twitter
    For Quick Alerts
    ALLOW NOTIFICATIONS  
    For Daily Alerts

    "ಹತ್ತಿದ ಏಣಿ ಮರೀಬಾರ್ದು": ರಶ್ಮಿಕಾ ಮಂದಣ್ಣ ಕಿವಿ ಹಿಂಡಿದ ಪ್ರಮೋದ್ ಶೆಟ್ಟಿ!

    |

    ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು. ರಶ್ಮಿಕಾನ ಬಾಯ್ಕಾಟ್ ಮಾಡಬೇಕು, ಬ್ಯಾನ್ ಮಾಡಬೇಕು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ. ಈ ಬಗ್ಗೆ ಶೆಟ್ಟರ ಬಳಗದಲ್ಲಿ ಗುರ್ತಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡುತ್ತಾ 'ಕಿರಿಕ್‌ ಪಾರ್ಟಿ' ಹೆಸರು ಹೇಳಿ ಪರಂವಃ ಡಿಯೋಸ್‌ ಹೆಸರು ಹೇಳಲು ಹಿಂದೇಟು ಹಾಕಿದ್ದರು. ಅದೊಂದು ಸಂಸ್ಥೆ ಎಂದು ಕೈ ಸನ್ನೆ ಮಾಡಿ ಕ್ಯಾತೆ ತೆಗೆದಿದ್ದರು. ಚಿತ್ರರಂಗದಲ್ಲಿ ಅವಕಾಶ ಕೊಟ್ಟ, ಬ್ರೇಕ್ ಕೊಟ್ಟ ಸಂಸ್ಥೆಯ ಹೆಸರನ್ನು ರಶ್ಮಿಕಾ ಹೇಳದೇ ಇದ್ದಿದ್ದು ಕನ್ನಡ ಸಿನಿಸಿಕರಿಗೆ ಬೇಸರ ತಂದಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಂದು ಸಂದರ್ಶನದಲ್ಲಿ ರಶ್ಮಿಕಾ ನಡೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ರಶ್ಮಿಕಾ ಕುರಿತ ಪ್ರಶ್ನೆಗೆ ಆಕೆಯ ಹೆಸರು ಹೇಳದೇ ಆಕೆಯ ಸ್ಟೈಲ್‌ನಲ್ಲೇ ಕೈ ಸನ್ನೆ ಮಾಡಿ ತಿರುಗೇಟು ನೀಡಿದ್ದರು.

    "ಯಾವುದನ್ನು ಕೂಡ ನಿರೀಕ್ಷೆ ಮಾಡಬಾರದು.. ರಶ್ಮಿಕಾ ಬ್ಯಾನ್ ಮಾಡಿದ್ರೆ ಕನ್ನಡ ಇಂಡಸ್ಟ್ರಿಗೆ ನಷ್ಟ": ಮೈನಾ ನಾಗಶೇಖರ್

    ಕಿರಿಕ್ ಬೆಡಗಿಯ ನಡೆ ಕೆಲವರ ಅಸಮಾಧಾನದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರಶ್ಮಿಕಾ ನಟನೆಯ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು. ಯಾರೂ ಆಕೆಯ ಸಿನಿಮಾ ನೋಡಬಾರದು. ಕಿರಿಕ್‌ ಬೆಡಗಿಯನ್ನು ಬ್ಯಾನ್ ಮಾಡಲಾಗಿದೆ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು.

    ಹತ್ತಿದ ಮೆಟ್ಟಿಲು ಮರೀಬಾರ್ದು

    ಹತ್ತಿದ ಮೆಟ್ಟಿಲು ಮರೀಬಾರ್ದು

    "ರಶ್ಮಿಕಾನ ಬ್ಯಾನ್ ಮಾಡಬೇಕು. ಆಕೆಯ ಸಿನಿಮಾಗಳು ರಿಲೀಸ್ ಆಗಬಾರದು ಎಂದು ನಾವು ಹೇಳುವುದಿಲ್ಲ. ಅದು ಅಭಿಮಾನಿಗಳ ಎಮೋಷನ್. ಯಾಕಂದದೆ ಅವರು ನಮ್ಮನ್ನು ಅಷ್ಟು ಪ್ರೀತಿ ಮಾಡಿರುತ್ತಾರೆ. ಅವರ ಪ್ರೀತಿಯನ್ನು ಈ ರೀತಿ ಹೊರ ಹಾಕುತ್ತಿದ್ದಾರೆ ಅಷ್ಟೆ. ಆದರೆ ಪ್ರತಿಯೊಬ್ಬರು ಹತ್ತಿದ ಮೆಟ್ಟಿಲು ಮರೀಬಾರ್ದು" ಎಂದು ದಿಗ್ವಿಜಯ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

    ರಶ್ಮಿಕಾ ಕಿವಿ ಹಿಂಡಿದ ಪ್ರಮೋದ್

    ರಶ್ಮಿಕಾ ಕಿವಿ ಹಿಂಡಿದ ಪ್ರಮೋದ್

    "ಪ್ರತಿಯೊಬ್ಬರು ತಾವು ಹತ್ತಿದ ಮೆಟ್ಟಿಲನ್ನು ಮರೆಯಬಾರದು. ಮರೆತರೆ ಅದು ನಿಮ್ ಇಷ್ಟ. ಹಲವು ವರ್ಷಗಳಿಂದ ಹತ್ತಿದ ಮೆಟ್ಟಿಲು ಮರೆಯಬೇಡ ಎಂದು ದೊಡ್ಡವರು ಹೇಳುತ್ತಾ ಬರ್ತಿದ್ದಾರೆ. ನೀವು ಹತ್ತಿದ ಮೆಟ್ಟಿಲನ್ನು ಒದ್ದು ಹೋದರೆ ಬೇರೆಯವರು ಏರಲು ಅವಕಾಶ ಇರುವುದಿಲ್ಲ. ಆ ಮೆಟ್ಟಿಲು ಹಾಗೆ ಇದ್ದರೆ ಮತ್ತೊಬ್ಬರು ಹತ್ತಿ ಮೇಲೆ ಬರುತ್ತಾರೆ" ಎಂದು ಪರೋಕ್ಷವಾಗಿ ರಶ್ಮಿಕಾ ಕಿವಿ ಹಿಂಡಿದ್ದಾರೆ.

    ನಮ್ಮದು ದೊಡ್ಡ ಗ್ಯಾಂಗ್

    ನಮ್ಮದು ದೊಡ್ಡ ಗ್ಯಾಂಗ್

    "ರಕ್ಷಿತ್, ರಿಷಬ್ ಅಥವಾ ನಾನಾಗಿರಬಹುದು. ನಮ್ಮದು ದೊಡ್ಡ ತಂಡ. ಮೇಲೆ ಮೂವರು ಶೆಟ್ಟರು ಕಂಡರೂ ನಮ್ಮದು ಬಹಳ ದೊಡ್ಡ ಗ್ಯಾಂಗ್. ಸಾಕಷ್ಟು ಜನ ಜನ ಬೇರೆಯವರು ನಮ್ಮ ಬಳಗದಲ್ಲಿ ಇದ್ದಾರೆ. ನಾವೆಲ್ಲಾ ಒಟ್ಟಿಗೆ ಹೋಗಬೇಕು ಎಂದು ಆಸೆಪಡುತ್ತೇವೆ. ಹತ್ತಿದ ಮೆಟ್ಟಿಲು ಹಾಗೇ ಇರಬೇಕು. ಇವರು ಮರೆತಿದ್ದಾರೆ ಎಂದರೆ ನಾವೇನು ಮಾಡೋಕೆ ಆಗೋಲ್ಲ" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

    ಶೆಟ್ಟರ ಬಳಗದ ಆಸ್ಥಾನ ಕಲಾವಿದ

    ಶೆಟ್ಟರ ಬಳಗದ ಆಸ್ಥಾನ ಕಲಾವಿದ

    'ಜುಗಾರಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಪ್ರಮೋದ್ ಶೆಟ್ಟಿ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಜ್ಞಾನೇಶ್ ಆಗಿ ನಟಿಸಿದ್ದರು. 'ಕಾಂತಾರ' ಚಿತರದಲ್ಲಿ ಗುಡ್ಡಿ ಸುಧಾಕರ ಪಾತ್ರದಲ್ಲಿ ಮಿಂಚಿದ್ದರು. ರಕ್ಷಿತ್‌ ಶೆಟ್ಟಿ, ರಿಷಬ್ ಶೆಟ್ಟಿ ಸಿನಿಮಾಗಳ ಆಸ್ಥಾನ ಕಲಾವಿದರಾಗಿ ಪ್ರಮೋದ್ ಗುರ್ತಿಸಿಕೊಂಡಿದ್ದಾರೆ.

    English summary
    Actor Pramod shetty Reacts to Rashmika Mandanna Ban trend. Pramod started his carrier as a theater artist. Pramod made his film debut in 2010 with film Jugari. Know More.
    Wednesday, December 7, 2022, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X