ನ್ಯಾಯಕ್ಕಾಗಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಲಾರ್ಡ್ ಪ್ರಥಮ್

By Pavithra

Recommended Video

ಒಳ್ಳೆ ಹುಡುಗ ಪ್ರಥಮ್ ಸಿ ಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ಯಾಕೆ? | Filmibeat Kannada

ನಟ ಹಾಗೂ ನಿರ್ದೇಶಕ ಪ್ರಥಮ್ ಒಂದಲ್ಲಾ ಒಂದು ವಿಚಾರದಿಂದ ಹಾಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಹೊಸ ವರ್ಷ ಪ್ರಾರಂಭದಲ್ಲೇ ನಟ ಪ್ರಥಮ್ ಒಳ್ಳೆ ಸುದ್ದಿಯನ್ನ ಅವರ ಅಭಿಮಾನಿಗಳಿಗೆ ನೀಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಗಳ ನ್ಯೂ ಇಯರ್ ಅಂದರೆ ಚೆನ್ನಾಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ ಅನ್ನುವ ಊಹೆಗಳಿರುತ್ತವೆ. ಆದರೆ ಪ್ರಥಮ್ ನಾನು ಎಲ್ಲರಿಗಿಂತಲೂ ಭಿನ್ನ ಎನ್ನುವುದನ್ನು ಈ ಮೂಲಕ ನಿರೂಪಿಸಿದ್ದಾರೆ.

ಹೊಸ ವರ್ಷ ಒಂದೊಳ್ಳೆ ಕೆಲಸ ಮಾಡೋಣ ಎನ್ನುವ ಪ್ಲಾನ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಪ್ರಥಮ್ ಸಿ ಎಂ ಅವರನ್ನ ಮೀಟ್ ಮಾಡಿರುವುದು ಅವರ ಸಿನಿಮಾದ ವಿಚಾರಕ್ಕೆ ಅಲ್ಲ. ವಿಜಯಪುರದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕುಮಾರಿ ದಾನಮ್ಮ ಅವರಿಗಾಗಿ.

Actor Pratham met Chief Minister Siddaramaiah

ದಾನಮ್ಮ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಕೊಡಬೇಕು ಹಾಗೂ ಈ ವಿಚಾರ ನ್ಯಾಯಾಲಯದಲ್ಲಿ ಆದಷ್ಟು ಬೇಗ ಇತ್ಯರ್ಥವಾಗಬೇಕು ಮತ್ತು ದಾನಮ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಪ್ರಥಮ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Actor Pratham met Chief Minister Siddaramaiah

ಮನವಿ ಪತ್ರವನ್ನ ಸ್ವೀಕರಿಸಿದ ಮುಖ್ಯಮಂತ್ರಿಗಳು ಪ್ರಥಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಜಕೀಯ ಗಣ್ಯರ ಜೊತೆ ಸೆಲ್ಫಿ ತೆಗಿಸಿಕೊಂಡು ಇವರು ನಮ್ಮ ಆತ್ಮೀಯರು ಅಂತ ಹೇಳಿಕೊಳ್ಳುತ್ತಿದ್ದ ಪ್ರಥಮ್ ಈ ಬಾರಿ ಸೆಲ್ಫಿ ಬೇಡ ಎಂದು ನಿರ್ಧರಿಸಿದರಂತೆ. ದಾನಮ್ಮನಿಗೆ ನ್ಯಾಯ ಸಿಗಲಿ ಎಂದು ಪ್ರಥಮ್ ಹೋರಾಟ ಪ್ರಾರಂಭ ಮಾಡಿದ್ದಾರೆ.

More from Filmibeat

English summary
Actor and director Pratham met Chief Minister 'Siddaramaiah'. pratham has appealed to the justice to the 'Danamma' family. Actor Pratham Famous Celebrities by Big Boss Reality Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X