twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಅಜ್ಜಿಯ ಪ್ರಾಣ ತೆಗೆದ ನೀವು ವೈದ್ಯರಾ? ರಾಕ್ಷಸ ವೈದ್ಯ ಸಿಬ್ಬಂದಿ ಎಂದು ಕಿಡಿಕಾರಿದ ಪ್ರಥಮ್

    |

    ನಟ್, ನಿರ್ದೇಶಕ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಒಂದೇ ವಾರದಲ್ಲಿ ಮನೆಯಲ್ಲಿ ಎರಡು ಸಾವು ಸಂಬವಿಸಿದೆ. ಆಸ್ಪತ್ರೆಗೂ ಸೇರಿಸಿಕೊಳ್ಳದೆ, ದುಡ್ಡು ಕಿತ್ತುಕೊಂಡು ಅಜ್ಜಿಯ ಪ್ರಾಣ ತೆಗೆದರು ಎಂದು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.

    ಪ್ರಥಮ್ ಅವರ ಸ್ವಂತ ಅಜ್ಜಿಗೆ ಬಂದ ಸ್ಥಿತಿ ಇದು. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಥಮ್ ಅಜ್ಜಿಯನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲು ಹೋದರೆ, ಅಲ್ಲಿ ವೈದ್ಯರು ಬೆಡ್ ಮತ್ತು ವೆಂಟಿಲೇಟರ್ ಕೊಡದೆ ಅಲೆದಾಡಿಸಿದ್ದಾರೆ. ಜೊತೆಗೆ ಹಣವನ್ನು ಪಡೆದು ಮಧ್ಯರಾತ್ರಿಯೇ ಅಜ್ಜಿಯನ್ನು ಆಸ್ಪತ್ರೆಯಿಂದ ಹೊರಹಾಕಿದ್ದಾರೆ ಎಂದು ಪ್ರಥಮ್ ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಕಾಲದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ ಅಜ್ಜಿಗೆ ಇವತ್ತು ಇಂಥ ಸ್ಥಿತಿ ಬಂದಿದೆ. ರಾಕ್ಷಸ ವೈದ್ಯ ಸಿಬ್ಬಂದಿ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಥಮ್ ವೈದ್ಯರನ್ನು ಜೀವರಕ್ಷಕರು ಎಂದು ಕರೆದಿದ್ದು ಯಾರು ಪ್ರಶ್ನಿಸಿದ್ದಾರೆ.

    Actor Pratham outrage against doctors

    'ಒಂದೇ ವಾರದಲ್ಲಿ ನಮ್ಮ ಮನೆಯಲ್ಲಿ ಇನ್ನೊಂದು ಸಾವು. ಮಧ್ಯರಾತ್ರಿ ದುಡ್ಡು ಕಿತ್ಕೊಂಡು ಆಸ್ಪತ್ರೆಗೂ ಸೇರಿಸಿಕೊಳ್ಳದೇ ಪ್ರಾಣ ತೆಗೆದ ನೀವು ವೈದ್ಯರಾ? ಯಾವ ಬೇವರ್ಸಿ ನಿಮ್ಮನ್ನು ಜೀವ ರಕ್ಷಕರು ಅಂದಿದ್ದು? ನಾಚಿಕೆಯಾಗ್ಬೇಕು ನಿಮಗೆ. ಯಾವ ಆಸ್ಪತ್ರೆಯಲ್ಲೂ bed, ventilator ಕೊಡದೆ 40 ಸಾವಿರ ದುಡ್ಡನ್ನು ಕಿತ್ಕೊಂಡು ಸಾಯಿಸಿಯೇ ಬಿಟ್ರು. ನನ್ನ ಲೈಫ್ ನಲ್ಲಿ ಇನ್ಯಾರಿಗೂ ಒಂದು ಹನಿ ನೀರು ಕೊಡಲ್ಲ. ಸರ್ಕಾರದವರಿಗೆ ಸ್ವಲ್ಪವಾದ್ರೂ ಮನುಷ್ಯತ್ವ ಇದ್ರೆ body ಯನ್ನಾದರೂ ಕೊಡ್ಸಿ.' ಎಂದಿದ್ದಾರೆ.

    Recommended Video

    ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada

    'ಕೊರೊನ ಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ ಅಜ್ಜಿಗೆ ಇವತ್ತು bed ಕೊಡದೆ ರಾತ್ರಿ ಇಡೀ ರಸ್ತೆಯಲ್ಲಿ ನರಳಿಸಿ ಸಾಯಿಸಿದ್ರು ಮೈಸೂರಿನ ರಾಕ್ಷಸ ವೈದ್ಯ ಸಿಬ್ಬಂದಿ. 40 ಸಾವಿರ ಕಿತ್ಕೊಂಡು ಮಧ್ಯರಾತ್ರಿ ಅಸ್ಪತ್ರೆಯಿಂದ ನಮ್ಮಜ್ಜಿನ ಓಡಿಸಿ, ಸಾಯಿಸಿದ ವೈದ್ಯಕೀಯ ಲೋಕಕ್ಕೆ ನಾಚಿಕೆಯಾಗ್ಬೇಕು' ಗುಡುಗಿದ್ದಾರೆ.

    English summary
    Actor And Bigg Boss winner Pratham outrage against doctors.
    Thursday, December 31, 2020, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X