'ಹಿಂದಿ ದಿವಸ್' ವಿರೋಧಿಸಿದ ನಟ ಪ್ರಕಾಶ್ ರಾಜ್
Recommended Video
'ಹಿಂದಿ ದಿವಸ್' ಆಚರಣೆಯನ್ನು ಕನ್ನಡಿಗರು ವಿರೋಧ ಮಾಡಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಮಾತುಗಳು ಜೋರಾಗಿದೆ. ನಟ ಪ್ರಕಾಶ್ ರಾಜ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರೆ.
ಬಹು ಭಾಷಾ ನಟ ಪ್ರಕಾಶ್ ರಾಜ್ ಕರ್ನಾಟಕದವರು. ಹೀಗಾಗಿ ಹಿಂದಿ ಹೇರಿಕೆ ವಿರುದ್ಧ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ಹಿಂದಿ ದಿವಸ್' ಆಚರಣೆಯನ್ನು ವಿರೋಧ ಮಾಡಿದ್ದಾರೆ.
''ನನ್ನ ತಾಯಿ ಕನ್ನಡ.. ನನ್ನ ದೇಶ ಭಾರತ.. ನಾನು ಒಬ್ಬ ಭಾರತದ ಕನ್ನಡಿಗ. #StopHindiImposition ಮಿಸ್ಟರ್ ಹೋಮ್ ಬ್ರೇಕರ್. ರಾಷ್ಟೀಯತೆಯ ವೇಷದಲ್ಲಿ ಒಂದು ಧರ್ಮ.. ಒಂದು ಭಾಷೆ.. ಎಂದು ಏನು.. #justasking'' ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಕನ್ನಡದ ಬಗ್ಗೆ ಮಾತನಾಡಿದ್ದರೂ, ಸಾಕಷ್ಟು ಕಾಮೆಂಟ್ ಗಳು ಅವರು ವಿರುದ್ಧ ಬಂದಿವೆ. ಈ ಹಿಂದೆ ಪ್ರಕಾಶ್ ರಾಜ್ ಮಾಡಿಕೊಂಡ ಎಡವಟ್ಟುಗಳು, ಹಾಗೂ ಕಾವೇರಿ ವಿಚಾರದ ಪ್ರಶ್ನೆ ಕೇಳಿದಾಗ ಗರಂ ಆದ ಸಂದರ್ಭಗಳು ಇದಕ್ಕೆ ಕಾರಣ ಆಗಿರಬಹುದು.

ಪ್ರಕಾಶ್ ಹೊರತು ಪಡಿಸಿ, ನಿರ್ದೇಶಕ ಜಯತೀರ್ಥ, ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್, ನಟ ಸತೀಶ್ ನೀನಾಸಂ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ಹಿಂದಿ ಹೇರಿಕೆಯನ್ನು ವಿರೋಧ ಮಾಡಿದ್ದಾರೆ.


Click it and Unblock the Notifications











