»   » ಬಿಗ್ ಬಾಸ್ ಪ್ರಥಮ್ ಗೆ ಸಾಥ್ ನೀಡಲಿರುವ 'ಡಿ ಬಾಸ್'

ಬಿಗ್ ಬಾಸ್ ಪ್ರಥಮ್ ಗೆ ಸಾಥ್ ನೀಡಲಿರುವ 'ಡಿ ಬಾಸ್'

Posted By:
Subscribe to Filmibeat Kannada

ಬಿಗ್ ಬಾಸ್ ಪ್ರಥಮ್ ಅಭಿನಯದ 'ಎಂ ಎಲ್ ಎ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಆಡಿಯೋ ರೈಟ್ಸ್ ಈಗಾಗಲೇ ಮಾರಾಟವಾಗಿದ್ದು ಸಿನಿಮಾದ ಆಡಿಯೋ ರಿಲೀಸ್ ಗೆ ವಿಶೇಷ ವ್ಯಕ್ತಿ ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು ಬಿಗ್ ಬಾಸ್ ಪ್ರಥಮ್ ಆಕ್ಟ್ ಮಾಡಿರುವ ಎಂ ಎಲ್ ಎ ಚಿತ್ರದ ಆಡಿಯೋ ಬಿಡುಗಡೆಯನ್ನ ಡಿ ಬಾಸ್ ಮಾಡುತ್ತಾರಂತೆ.

ಪ್ರಥಮ್ ಇತ್ತೀಚಿಗಷ್ಟೆ ಯಜಮಾನ ಸಿನಿಮಾ ಸೆಟ್ ನಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು ಅದನ್ನ ನೋಡಿದ ಸಾಕಷ್ಟು ಜನರು ಪ್ರಥಮ್ ದರ್ಶನ್ ಜೊತೆಯಲ್ಲಿ ಏನು ಮಾಡುತ್ತಿದ್ದಾರೆ ಎಂದು ಯೋಚನೆ ಮಾಡುವಂತೆ ಕ್ಯಾಪ್ಷನ್ ಕೂಡ ಕೊಟ್ಟಿದ್ದರು.

ವೀರೇಂದ್ರ ಹೆಗಡೆ ರಿಂದ ಶ್ರೇಷ್ಠ ಉಡುಗೊರೆ ಪಡೆದ ಪ್ರಥಮ್

ಚಾಲೆಂಜಿಂಗ್ ಸ್ಟಾರ್ ಜೊತೆಯಲ್ಲಿ ಚಾಲಾಕಿ ಸ್ಟಾರ್ ಒಂದು ಒಳ್ಳೆ ವಿಚಾರ ಇದೆ. ಕಾಯ್ತಾ ಇರಿ ಏನು ಎನ್ನುವುದನ್ನ ಹೇಳುತ್ತೇನೆ ಎಂದಿದ್ದರು. ಫೋಟೋ ನೋಡಿದ ಡಿ ಬಾಸ್ ಅಭಿಮಾನಿಗಳು ಪ್ರಥಮ್ ಹಾಗೂ ದರ್ಶನ್ ಭೇಟಿ ಆಗಿದ್ದು ಯಾಕೆ? ಎನ್ನುವುದನ್ನ ಕಂಡು ಹಿಡಿದ್ದಿದ್ದಾರೆ.

Actor Pratham met Challenging star Darshan

ಪ್ರಥಮ್ ಅಭಿನಯದ ಎಂ ಎಲ್ ಎ ಸಿನಿಮಾದ ಆಡಿಯೋ ರಿಲೀಸ್ ಗೆ ದರ್ಶನ್ ಅವರನ್ನ ವಿಶೇಷ ಆಹ್ವಾನಿತರಾಗಿ ಕರೆಲಾಗಿದೆ. ದರ್ಶನ್ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುತಿವೆ ಮೂಲಗಳು. ಸದಾ ಹೊಸಬರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವ ಚಾಲೆಂಜಿಂಗ್ ಸ್ಟಾರ್ ಈ ಬಾರಿ ಪ್ರಥಮ್ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.

English summary
Actor and director Pratham met challenging star darshan. Actor Darshan will release audio from Pritham MLA movie Actor Pratham Famous Celebrities by Big Boss Reality Show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X