"ಚಕ್ರವರ್ತಿಯು ಬೆತ್ತಲಾಗಿದ್ದಾನೆ… ಈಗ ಮತ್ತೊಬ್ಬರ ಸಹಾಯದೊಂದಿಗೆ ನಡೆಯಲೇಬೇಕಾಗಿದೆ": ಪ್ರಕಾಶ್ ರಾಜ್
ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು ಸದ್ಯಕ್ಕೆ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಎನ್‌ಡಿಎ ಸರ್ಕಾರ ರಚಿಸುವುದು ಸುಲಭವಾಗಿದ್ದರೂ ಇಂಡಿಯಾ ಮೈತ್ರಿಕೂಟ ಕೂಡ ಒಂದು ಕೈ ನೋಡುವ ಲೆಕ್ಕಾಚಾರದಲ್ಲಿದೆ. ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ ಎನ್ನಬಹುದು.
ಫಲಿತಾಂಶವನ್ನು ಒಬ್ಬೊಬ್ಬರು ಒಂದೊಂದು ರೀತಿ ಬಣ್ಣಿಸುತ್ತಿದ್ದಾರೆ. ಒಂದರ್ಥದಲ್ಲಿ ಇದು ಬಿಜೆಪಿಯ ಸೋಲು ಎಂದೇ ಕೆಲವರು ಹೇಳುತ್ತಿದ್ದಾರೆ. 2 ಬಾರಿ ಸಿಭದ್ರ ಸರ್ಕಾರ ನೀಡಿದ ಪಕ್ಷ ಈ ಬಾರಿ ಸರಳ ಬಹುಮತ ಗಳಿಸಿಲ್ಲ. ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡೇ ಮುಂದುವರೆಯಬೇಕಿದೆ. ಅದು ಅನಿವಾರ್ಯ ಸಹ ಆಗಿದೆ ಎನ್ನುತ್ತಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ನಟ ಪ್ರಕಾಶ್ ರಾಜ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಕ್ರವರ್ತಿ ಬೆತ್ತಲಾಗಿದ್ದಾನೆ... ಅವನು ಈಗ ಅನಿವಾರ್ಯವಾಗಿ ಬೇರೊಬ್ಬರ ಬೆಂಬಲದೊಂದಿಗೆ ಮುನ್ನಡೆಯಬೇಕಿದೆ" ಎಂದು ನಕ್ಕಿದ್ದಾರೆ. INDIA ಹಾಗೂ ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು . ಅವರ ಅಹಂಕಾರವನ್ನು ಪಂಕ್ಚರ್ ಮಾಡಿದ್ದಕ್ಕಾಗಿ ಮತ್ತು ಅವರ ಸ್ಥಾನವನ್ನು ತೋರಿಸಿದ್ದಕ್ಕಾಗಿ.. ನಾವು ನಮ್ಮ ದೇಶಕ್ಕಾಗಿ ಚೆನ್ನಾಗಿ ಹೋರಾಡಿದ್ದೇವೆ .. ನಾವು ಹೀಗೆ ಮುಂದುವರಿಯುತ್ತೇವೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications










