'ಪ್ರೀಮಿಯರ್ ಪದ್ಮಿನಿ' ಬಳಿಕ ಪ್ರಮೋದ್ ಹೊಸ ಸಿನಿಮಾ ಶುರು
'ಪ್ರೀಮಿಯರ್ ಪದ್ಮಿನಿ' ಸಿನಿಮಾ ನೋಡಿದವರಿಗೆ ಜಗ್ಗೇಶ್ ಪಾತ್ರ ಎಷ್ಟು ಇಷ್ಟ ಆಗಿತ್ತೋ ಅದೇ ರೀತಿ ಕಾರ್ ಡ್ರೈವರ್ ಪಾತ್ರ ಕೂಡ ಮೆಚ್ಚುಗೆಯಾಗಿತ್ತು. ಆ ಪಾತ್ರವನ್ನು ನಿರ್ವಹಿಸಿದ್ದು ನಟ ಪ್ರಮೋದ್.
ಧಾರಾವಾಹಿ ಹಾಗೂ ಕೆಲ ಸಿನಿಮಾಗಳ ಅನುಭವ ಹೊಂದಿರುವ ಪ್ರಮೋದ್ 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದರು. ಅವರ ಲವಲವಿಕೆಯ ನಟನೆ ಚಿತ್ರದ ಹೈಲೈಟ್ ಆಗಿತ್ತು.

ಈಗ ನಟ ಪ್ರಮೋದ್ ಹೊಸ ಸಿನಿಮಾ ಶುರು ಮಾಡಿದ್ದಾರೆ. 'ಮತ್ತೆ ಉದ್ಭವ' ಎನ್ನುವ ಹೊಸ ಚಿತ್ರಕ್ಕೆ ಪ್ರಮೋದ್ ನಾಯಕನಾಗಿದ್ದಾರೆ. ಕೋಡ್ಲು ರಾಮಕೃಷ್ಣ ಅವರ ಸಿನಿಮಾ ಇದಾಗಿದೆ.
'ಬೃಂದಾವನ' ಸಿನಿಮಾದ ನಟಿ ಮಿಲನ ನಾಗರಾಜ ಚಿತ್ರದ ನಾಯಕಿಯಾಗಿದ್ದಾರೆ. ರಂಗಾಯಣ ರಘು ಅವಿನಾಶ್, ಸುಧಾ ಬೆಳವಾಡಿ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಮುಹೂರ್ತ ಗುರುವಾರ ಬೆಂಗಳೂರಿನಲ್ಲಿ ನಡೆಯಲಿದೆ. ವಿ ಮನೋಹರ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
English summary
Kannada actor, Premier Padmini fame Pramod's new movie will will be launchingon june 6th.


Click it and Unblock the Notifications