ದ್ವಿತೀಯ ಪಿಯುಸಿಯಲ್ಲಿ ಅಪ್ಪನಿಗೆ ಕೀರ್ತಿ ತಂದ ಪ್ರೇಮ್ ಪುತ್ರಿ
ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಪರೀಕ್ಷೆ ಮುಗಿದ ದಿನಗಳಿಂದ ಎಷ್ಟು ಮಾರ್ಕ್ ಬರುತ್ತದೆ ಎಂದು ಲೆಕ್ಕ ಆಗುತ್ತಿದ್ದ ಮಕ್ಕಳ ಕುತೂಹಲಕ್ಕೆ ಅಂತೂ ಉತ್ತರ ಸಿಕ್ಕಿದೆ.
ನಟ ನೆನಪಿರಲಿ ಪ್ರೇಮ್ ಪುತ್ರಿ ಕೂಡ ದ್ವಿತೀಯ ಪಿಯುಸಿ ಓದುತ್ತಿದ್ದು, ಆಕೆಯ ಫಲಿತಾಂಶ ಸಹ ಬಂದಿದೆ. ಪ್ರೇಮ್ ತಮ್ಮ ಮಗಳ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಪ್ರೇಮ್ ಮಗಳು ಅಮೃತಾ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಪರೀಕ್ಷೆಯಲ್ಲಿ 91 % ತೆಗೆದುಕೊಂಡಿದ್ದಾರೆ. ಚೆನ್ನಾಗಿ ಓದುವ ಮೂಲಕ ಅಪ್ಪನಿಗೆ ಕೀರ್ತಿ ತಂದಿದ್ದಾರೆ.
ಪ್ರೇಮ್ ಪುತ್ರ ಏಕಾಂತ್ ಸದ್ಯ ಎಂಟನೇ ತರಗತಿಯಲ್ಲಿ 3ನೇ ರಾಂಕ್ ಬಂದಿದ್ದಾರೆ. ಮಕ್ಕಳ ಈ ಸಾಧನೆ ತಂದೆ ತಾಯಿ ಮುಖದಲ್ಲಿ ಖುಷಿ ಮೂಡಿಸಿದೆ. ಈ ಖುಷಿಯ ಸಂದರ್ಭದಲ್ಲಿ ಪ್ರೇಮ್ ಫ್ಯಾಮಿಲಿ ಸೆಲ್ಫಿ ತೆಗೆದುಕೊಂಡಿದೆ.
English summary
Kannada actor Prem Amrutha daughter got 91% in 2nd PUC results.


Click it and Unblock the Notifications