ಮತ್ತೊಮ್ಮೆ ಮದುವೆಯಾದ ನಟ ಲವ್ಲಿ ಸ್ಟಾರ್ ಪ್ರೇಮ್; ಇಲ್ಲಿದೆ ಫೋಟೊ, ವೀಡಿಯೋ

ಕನ್ನಡ ನಟ ಪ್ರೇಮ್ ಕೆಲ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಹೀರೊ ಆಗಿ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ. ಈಗಾಗಲೇ ಪ್ರೇಮ್ ಅವರ ಮಗ ಹಾಗೂ ಮಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಗಳು ಅಮೃತಾ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯ ನಟ ಪ್ರೇಮ್ ಮತ್ತೆ ಮದುವೆ ಆಗಿದ್ದಾರೆ. ಕನ್‌ಫ್ಯೂಸ್ ಆಗಬೇಡಿ. ಇದು 2ನೇ ಮದುವೆ ಅಲ್ಲ. ಬದಲಿಗೆ 2ನೇ ಬಾರಿ ಮದುವೆ. ಅದು ಕೂಡ ತಮ್ಮ ಪತ್ನಿ ಜ್ಯೋತಿ ಜೊತೆ. ಸದ್ಯ ಪ್ರೇಮ್ ಹಾಗೂ ಜ್ಯೋತಿ 25ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಂದು ಮದುವೆಯಾಗಿದ್ದ ನಗರದ ಬಿಟಿಎಂ ಬಡವಾಣೆಯ ವಿನಾಯಕ ದೇವಸ್ಥಾನದಲ್ಲಿ ಮತ್ತೊಮ್ಮೆ ದಂಪತಿ ಹಾರ ಬದಲಿಸಿಕೊಂಡಿದ್ದಾರೆ. ದೇವರ ಆಶೀರ್ವಾದ ಪಡೆದಿದ್ದಾರೆ.

Actor Prem Recreates His Wedding with Wife Jyoti on Their 25th Anniversary at the Same Temple

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕೂಡ ಪ್ರೇಮ್ ಹಾಗೂ ಜ್ಯೋತಿ ಮದುವೆ ಲವ್, ಮದುವೆ ಬಗ್ಗೆ ಮಾತನಾಡಿದ್ದರು. ಇಬ್ಬರು ಪ್ರೀತಿಸಿ ಓಡಾಡುತ್ತಿದ್ದದ್ದು ಜ್ಯೋತಿ ಅವರ ಮನೆಯಲ್ಲಿ ಗೊತ್ತಾಗಿತ್ತು. ಆಕೆಗೆ ಬೇರೆ ಹುಡುಗನ ಜೊತೆ ಮಾಡಲು ಪೋಷಕರು ಪ್ರಯತ್ನಿಸುತ್ತಿದ್ದಾಗ ಮನೆ ಬಿಟ್ಟು ಬಂದು ಪ್ರೇಮ್ ಅವರನ್ನು ಮದುವೆ ಆಗಿದ್ದರು. "ಜೊತೆ ಜೊತೆಯಲಿ 25 ವರ್ಷಗಳ ಸವಿ ಸವಿ ನೆನಪು. ದೀಪಾವಳಿ ಹಬ್ಬದ ಶುಭಾಶಗಳು" ಎಂದು ಪ್ರೇಮ್ ವೀಡಿಯೋ ಹಂಚಿಕೊಂಡಿದ್ದಾರೆ.

"ಎಲ್ಲರಿಗೂ ನಮಸ್ಕಾರ. 25 ವರ್ಷಗಳ ಹಿಂದೆ, ಈ ವಿನಾಯಕನ ಸನ್ನಿಧಿಯಲ್ಲಿ, ಆತನ ಆಶೀರ್ವಾದದೊಂದಿಗೆ ನಾವಿಬ್ಬರು ಮದುವೆಯಾಗಿದ್ವಿ. ನಾನು ಈಕೆಗೆ ತಾಳಿ ಕಟ್ಟಿದ ಸ್ಥಳ. ಮದುವೆಯಾದ 25 ವರ್ಷದ ನಂತರ ಮತ್ತೆ ಇಲ್ಲಿಗೆ ಬಂದಿದ್ದೇವೆ. ಮದುವೆ ವಾರ್ಷಿಕೋತ್ಸವ ನಿಮಿತ್ತ ಗಣೇಶನ ಆಶೀರ್ವಾದ ಪಡೆಯಲು ಮತ್ತೆ ಇಲ್ಲಿಗೆ ಬಂದಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಇರಲಿ" ಎಂದು ಪ್ರೇಮ್ ವೀಡಿಯೋದಲ್ಲಿ ಮಾತನಾಡಿ ಕೇಳಿಕೊಂಡಿದ್ದಾರೆ.

ಹೊಸ ಮದುಮಗ, ಮದುಮಗಳ ರೀತಿ ಪತ್ನಿ ಜ್ಯೋತಿ ಅವರಿಗೆ ಪ್ರೇಮ್ ಅಶ್ವಿನಿ ನಕ್ಷತ್ರ ತೋರಿಸಿದ್ದಾರೆ. ಅದೆಲ್ಲದರ ಸೊಗಸಾದ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲೇ ಜ್ಯೋತಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸಾಕಷ್ಟು ಸಂದರ್ಭದಗಳಲ್ಲಿ ಇಬ್ಬರೂ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

ಯಾವುದೋ ಮದುವೆ ಆಲ್ಬಮ್‌ನಲ್ಲಿದ್ದ ಗ್ರೂಪ್ ಫೋಟೊದಲ್ಲಿ ಪ್ರೇಮ್ ಅವರನ್ನು ನೋಡಿ ಜ್ಯೋತಿ ಅವರಿಗೆ ಕ್ರಶ್ ಆಗಿತ್ತು. ಅದೇ ಮುಂದೆ ಇಬ್ಬರ ಪ್ರೀತಿಗೆ ಕಾರಣವಾಗಿತ್ತು. ಆರಂಭದಲ್ಲಿ ಕುಟುಂಬದ ಜವಾಬ್ದಾರಿ ನೋಡಿ ಪ್ರೀತಿ ಗೀತಿ ಬೇಡ ಎಂದುಕೊಂಡಿದ್ದ ಪ್ರೇಮ್, ಸ್ನೇಹಿತರಾಗಿರೋಣ ಎಂದು ಹೇಳಿದ್ದರಂತೆ. ಬಳಿಕ ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಇಬ್ಬರ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು.

ನೇಕಾರಿಕೆ ಪ್ರೇಮ್ ಅವರ ಕುಲ ಕಸುಬು. 10ನೇ ತರಗತಿ ಮುಗಿದ ಬಳಿಕ ಸಣ್ಣದೊಂದು ಫ್ಯಾಕ್ಟರಿ ಮಾಡಿಕೊಂಡು ಪ್ರೇಮ್ ಕೆಲಸ ಮಾಡಿಕೊಂಡಿದ್ದರು. ಮದುವೆ ಬಳಿಕ ಅದೇ ಕೆಲಸ ಮುಂದುವರೆಸಿದ್ದರು. ಒಮ್ಮೆ ನಷ್ಟವಾಗಿ ಕೆಲಸ ಇಲ್ಲದೇ ಇದ್ದಾಗ ಸ್ನೇಹಿತರೊಬ್ಬರ ಸಹಾಯದಿಂದ ಟಿ. ಎನ್ ಸೀತಾರಾಮ್ ಅವರನ್ನು ಭೇಟಿಯಾಗಿ 'ಮನ್ವಂತರ' ಧಾರಾವಾಹಿಯಲ್ಲಿ ಸಣ್ಣ ಅವಕಾಶ ಸಿಗುತ್ತದೆ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಪ್ರೇಮ್ ಬಳಿಕ 'ಪ್ರಾಣ' ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಆಗಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಮದುವೆಯಾದ ಹೊಸತರಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಆಗ ಪತ್ನಿ ಜ್ಯೋತಿ ಬೆಂಬಲವಾಗಿ ನಿಂತಿದ್ದರು. ಇವತ್ತಿಗೂ ಪ್ರೇಮ್ ಅದನ್ನೆಲ್ಲಾ ಮರೆತ್ತಿಲ್ಲ.

More from Filmibeat

Read more about: prem sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X