'ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ

By Suneetha

ಬಹು‍ಭಾಷಾ ನಟ ಪ್ರಕಾಶ್ ರಾಜ್ ಅವರು 'ಇದೊಳ್ಳೆ ರಾಮಾಯಣ' ಅಂತ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗುತ್ತಿದ್ದಾರೆ. ಈ ಮೊದಲು ಮಲಯಾಳಂ 'ಶಟರ್' ರಿಮೇಕ್ ಮೂಲಕ ಗಾಂಧಿನಗರಕ್ಕೆ ಬರ್ತಾ ಇದ್ದಾರೆ ಅಂತ ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.

ಇದೀಗ ಮತ್ತೆ ತಮ್ಮ ಸ್ವಂತ ಪ್ರೊಡಕ್ಷನ್ಸ್ ನಲ್ಲಿ 'ಇದೊಳ್ಳೆ ರಾಮಾಯಣ' ಅನ್ನೋ ಹೊಸ ಚಿತ್ರದ ಮೂಲಕ ಹಿಂತಿರುಗಿದ್ದಾರೆ. ಅಂದಹಾಗೆ ಈ ಚಿತ್ರ ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ಬರಲಿದೆ. ಕನ್ನಡದಲ್ಲಿ 'ಇದೊಳ್ಳೆ ರಾಮಾಯಣ' ಹಾಗೂ ತೆಲುಗು ವರ್ಷನ್ ನಲ್ಲಿ 'ಮನವೂರಿ ರಾಮಾಯಣ' ಅನ್ನೋ ವಿಭಿನ್ನ ಟೈಟಲ್ ನಲ್ಲಿ ಮೂಡಿಬರಲಿದೆ.[ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?]

Actor Prakash Raj's new film as director announced

ಎಲ್ಲಾ ಹೊಸಬರನ್ನೇ ಹಾಕಿಕೊಂಡು ಈ ವಿಭಿನ್ನ ಪ್ರಯತ್ನಕ್ಕೆ ಬಹುಮುಖ ಪ್ರತಿಭೆ ಪ್ರಕಾಶ್ ರಾಜ್ ಅವರು ಕೈ ಹಾಕಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಜೊತೆಗೆ ಈ ವಿಭಿನ್ನ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇನ್ನು ಹೆಚ್ಚಾಗಿ ಕನ್ನಡಿಗರದ್ದೇ ಗುಂಪು ಈ ಚಿತ್ರತಂಡದಲ್ಲಿರೋದು ವಿಶೇಷ ಆಕರ್ಷಣೆ.[ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ!]

ಡೈಲಾಗ್ ಗಳ ಸಂಪೂರ್ಣ ಜವಾಬ್ದಾರಿಯನ್ನು ಖ್ಯಾತ ಬರಹಗಾರ ಜೋಗಿ ಅವರು ವಹಿಸಿಕೊಂಡಿದ್ದು, ಒಟ್ನಲ್ಲಿ ಈ ಇಡೀ ತಂಡವನ್ನು ನೋಡುತ್ತಿದ್ದರೆ, 'ಒಗ್ಗರಣೆ'ಯಂತೆ ಇದು ಕೂಡ ಒಂದು ಸದಭಿರುಚಿಯ ಚಿತ್ರ ಅನ್ನೋದು ಪೋಸ್ಟರ್ ನೋಡುತ್ತಿದ್ದಂತೆ ಮನದಟ್ಟಾಗುತ್ತದೆ.['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]

ಸದ್ಯಕ್ಕೆ ನಟ-ನಿರ್ಮಾಪಕ-ನಿರ್ದೇಶಕ ಪ್ರಕಾಶ್ ರಾಜ್ ಅವರು ತಾವು ದತ್ತು ತೆಗೆದುಕೊಂಡ ಹಳ್ಳಿಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇನ್ನೇನು ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಕೂಡ ಆರಂಭಿಸುವುದಾಗಿ ತಿಳಿಸಿದ್ದಾರೆ.

More from Filmibeat

English summary
Actor Prakash Raj is wielding the megaphone for the fourth time. His new film is titled 'Edolle Ramayana' will be made in Kannada and Telugu languages. Maestro Ilayaraja will be composing the music. The main cast members will mostly be new faces, he said. The movie will commence its regular shortly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X