For Quick Alerts
  ALLOW NOTIFICATIONS  
  For Daily Alerts

  ಪಾದ ತೊಳೆದು ಕಳುಹಿಸುತ್ತೇವೆಂದು ರಾಘಣ್ಣ ಹೇಳಿದ್ದು ಯಾರಿಗೆ?

  |

  ಹೋದ ಶನಿವಾರ (ಆ 8) ನಗರದ ಖಾಸಗಿ ಹೋಟೇಲೊಂದರಲ್ಲಿ ನಡೆದ ಡಬ್ಬಿಂಗ್ ವಿರೋಧಿ ಹೋರಾಟದಲ್ಲಿ ಕನ್ನಡ ಚಿತ್ರೋದ್ಯಮ ಮತ್ತೆ ತನ್ನ ಒಗ್ಗಟ್ಟು ಪ್ರದರ್ಶಿಸಲಿಲ್ಲ.

  ಪ್ರಮುಖ ಕಲಾವಿದರ ಹಾಜರಾತಿಗಿಂತ ಗೈರಾದ ಕಲಾವಿದರ ಸಂಖ್ಯೆಯೇ ಹೈಲೆಟ್ ಆಗಿತ್ತು. ಎಂದಿನಂತೆ ವಾಟಾಳ್ ನಾಗರಾಜ್ ಅದು ಬಂದ್, ಇದು ಬಂದ್, ಎಲ್ಲಾ ಬಂದ್ ಎಂದು ಹೇಳಿಕೆ ನೀಡಿದ್ದೇ ಪ್ರಮುಖಾಂಶವಾಗಿತ್ತು.

  ಆದರೆ ಈ ಸಭೆಯ ಮೂಲಕ ಡಬ್ಬಿಂಗ್ ಹೋರಾಟಕ್ಕೆ ಹೊಸ ಹುರುಪು ಬಂದಿದ್ದು ನಟ, ನಿರ್ಮಾಪಕ ದೊಡ್ಮನೆಯ ರಾಘವೇಂದ್ರ ರಾಜಕುಮಾರ್ ಭಾಗವಹಿಸಿದ್ದು.

  ಸಿಸಿಐ ತೀರ್ಪಿನ ನಂತರ ಕಾವೇರಿದ್ದ ಡಬ್ಬಿಂಗ್ ಹೋರಾಟದ ಬಗ್ಗೆ ರಾಘಣ್ಣ ತುಟಿಕ್ ಪಿಟಿಕ್ ಅಂದಿರಲಿಲ್ಲ. ಸದಾಶಿವ ನಗರದಿಂದ ಡಬ್ಬಿಂಗ್ ಹೋರಾಟದ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ಬರುತ್ತೆ ಎಂದು ಬಹಳಷ್ಟು ಜನ ಕಾತುರರಾಗಿದ್ದರು. (ಡಬ್ಬಿಂಗ್ ವಿರೋಧ ಚಳುವಳಿಗೆ ಇವರ ಬೆಂಬಲ ಉಂಟಾ)

  ಡಬ್ಬಿಂಗ್ ನಿಂದ ಲಾಭವಾಗುವ ನಾಲ್ಕು ಜನರನ್ನು ಮನೆಗೆ ಕರೆಸಿ ಪಾದ ತೊಳೆದು ಕಳುಹಿಸುತ್ತೇನೆಂದು ರಾಘಣ್ಣ ಯಾರಿಗೆ ಹೇಳಿದ್ದು ಅನ್ನೋದು ಇಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಮುಂದೆ ಓದಿ..

  ಶನಿವಾರದ ಹೋರಾಟ

  ಶನಿವಾರದ ಹೋರಾಟ

  ಶನಿವಾರದ ಹೋರಾಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಘಣ್ಣ, ನಾನು ಬದುಕಿರುವ ತನಕ ಅಪ್ಪಾಜಿಯ ಆಶಯದಂತೆ ನಡೆಯುತ್ತೇವೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನೇ ಮತ್ತೆ ರಿಪೀಟ್ ಮಾಡಿದ್ರು.

  ರಾಘಣ್ಣ ಹೇಳಿದ್ದು

  ರಾಘಣ್ಣ ಹೇಳಿದ್ದು

  ಡಬ್ಬಿಂಗ್‍ಗೆ ಅವಕಾಶ ನೀಡಿ, ಮತ್ತೆ ಹಿಂದಕ್ಕೆ ಹೋಗುವುದು ಸರಿಯಾದ ನಿರ್ಧಾರವಲ್ಲ. ಆದರೆ ನಮ್ಮ ಬದುಕಿಗೆ ತೊಂದರೆಯಾದರೆ ಏನು ಮಾಡುವುದು? ಬೇರೆಯವರಿಗೆ ತೊಂದರೆಯಾದರೂ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾಗುತ್ತದೆ ಎಂದು ರಾಘಣ್ಣ ಹೇಳಿದರು.

  ಪಾದ ತೊಳೆದು ಕಳುಹಿಸುತ್ತೇನೆ

  ಪಾದ ತೊಳೆದು ಕಳುಹಿಸುತ್ತೇನೆ

  ಡಬ್ಬಿಂಗ್ ನಿಂದ ನಾಲ್ಕು ಜನರಿಗೆ ಲಾಭವಾಗಬಹುದು. ಅವರಿಗೆ ಏನು ನಷ್ಟವಾಗಿದೆ, ಇದರಿಂದ ಏನು ಲಾಭವಾಗುತ್ತೆಂದು ಹೇಳಿ. ಮನೆಗೆ ಬನ್ನಿ ಕೂತು ಮಾತನಾಡಿಕೊಳ್ಳೋಣ. ಅವರ ಪಾದ ತೊಳೆದು ಕಳುಹಿಸುತ್ತೇನೆಂದು ಎಂದು ರಾಘವೇಂದ್ರ ರಾಜಕುಮಾರ್ ಸಭೆಗೆ ಮುನ್ನ ಮಾಧ್ಯಮದವರ ಮುಂದೆ ಪ್ರತಿಕ್ರಿಯಿಸಿದ್ದಾರೆ. ಆದರೆ ಆ ನಾಲ್ಕು ಜನ ಯಾರು ಎನ್ನುವುದನ್ನು ರಾಘಣ್ಣ ಹೇಳಲಿಲ್ಲ.

  ಡಬ್ಬಿಂಗ್ ಬೆಂಬಲಿಸುವುದು ಬೇಡ

  ಡಬ್ಬಿಂಗ್ ಬೆಂಬಲಿಸುವುದು ಬೇಡ

  ಆಗಿರುವ ತೊಂದರೆಗಳನ್ನು ಪರಿಹರಿಸಲು ನೋಡಬೇಕೇ ವಿನಃ, ಅದು ಬಿಟ್ಟು ಡಬ್ಬಿಂಗ್ ಬೆಂಬಲಿಸುವುದು ಸರಿಯಲ್ಲ. ಇದರಿಂದ ಎಷ್ಟು ಜನರಿಗೆ ತೊಂದರೆಯಾಗುತ್ತೆ ಎನ್ನುವುದನ್ನು ಡಬ್ಬಿಂಗ್ ಬೆಂಬಲಿಸುವ ನಾಲ್ಕು ಜನರು ಅರ್ಥ ಮಾಡಿಕೊಳ್ಳಬೇಕೆಂದು ರಾಘಣ್ಣ ಹೇಳಿದ್ದಾರೆ.

  26ಕ್ಕೆ ಎಲ್ಲಾ ಬಂದ್

  26ಕ್ಕೆ ಎಲ್ಲಾ ಬಂದ್

  ಇದೇ ಆಗಸ್ಟ್ 26ರಂದು ಚಿತ್ರೋದ್ಯಮವನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದ ತನಕ ಭಾರೀ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

  English summary
  Actor and Producer Raghavendra Rajkumar invited Dubbing supporter for discussion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X