For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನವೂ ಪ್ರಧಾನಿ ವಿರುದ್ಧ ನಟ ಪ್ರಕಾಶ್​ ರಾಜ್​ ವ್ಯಂಗ್ಯ

  |

  ಇಂದು (ಸೆಪ್ಟೆಂಬರ್​ 17) ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ. ಭಾರತೀಯ ಚಿತ್ರರಂಗದ ಅನೇಕ ತಾರೆಯರು ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ದೇಶದ ಪ್ರಧಾನಿಗಳಿಗೆ ಚಿತ್ರರಂಗದ ಗಣ್ಯರು ಗೌರವ ಪೂರಕವಾಗಿ ಶುಭಾಶಯ ಕೋರಿದ್ದಾರೆ. ಆದರೆ ನಟ ಪ್ರಕಾಶ್​ ರಾಜ್​ ಮಾತ್ರ ಹುಟ್ಟುಹಬ್ಬದ ದಿನವೂ ಕೂಡ ಪ್ರಧಾನಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.

  ಮೊದಲಿನಿಂದ ಪ್ರಧಾನಿ ಮೋದಿ ವಿರೋಧಿಯಾಗಿರುವ ಪ್ರಕಾಶ್ ರಾಜ್​ ಪ್ರಧಾನಿಗಳ ಪ್ರತಿಯೊಂದು ನಡೆಯನ್ನು ಲೇವಡಿ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೇ ಸೋಶಿಯಲ್​ ಮೀಡಿಯಾಗಳಲ್ಲೂ ಪೋಸ್ಟ್​ ಹಂಚಿಕೊಂಡು ಆಗಾಗ ಪ್ರಧಾನಿ ಮೋದಿ ಹಾಗೂ ಬಿಜೆಪಿಗರ ಕಾಲು ಎಳೆಯುತ್ತಿರುತ್ತಾರೆ. ಆದರೆ ಇಂದು ಮೋದಿ ಹುಟ್ಟು ಹಬ್ಬದ ದಿನವೂ ಕೂಡ ಪ್ರಕಾಶ್​ ರಾಜ್​ ಪರೋಕ್ಷವಾಗಿ ಪ್ರಧಾನಿಗಳನ್ನು ಲೇವಡಿ ಮಾಡಿದ್ದಾರೆ.

  ಇಂದು(ಸೆಪ್ಟೆಂಬರ್​ 17)ರಂದು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಪ್ರಕಾಶ್​ ರಾಜ್​ ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಟಾಂಗ್​ ನೀಡಿದ್ದಾರೆ. ಹತ್ತಾರು ಕ್ಯಾಮರಾಗಳ ಮಧ್ಯೆ ಕೂತಿರುವ ತಮ್ಮದೇ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್​ ರಾಜ್​, #camerajeevi, #justasking ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೋಟೋ ಪ್ರಿಯ. ಅಭಿವೃದ್ಧಿ ಕೆಲಸಗಳನ್ನು ಮಾಡದೇ ಫೋಟೋಗೆ ಮಾತ್ರ ಪೋಸ್​ ನೀಡುತ್ತಾರೆ. ಕ್ಯಾಮರ ಜೀವಿ ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

  ಇನ್ನು ಈ ಹಿಂದೆ ಕೂಡ ಪ್ರಕಾಶ್​ ರಾಜ್​ ಪ್ರಧಾನಿಗಳ ನಡೆಯನ್ನು ಲೇವಡಿ ಮಾಡಿದ್ದರು. ಪ್ರಧಾನಿ ಮೋದಿ ಅವರು ಎಲ್ಲೇ ಹೋದರು ಅಲ್ಲಿನ ಸಾಂಪ್ರದಾಯ ಉಡುಗೆಗಳನ್ನು ತೊಡುತ್ತಿದ್ದರು. ಹಾಗೂ ಅಲ್ಲಿನ ಭಾಷೆಯಲ್ಲಿ ಮಾತನಾಡುವ ಯತ್ನ ಮಾಡುತ್ತಿದ್ದರು. ಇದನ್ನು ಕೂಡ ವ್ಯಂಗ್ಯ ಮಾಡಿದ್ದ ನಟ ಪ್ರಕಾಶ್​ ರಾಜ್​ ಇತ್ತೀಚಿಗೆ ಗಿರಿಧಾಮವೊಂದಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ವೇಷ ತೊಟ್ಟು, ನಾನು ನಮ್ಮ ಸರ್ವೋಚ್ಚ ನಾಯಕನಿಂದ ಪ್ರಭಾವಿತನಾಗಿ ಈ ವೇಷತೊಟ್ಟಿದ್ದೇನೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಕಾಲೆಳೆದಿದ್ದರು.

  ಪ್ರಕಾಶ್​ ರಾಜ್​ ಇಂದಿನ (ಸೆಪ್ಟೆಂಬರ್​ 17) ಪೋಸ್ಟ್ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಗರಂ ಆಗಿದ್ದಾರೆ, ಇನ್ನೂ ಕೆಲವರು ನಟ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Actor Prakash Raj sarcastic mock on PM Narendra Mod's birthday. and he shared a video ನಟ ಪ್ರಕಾಶ್​ ರಾಜ್​, ಪ್ರಧಾನಿ ನರೇಂದ್ರ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
  Saturday, September 17, 2022, 19:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X