ಮೊದ್ಲು ನಾವು ಹೀಗಿದ್ವಿ, ಅನ್ಎಜುಕೇಟೆಡ್‌ಗಳು ಗೊಂದಲ ಸೃಷ್ಟಿಸಿದ್ದಾರೆ-ದರ್ಶನ್‌ಗೆ ಮನವಿ ಪತ್ರ ಸಲ್ಲಿಸಿದ ಪ್ರಥಮ್..!

ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್.

ಇಂಥಾ ಪ್ರಥಮ್ ಕಂಡರೆ ದರ್ಶನ್ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ. ಪ್ರಥಮ್‌ಗೆ ಕೂಡ ದರ್ಶನ್ ಅವರ ಅಭಿಮಾನಿಗಳ ಮೇಲೆ ವಿಶೇಷವಾದ ಒಲವು ಇದೆ. ಹೀಗಾಗಿಯೇ ಆಗಾಗ ಇಬ್ಬರ ನಡುವೆ ಕಿರಿಕ್ ಆಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ನಡೆಯುತ್ತೆ. ಹಾಗಂಥ ಪ್ರಥಮ್‌ ಬೇಸರವೇನು ಮಾಡಿಕೊಂಡಿಲ್ಲ. ದರ್ಶನ್ ಮೇಲಿದ್ದ ಅವರ ಪ್ರೀತಿ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರಥಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಫೋಸ್ಟ್ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿ ಮಾಡ್ತೀನಿ ಸರ್ ಎಂದು ಹೇಳಿದ್ದಾರೆ.

Actor Pratham wished Darshan on his birthday with a photo but took a dig at his fans

ದರ್ಶನ್ ಅವರ ಜೊತೆ ತೆಗೆಸಿಕೊಂಡ ಫೋಟೊ ಹಂಚಿಕೊಂಡು ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಥಮ್ Actually ಮೊದ್ಲು ನಾವು ಹೀಗಿದ್ವಿ...! ಹಾಳಾದ್ social media ಬಂದು ನಾನ್ ಹೇಳಿದ್ದನ್ನ ಕೆಲವೇ ಕೆಲವು uneducatedಗಳು ಬೇರೆ ರೀತಿ ತಿರುಚಿ ಸ್ವಲ್ಪ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಶೀಘ್ರದಲ್ಲೇ ನಿಮ್ಮನ್ನ ಭೇಟಿ ಮಾಡ್ತೀನಿ, ಅಲ್ಲೀ ತನಕ ಈ ಗೊಂದಲ ಇದ್ದೀದ್ದೇ ಎಂದಿರುವ ಪ್ರಥಮ್ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ತೂಗುದೀಪ ಶ್ರೀನಿವಾಸ್ ಸರ್ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಒಂದು ಮಾತು.... ನನ್ನ ಪಾಡಿಗೆ ನಾನಿದ್ದಾಗ ಯಾರಾದ್ರೂ stage ಮೇಲೆ counter ಕೊಟ್ಟಾಗ ನಾನು ಸ್ವಲ್ಪ class ತಗೊಂಡು ಬಿಸಿ ಮುಟ್ಟಿಸಿರ್ತೀನಿ ಅಷ್ಟೇ ಎಂದು ಕೂಡ ಹೇಳಿರುವ ಪ್ರಥಮ್, Otherwise ನಿಮ್ಮ ಬಗ್ಗೆ ಗೌರವ ಇದೆ!ಯಾರದೋ ಮಾತು ಕೇಳಿ ಅಥವಾ edited video ನೋಡಿ ಬೇಸರವಾಗಬೇಡಿ... ಶೀಘ್ರದಲ್ಲೇ ನಿಮ್ಮನ್ನ ಭೇಟಿ ಮಾಡ್ತೀನಿ ದರ್ಶನ್ ಸರ್ ಎಂದು ಹೇಳಿದ್ದಾರೆ.

ಪ್ರಥಮ್ ಅವರ ಈ ಫೋಸ್ಟ್‌ಗೆ ಸಹಜವಾಗಿ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನಡುಕ ಶುರುವಾಗಿದೆ ಅದಕ್ಕೆ ಈಗ ಬಕೆಟ್ ಹಿಡಿಯುತ್ತೀದ್ದೀರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಪುಕ್ಕಲ ಪ್ರಥಮ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಭೇಟಿ ಆಗೋಕೆ ನಮ್ಮ ಬಾಸ್ ನಿನ್ನನ್ನು ಹತ್ರ ಕೂಡ ಬಿಟ್ಕೊಳ್ಳಲ್ಲ ಬಿಡು ಪ್ರಥಮ್ ಎಂದು ಕೂಡ ಹೇಳಿದ್ದಾರೆ.

ಇನ್ನು ಕೆಲವರು ನಿಜಕ್ಕೂ ನೀವು ನಟ ಭಯಂಕರ ಎಂದು ಹೇಳಿದರೆ ನೋಡಿ ಪ್ರಥಮ್ ಅವರೇ ಅಭಿಮಾನಿಗಳು ಪ್ರೀತಿಯಿಂದ ನಮ್ ಹೀರೊ ನಾ ಬಾಸ್ ಅಂತ ಕರುದ್ರೆ ಬೆರಕೆ ಅಂತ ನಾ.... ಸಿನಿಮಾ ಇಂಡಸ್ಟ್ರಿ ಯಲ್ಲಿ ಎಲ್ಲರೂ ಅಭಿಮಾನಿಗಳಿಗೆ ಗೌರವ ಕೊಟ್ರೆ ನೀವು ಮಾತ್ರ ಹೀಗೆ.... ಅಭಿಮಾನಿಗಳನ್ನ ಟ್ರಿಗರ್ ಮಾಡಿ ಮಾತಾಡಿ ಸುಮ್ನೆ ಇರ್ತಿರಾ ಅಭಿಮಾನಿಗಳು ರಿಟರ್ನ್ ಮಾತಾಡಿದ್ರೆ ಬೆರಕೆ ಅಂತಿರಾ.... ನಾವು ಅಭಿಮಾನದಿಂದ ನಮ್ ಬಾಸ್ ನಾ ಬಾಸ್ ಅಂದ್ರೆ ನಿಮ್ಗೆ ಏನು ಪ್ರಾಬ್ಲಮ್ ಅಂತ ಗೊತ್ತಾಗ್ತಿಲ್ಲ.... ನಿಮ್ ಅಭಿಮಾನಿಗಳು ನಿಮ್ಮನ್ನ ಪ್ರೀತಿಯಿಂದ ಏನಾದ್ರೂ ಕರಿತಾರೆ ಅಥವಾ ಹೊಗಳುತ್ತಾರೆ.... ನಾವು ಹಾಗೆ ಮಧ್ಯ ಬಂದು ಮಾತನಾಡುತ್ತೀವಾ ? fans ಗೆ respet ಕೊಡಿ, atleast ನಮ್ಗೆ ರೆಸ್ಪೆಕ್ಟ್ ಕೊಡ್ಲಿಲ್ಲ ಅಂದ್ರು ಪರವಾಗಿಲ್ಲ ನಮ್ DBoss ಗೆ respect ಕೊಟ್ಟು ಮಾತಾಡಿ ಎಂದು ಬುದ್ದಿ ಮಾತನ್ನು ಕೂಡ ಪ್ರಥಮ್‌ಗೆ ಹೇಳಿದ್ದಾರೆ. ದರ್ಶನ್ ಅಭಿಮಾನಿಗಳ ಈ ಪ್ರತಿಕ್ರಿಯೆಗೆ ಪ್ರಥಮ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: darshan pratham filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X