ತುಂಬು ಗರ್ಭಿಣಿ ಧ್ರುವ ಸರ್ಜಾ ಪತ್ನಿಗೆ ಹಿಗಂದಿದ್ಯಾಕೆ ಒಳ್ಳೆ ಹುಡುಗ ಪ್ರಥಮ್​..?

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಇತ್ತೀಚಿಗಷ್ಟೇ ತಮ್ಮ ಅಭಿಮಾನಿಗಳೊಂದಿಗೆ ಬಹಳ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದರು. ಸದ್ಯದಲ್ಲೇ ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್​ ದಂಪತಿ ತಮ್ಮ ಚೊಚ್ಚಿಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಬೇಬಿಬಂಪ್ ಫೋಟೋಗಳನ್ನು ಶೇರ್​ ಮಾಡಿ ತಾವು ತಂದೆಯಾಗುತ್ತಿರುವ ಗುಡ್​ನ್ಯೂಸ್​ ಅನ್ನು ಅಭಿಮಾನಿಗಳೊಂದಿಗೆ ಶೇರ್​ ಮಾಡಿಕೊಂಡಿದ್ದರು.

ಖಾಸಗಿ ಹೋಟೆಲ್​ನಲ್ಲಿ ಧ್ರುವ ಸರ್ಜಾ ಪತ್ನಿ ಅದ್ಧೂರಿ ಸೀಮಂತ

ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಧ್ರುವ ಸರ್ಜಾ, ಅವರ ಆಸೆಯಂತೆಯೇ ಸಂಭ್ರಮದಿಂದ ಸೀಮಂತ ಕಾರ್ಯಕ್ರಮ ನಡೆಸಿದ್ದಾರೆ. ಸೆಪ್ಟೆಂಬರ್​ 7ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೇರಣಾ ಅವರ ಸೀಮಂತ ಶಾಸ್ತ್ರ ನಡೆದಿದೆ. ೀ ಸಂಭ್ರಮದಲ್ಲಿ ಸರ್ಜಾ ಕುಟುಂಬಸ್ಥರು ಹಾಗೂ ಪ್ರೇರಣಾ ಅವರ ಕುಟುಂಬಸ್ಥರು, ಮತ್ತು ಆತ್ಮೀಯರು ಭಾಗಿಯಾಗಿದ್ದರು.

ಬಿಗ್​ಬಾಸ್​ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್​ ಸರ್ಜಾ ಕುಟುಂಬಕ್ಕೆ ಆಪ್ತರು, ಅದರಲ್ಲೂ ನಟ ಧ್ರುವ ಸರ್ಜಾ ಅವರಿಗೆ ಆತ್ಮೀಯ ಸ್ನೇಹಿತ. ಇನ್ನು ಧ್ರುವ ಸರ್ಜಾ ಅವರ ಪತ್ನಿ ಸೀಮಂತದಲ್ಲಿ ಒಳ್ಳೆ ಹುಡುಗ ಪ್ರಥಮ್​ ಕೂಡ ಭಾಗಿಯಾಗಿದ್ದರು. ಈ ವೇಳೆ ನಟ ಅರ್ಜುನ್​ ಸರ್ಜಾ, ಧ್ರುವ ಸರ್ಜಾ ಹಾಗೂ ಪ್ರಥಮ್​ ಜೊತೆಯಾಗಿ ತೆಗೆದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Actor Pratham share Dhruva Sarja wife baby shower video

ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರದಲ್ಲಿ ನಡೆದ ಒಂದೊಳ್ಳೆ ಸನ್ನಿವೇಶದ ವಿಡಿಯೋವನ್ನು ಪ್ರಥಮ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ವಿಡಿಯೋದಲ್ಲಿ ಪ್ರಥಮ್​, ಪ್ರೇರಣಾ ಅವರ ಕಾಲೆಳೆದಿದ್ದು, ಪ್ರಥಮ್​ ಕೂಡ ಅದೇ ವಿಚಾರವನ್ನು ಫ್ಯಾನ್ಸ್​ ಜೊತೆ ಶೇರ್​ ಮಾಡಿದ್ದಾರೆ.

''ಪ್ರೇರಣಾ ಅವರಿಗೆ ನಾನು ಏನು ಹೇಳಿರಬಹುದು? ಎಲ್ಲದಕ್ಕೂ ಹೌದು ಹೌದು ಅಂತ ಹೋಮ್​ ವರ್ಕ್​ ಮಾಡದೇ ಇರುವ ಪ್ರೈಮರಿ ಸ್ಕೂಲ್​ ಸ್ಟೂಡೆಂಟ್​ ಥರಾ ಎಲ್ಲದಕ್ಕೂ ತಲೆ ಅಲ್ಲಾಡಿಸ್ತಾ ಇದಾರೆ'' ಎಂದು ಬರೆದುಕೊಂಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆ ಸರ್ಜಾ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ, ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಹೀಗಾಗಿ ಮತ್ತೆ ಸರ್ಜಾ ಕುಟುಂಬಕ್ಕೆ ಚಿರು ಅವರು ಮಗುವಾಗಿ ಬರಲಿ ಎಂದು ಪ್ರಥಮ್​ ಹಾರೈಸಿದ್ದಾರೆ. ಧ್ರುವ ಹಾಗೂ ಪ್ರೇರಣಾ ದಂಪತಿಗೆ ಗಂಡು ಮಗುವಾದರೆ ಚಿರುನೇ ಹುಟ್ಟಿದ್ದಂತೆ. ಇನ್ನು ಹೆಣ್ಣು ಮಗಳು ಹುಟ್ಟಿದ್ರೆ ಧ್ರುವ ಸರ್ಜಾ ಅವರ ಅಜ್ಜಿ ಮರುಜನ್ಮ ಪಡೆದಂತೆ. ಒಂದು ವೇಳೆ ಅವಳಿ-ಜವಳಿ ಏನಾದ್ರೂ ಆದ್ರೆ ನೀವೊಂದು ಮಗುನ ,ಧ್ರುವ ಅವರು ಒಂದು ಮಗುನ ಆಟ ಆಡಿಸಿಕೊಂಡು ಇರಿ ಎಂದು ಪ್ರಥಮ್​, ಪ್ರೇರಣಾ ಅವರ ಕಾಲೆಳೆದಿದ್ದಾರೆ.

ಧ್ರುವ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯದಲ್ಲಿ ಸರ್ಜಾ ಕುಟುಂಬದ ಬಹುತೇಕರು ಉಪಸ್ಥಿತರಿದ್ದರು. ಜೊತೆಗೆ ಚಿತ್ರರಂಗದ ಕೆಲ ಗಣ್ಯರು ಸಹ ಭಾಗಿಯಾಗಿದ್ದರು. ಆದರೆ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್​ ಗೈರಾಗಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೀಮಂತ ಕಾರ್ಯದ ಅನೇಕ ಫೋಟೋಗಳು ಸೋಶಿಯಲ್ ​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಯಾವ ಫೋಟೋದಲ್ಲಿಯೂ ಮೇಘನಾ ರಾಜ್​ ಹಾಗೂ ಅವರ ಕುಟುಂಬಸ್ಥರು ಕಂಡುಬಂದಿಲ್ಲ.

More from Filmibeat

English summary
sandalwood, Dhruva Sarja, Prerana Shankar, Meghana Raj, Sarja Family, Baby shower, Pratham,olle huduga Pratham, BiggBoss, Kannada Movies, Arjun Sarja,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X