ಕನ್ನಡ ನಟಿ ಪ್ರಣೀತಾ ಸುಭಾಷ್ ಮಾಡಿದ ಕೆಲಸಕ್ಕೆ ಭೇಷ್ ಎನ್ನಬೇಕು

Recommended Video

ನಟಿ ಪ್ರಣೀತಾ ಸುಭಾಷ್ ರ ಮೆಚ್ಚುವ ಸಾಮಾಜಿಕ ಕಾರ್ಯ | Filmibeat Kannada

ಕನ್ನಡ ಸಿನಿಮಾ ಮೂಲಕ ಅದೃಷ್ಟ ಪಡೆದುಕೊಂಡ ಕೆಲವು ನಟಿಯರು, ಪರಭಾಷೆಯಲ್ಲಿ ದೊಡ್ಡ ಆಫರ್ ಗಳು ಸಿಕ್ತು ಅಂತ ಹೋಗ್ತಾರೆ. ಆಮೇಲೆ ಕನ್ನಡದ ಕಡೆ ತಿರುಗಿ ನೋಡಲ್ಲ. ಆದ್ರೆ, ಇಂತಹ ನಟಿಯರ ಮಧ್ಯೆ ವಿಶೇಷವಾಗಿ ಗುರುತಿಸಿಕೊಂಡಿರುವ ಕಲಾವಿದೆ ಪ್ರಣೀತಾ ಸುಭಾಷ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಪ್ರಣೀತಾಗೆ ತೆಲುಗಿನಲ್ಲಿ ಹೆಚ್ಚು ಡಿಮ್ಯಾಂಡ್ ಬಂತು. ಹಾಗಂತ ಕನ್ನಡ ಸಿನಿಮಾಗಳನ್ನ ಬಿಟ್ಟಿಲ್ಲ. ಜೊತೆ ಜೊತೆಗೆ ಕನ್ನಡ ಸಿನಿಮಾಗಳನ್ನ ಮಾಡುತ್ತಾ, ಅತ್ತ ಟಾಲಿವುಡ್ ನಲ್ಲೂ ಅಭಿನಯಿಸುತ್ತಾ ಕನ್ನಡ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ನಟಿ ಈಗ ಇನ್ನೊಂದು ಒಳ್ಳೆಯ ಕೆಲಸ ಮಾಡಿ ಕರ್ನಾಟಕ ಜನರ ಹೃದಯ ಗೆದ್ದಿದ್ದಾರೆ. ಇಂದು ಪ್ರಣೀತಾ ಸುಭಾಷ್ ಅವರ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದನ್ನ ದತ್ತು ಪಡೆದು ಅದರ ಅಭಿವೃದ್ದಿಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಓದಿ..

ಸರ್ಕಾರಿ ಶಾಲೆ ದತ್ತು ಪಡೆದ ನಟಿ

ಸರ್ಕಾರಿ ಶಾಲೆ ದತ್ತು ಪಡೆದ ನಟಿ

ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯೊಂದನ್ನು ನಟಿ ಪ್ರಣೀತಾ ಸುಭಾಷ್ ದತ್ತು ತೆಗೆದುಕೊಳ್ಳಲು ನಿರ್ಧಾರಿಸಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿಯಿಂದ ರಾಜ್ಯ ಶಿಕ್ಷಣ ರಾಯಭಾರಿಯಾಗಿ ಆಯ್ಕೆಯಾದ ನಟಿ ಪ್ರಣಿತಾ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು 5 ಲಕ್ಷ ರೂ. ಸಹಾಯ ಧನ ನೀಡುವ ಮೂಲಕ ಗಮನ ಸೆಳೆದರು.

'ಟೀಚ್ ಫಾರ್ ಚೇಂಚ್'ನಲ್ಲಿ ಪ್ರಣೀತಾ

'ಟೀಚ್ ಫಾರ್ ಚೇಂಚ್'ನಲ್ಲಿ ಪ್ರಣೀತಾ

ಈ ಹಿಂದೆ 'ಟೀಚ್ ಫಾರ್ ಚೇಂಚ್' ಆಂದೋಲನದಲ್ಲಿ ಭಾಗಿಯಾಗಿದ್ದರು ಪ್ರಣೀತಾ. ಆ ಸಮಯದಲ್ಲಿ ಕೆಲ ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಕೂಡ ಮಾಡಿದ್ದರು. ಸಿನಿಮಾಗಳ ಜೊತೆ ಹೀಗೆ ಸಮಾಜಮುಖಿ ಕೆಲಸಗಳಲ್ಲೂ ನಟಿ ತೊಡಗಿಸಿಕೊಂಡಿರುವುದು ನಿಜಕ್ಕೂ ಮೆಚ್ಚುವ ವಿಚಾರ.

ಪ್ರಣೀತಾ ಕಣ್ಣಾರೆ ಕಂಡಿದ್ದ ಸ್ಥಿತಿ

ಪ್ರಣೀತಾ ಕಣ್ಣಾರೆ ಕಂಡಿದ್ದ ಸ್ಥಿತಿ

ಈ ಹಿಂದೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ನೈಜ ಸ್ಥಿತಿ ಅರ್ಥವಾಯಿತು. ಮೂಲಸೌಲಭ್ಯಗಳಿಲ್ಲದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಶಾಲೆಯಲ್ಲಿ ಶೌಚಾಲಯಗಳೇ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಯರೂ ಪರದಾಡುವಂತಾಗುತ್ತಿತ್ತು. ಈ ದುಸ್ಥಿತಿಯನ್ನು ಅರಿತು ನಾನು ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಂದಾಗಿರುವೆ ಎಂದು ಹೇಳಿದ್ದಾರೆ.

ಕೊನೆಯ ಕನ್ನಡ ಸಿನಿಮಾ

ಕೊನೆಯ ಕನ್ನಡ ಸಿನಿಮಾ

2017ರಲ್ಲಿ ಬಿಡುಗಡೆಯಾಗಿದ್ದ ಮಾಸ್ ಲೀಡರ್ ಪ್ರಣೀತಾ ಅಭಿನಯಿಸಿದ್ದ ಕೊನೆಯ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಅಭಿನಯಿಸಿದ್ದರು. ಪೊರ್ಕಿ, ಸ್ನೇಹಿತರು, ಜರಾಸಂಧ, ಭೀಮಾತೀರಾದಲ್ಲಿ, ವಿಶಲ್, ಅಂಗಾರಕ, ಬ್ರಹ್ಮ, ಸೆಕೆಂಡ್ ಹ್ಯಾಂಡ್ ಲವರ್ ಅಂತಹ ಕನ್ನಡ ಸಿನಿಮಾಗಳಲ್ಲಿ ಪ್ರಣೀತಾ ಅಭಿನಯಿಸಿದ್ದಾರೆ.

More from Filmibeat

English summary
Actress Pranitha Subhash has adopt a Government school in Aluru in her native town of Haasan in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X