Prakash Raj: ನಟ ಪ್ರಕಾಶ್​ ರಾಜ್‌ಗೆ ಜೀವ ಬೆದರಿಕೆ, ವಿಕ್ರಮ್ ಟಿವಿ ವಿರುದ್ಧ ಪ್ರಕರಣ

ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಂದ್ರಯಾನ, ಸನಾತನ ಧರ್ಮಗಳ ಬಗ್ಗೆ ಹೇಳಿಕೆ ನೀಡಿ, ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಅವರು ಯೂಟ್ಯೂಬ್​ ಚಾನೆಲ್ ಒಂದರ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.

ಪ್ರಕಾಶ್ ರಾಜ್ ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಬೆಂಗಳೂರಿನಲ್ಲಿ ದೂರು ನೀಡಿದ್ದರು. ವಿಕ್ರಮ್ ಟಿವಿ ಯೂಟ್ಯೂಬ್​ ಚಾನೆಲ್ ನಲ್ಲಿ ಪ್ರಸಾರ ಮಾಡಲಾದ ಎರಡು ವಿಡಿಯೋಗಳಲ್ಲಿ ಜೀವ ಬೆದರಿಕೆ ಹಾಕಲಾಗಿದ ಎಂದು ಆರೋಪಿಸಿದ್ದರು. ದೂರಿನ ಹಿನ್ನೆಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

Actor Prakash Raj filed complaint against vikram tv youtube channel

ಟಿವಿ ವಿಕ್ರಮ ವಿರುದ್ಧ ಎಫ್‌ಐಆರ್

ಆಗಸ್ಟ್ 14 ರಂದು ವಿಕ್ರಮ ಟಿವಿಯಲ್ಲಿ ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ನಟ ತಮ್ಮ ದೂರಿನಲ್ಲಿ ಎರಡು ವಿಡಿಯೋಗಳ ಬಗ್ಗೆ ಪ್ರಕಾಶ್ ರಾಜ್ ಆಕ್ಷೇಪ ವ್ಯಕ್ತಪಡಿಸಿ, ವಿಡಿಯೋ ಲಿಂಕ್ ಉಲ್ಲೇಖಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಆಧರಿಸಿ ಪೊಲೀಸ್ ಅಧಿಕಾರಿಗಳು ವಿಕ್ರಮ್ ಟಿವಿ ಮುಖ್ಯಸ್ಥರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕಾಶ್ ರಾಜ್ ದೂರಿನಲ್ಲಿ ಏನಿದೆ?

ದೂರಿನಲ್ಲಿ " ವಿಕ್ರಮ್ ಟಿವಿ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಎರಡು ವಿಡಿಯೋ ನೋಡಿದೆ. ಸ್ಟಾಲಿನ್ ಪ್ರಕಾಶ್ ರಾಜ್​ನಂಥವರನ್ನು ಮುಗಿಸಬೇಕಾ..? ಹಿಂದೂಗಳು ಮಾಡಬೇಕಾಗಿರೋದು ಏನು..? ಸನಾತನ ಧರ್ಮ/ ಹಿಂದೂಗಳೇ ಮಲಗೇ ಇರ್ತಿರಾ..? ನಿಮ್ಮ ರಕ್ತ ಕುದಿಯೋದಿಲ್ಲವಾ? ಎಂದು ವಿಡಿಯೋದಲ್ಲಿ ಪ್ರಚೋದಕಾರಿ ಮಾತುಗಳನ್ನಾಡಲಾಗಿದೆ. ಈ ವಿಡಿಯೋಗಳಲ್ಲಿ ಸಾವಿರಾರು ಮಂದಿ ನೋಡಿದ್ದಾರೆ. ವಿಡಿಯೋದಲ್ಲಿರುವ ಅಂಶಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುವಂತಹವು. ವಿಡಿಯೋ ಮಾಡಿರುವ ವಿಕ್ರಮ್ ಟಿವಿ ಮುಖ್ಯಸ್ಥರು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.

ನಟ ಪ್ರಕಾಶ್​ ರಾಜ್​ ದೂರಿನ ಆಧಾರದಲ್ಲಿ ಅಶೋಕನಗರ ಪೊಲೀಸರು ಜೀವ ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ.

More from Filmibeat

English summary
Actor Prakash Raj filed complaint against vikram tv youtube channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X