎಳಿಬೇಡಿ'. -ಪ್ರಕಾಶ್ ರಾಜ್.

ನಿಮಗೇನ್ರಿ ಸಿಗುತ್ತೆ?

ನಿಮಗೇನ್ರಿ ಸಿಗುತ್ತೆ?

ಸಂದರ್ಶನ ರೆಕಾರ್ಡ್ ಮಾಡುತ್ತಿದ್ದ ಕ್ಯಾಮೆರಾ ಪರ್ಸನ್ ಗೆ ನಿಲ್ಲಿಸಿ ಎಂದು ಹೇಳಿದ ಪ್ರಕಾಶ್ ರಾಜ್ ಅವರು, 'ನಿಮಗೆ ಇದರಿಂದ ಏನ್ರೀ ಸಿಗುತ್ತೆ, ಎಲ್ಲರೂ ಮಾತಾಡ್ತಾ ಇದ್ದಾರೆ, ಜನರು ಆಗಲೇ ಕೋಪದಲ್ಲಿ ಇದ್ದಾರೆ, ನೋವಿನಲ್ಲಿ ಇದ್ದಾರೆ. ಸಿನಿಮಾ ನಟನಿಂದ ಇದರ ಬಗ್ಗೆ ಏನೋ ಕೇಳ್ಕೊಂಡು, ಇದೆಲ್ಲಾ ಯಾಕೆ, ಯಾಕೆ ಬರುತ್ತೆ ನಿಮಗೆ ಕೆಟ್ಟ ಬುದ್ದಿ. ಇದೆಲ್ಲಾ ಮಾತಾಡೋಕೆ ಸಮಯ ಇದಲ್ಲ. ದಯವಿಟ್ಟು ನೀವು ಜವಾಬ್ದಾರಿಯಿಂದ ಇರಬೇಕು. ಇದನ್ನೆಲ್ಲಾ ನೀವು ರೆಕಾರ್ಡ್ ಮಾಡಿ ಹೇಳಬೇಕು ಜನರಿಗೆ. ನಿಮಗೆ ಯಾಕೆ ಆ ಜವಾಬ್ದಾರಿ ಇಲ್ಲ. ಬಾಯಿಗೆ ಬಂದ ಹಾಗೆ ಯಾಕೆ ಕೇಳ್ತೀರಿ. ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳಬೇಕು ಅನ್ನೋ ಕನಿಷ್ಟ ತಾಳ್ಮೆ ಇಲ್ಲದಿದ್ದರೆ, ತಪ್ಪಲ್ವಾ?, ಇದು ಮೇಡಂ.-ಪ್ರಕಾಶ್ ರೈ

ನನಗೆ ಯಾಕೆ ಈ ಪ್ರಶ್ನೆ ಮಾಡಿದಿರಿ-ಪ್ರಕಾಶ್

ನನಗೆ ಯಾಕೆ ಈ ಪ್ರಶ್ನೆ ಮಾಡಿದಿರಿ-ಪ್ರಕಾಶ್

'ನಾನೇನು ಪಾಪ ಮಾಡಿದ್ದೇನೆ ನಿಮಗೆ, ನೀವು ಯಾಕೆ ಈ ಪ್ರಶ್ನೆ ಮಾಡಿದ್ರಿ ನನಗೆ, 'ಇದೊಳ್ಳೆ ರಾಮಾಯಣ'ದ ನಡುವೆ ಆ ಪ್ರಶ್ನೆ ಯಾಕೆ ಬಂತು. ನಾನು ಕೇಳೋದು ಇಷ್ಟೆ, ಈ ಮೀಟಿಂಗ್ ನಲ್ಲಿ ಅದರ ಬಗ್ಗೆ ಪ್ರಶ್ನೆ ಯಾಕೆ ಬಂತು. ನಿಮಗೆ ಯಾಕೆ ಬೇಕು, ಇಲ್ಲಿರುವಂತಹ ನಟರು, ಅಲ್ಲಿರುವಂತಹ ನಟರು ಯಾಕೆ ಬೇಕು ನಿಮಗೆ. ಎಲ್ಲರೂ ನಟರೇ, ಎಲ್ಲರೂ ಮನುಷ್ಯರೇ. ಸಮಸ್ಯೆ ಬೇರೆ ಇದೆ, ಎಲ್ಲರಿಗೂ ಗೊತ್ತು ಅದು. ಕಾಂಟ್ರವರ್ಸಿ ಬೇಕಾ ನಿಮಗೆ?, ನನ್ನ ಜವಾಬ್ದಾರಿ ಏನೂಂತ ನನಗೆ ಗೊತ್ತು, ಮೊದ್ಲು ನೀವು ನಿಮ್ಮ ಜವಾಬ್ದಾರಿ ಬಗ್ಗೆ ತಿಳ್ಕೊಳ್ಳಿ'-ಪ್ರಕಾಶ್ ರೈ.

ನಿರ್ದೇಶಕಿ ಸುಮನಾ ಕಿತ್ತೂರ್ ಪ್ರತಿಕ್ರಿಯೆ

ನಿರ್ದೇಶಕಿ ಸುಮನಾ ಕಿತ್ತೂರ್ ಪ್ರತಿಕ್ರಿಯೆ

"ಒಬ್ಬ ಜವಾಬ್ದಾರಿಯುತ ಕಲಾವಿದರಾಗಿ ನೀವು ಹೀಗೆ ನಡೆದುಕೊಳ್ಳುವ ಅವಶ್ಯಕತೆ ಇತ್ತೇ ಪ್ರಕಾಶ್ ರೈ ಅವರೆ?!" ಅಂತ 'ಕಿರಗೂರಿನ ಗಯ್ಯಾಳಿಗಳು' ಖ್ಯಾತಿಯ ನಿರ್ದೇಶಕಿ ಸುಮನಾ ಕಿತ್ತೂರ್ ಅವರು, ಪ್ರಕಾಶ್ ರೈ ಅವರ ವರ್ತನೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

More from Filmibeat

English summary
Imprudent and unprecedented behaviour of Senior Actor Prakash Rai, when asked about his views on Cauvery issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X