ಅಪ್ಪು ಹಾದಿಯಲ್ಲಿ ದೊಡ್ಮನೆ ಯುವರಾಜ್ ಕುಮಾರ್: ಮಾಡಿದ್ದಾದರೂ ಏನು?

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಗಲಿಕೆ ಅವರ ಅಭಿಮಾನಿಗಳನ್ನು ಕಂಗಾಲಾಗುವಂತೆ ಮಾಡಿದೆ. ಅದೆಷ್ಟೋ ಅಭಿಮಾನಿಗಳು ಅಪ್ಪು ಅವರನ್ನು ಆರಾಧ್ಯ ದೈವದಂತೆ ಮನೆಯಲ್ಲಿ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಇಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡು ಕರುನಾಡೇ ಕಣ್ಣೀರು ಹಾಕಿದೆ.

Recommended Video

ಚಿಕ್ಕಪ್ಪನ ಪುಟ್ಟ ಪುಟ್ಟ ಅಭಿಮಾನಿಗಳನ್ನು ಭೇಟಿ ಮಾಡಿದ ಯುವರಾಜ್ ಕುಮಾರ್

ಈಗ ಅಪ್ಪು ಬಳಿಕ ದೊಡ್ಮನೆಯ ನಟರು ಅಭಿಮಾನಿಗಳನ್ನು ಸಂಭಾಳಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಯಾಕೆಂದರೆ ಈ ಅಪ್ಪು ಅವರನ್ನು ಅವರ ಅಭಿಮಾನಿಗಳು ಈಗ ದೊಡ್ಮನೆಯ ನಟರಲ್ಲಿ ಕಾಣುತ್ತಿದ್ದಾರೆ. ಈ ಪೈಕಿ ನಟ ಶಿವರಾಜ್‌ಕುಮಾರ್ ಅವರು ಅಪ್ಪು ಅವರ ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

ಅವರನ್ನು ಬಿಟ್ಟರೆ ದೊಡ್ಮನೆಯೆ ನವ ನಟ ಯುವರಾಜ್ ಕುಮಾರ್ ಅವರು ಈಗ ಅಪ್ಪು ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಹೌದು, ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇದೆ. ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಯುವರಾಜ್ ಕುಮಾರ್ ಅವರಲ್ಲಿ ಪುನೀತ್ ಅವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ.

ಯುವರಾಜ್ ಕುಮಾರ್‌ಗೆ ರೋಸ್ ಕೊಟ್ಟ ಮುದ್ದು ಮಕ್ಕಳು!

ನಟ ಪುನೀತ್‌ ರಾಜ್‌ಕುಮಾರ್ ಅವರ ಅಭಿಮಾನಿ ಬಳಗವೇ ಒಂದು ರೀತಿ ವಿಭಿನ್ನ. ಅವರಿಗೆ ಯಾವುದೇ ಒಂದು ವರ್ಗಕ್ಕೆ ಸೇರಿದ ಅಭಿಮಾನಿಗಳು ಮಾತ್ರ ಇಲ್ಲ. ಬದಲಿಗೆ ಪುಟ್ಟ, ಪುಟ್ಟ ಮಕ್ಕಳಿಂದ ಹಿಡಿದು, ವಯೋವೃದ್ಧರ ತನಕ ಎಲ್ಲರೂ ಅಭಿಮಾನಿಗಳೇ. ಅದರಲ್ಲೂ ಅಪ್ಪು ಅವರನ್ನು ಕಂಡರೆ ಮಕ್ಕಳಿಗೆ ಎಷ್ಟು ಇಷ್ಟ ಎನ್ನುವುದು ಅಪ್ಪು ಅಗಲಿಕೆಯ ಬಳಿಕೆ ಕೊಂಚ ಹೆಚ್ಚಾಗೇ ಗೊತ್ತಾಗಿದೆ. ಎಷ್ಟೋ ಮಕ್ಕಳು ಅಪ್ಪು ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪು ಅವರನ್ನು ಮಿಸ್ ಮಾಡಿಕೊಂಡ ಮಕ್ಕಳು, ಈಗ ಅದೇ ರೀತಿ ಪುಟ್ಟ ಮಕ್ಕಳು ಯುವರಾಜ್ ಕುಮಾರ್‌ ಅವರಿಗೆ ಪ್ರೀತಿಯಿಂದ ಗುಲಾಬಿ ಹೂ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆ ಬಳಿ ಬಂದ ಅಪ್ಪು ಅಭಿಮಾಗಳಿಗೆ ಸ್ಪಂದಿಸಿದ ಯುವರಾಜ್!

ಇನ್ನು ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡುತ್ತಾ ಇರಲಿಲ್ಲ. ಯಾರೆ ಅಭಿಮಾನಿಗಳು ಬಂದರೂ ಕೂಡ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಹಾಗೆಯೇ ಮನೆಯ ಬಳಿ ಬಂದ ಅಪ್ಪು ಅಭಿಮಾನಿಗಳಿಗೆ ಸ್ಪಂದಿಸಿದ ಯುವರಾಜ್ ಕುಮಾರ್ ಅವರು, ಅವರ ಕೋರಿಕೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಈ ರೀತಿಯ ಹಲವು ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ.

ಅಪ್ಪು ಸ್ಥಾನ ತುಂಬುತ್ತಾರ ಯುವರಾಜ್ ಕುಮಾರ್!

ಅಪ್ಪು ಸ್ಥಾನ ತುಂಬುತ್ತಾರ ಯುವರಾಜ್ ಕುಮಾರ್!

ಅಪ್ಪು ಬಳಿಕ ಬಹುತೇಕ ಎಲ್ಲರ ಚಿತ್ತ ರಾಘಣ್ಣನ ಪುತ್ರ ಯುವರಾಜ್ ಕುಮಾರ್‌ ಅವರತ್ತ ನೆಟ್ಟಿದೆ. ಪುನೀತ್‌ ರಾಜ್‌ಕುಮಾರ್ ಅವರ ಸ್ಥಾನವನ್ನು ತುಂಬಲು ಯಾರಿಗೂ ಅಷ್ಟು ಸುಲಭ ಅಲ್ಲ. ಅವರು ವಿಶೇಷವಾದ ವ್ಯಕ್ತಿತ್ವ ಉಳ್ಳವರು ಆಗಿದ್ದರು. ಆದರೆ ಅವರ ದಾರಿಯಲ್ಲಿ ಸಾಗುವ, ಅವರ ಒಂದಷ್ಟು ಗುಣಗಳನ್ನು ಮತ್ತೊರು ಅಳವಡಿಸಿಕೊಳ್ಳಬಹುದು. ಇದು ಈಗ ಯುವರಾಜ್ ಕುಮಾರ್ ಅವರಿಗೆ ಅನ್ವಯ ಆಗುತ್ತಿದೆ ಎನ್ನುತ್ತೆ ಅಪ್ಪು ಅಭಿಮಾನಿ ಬಳಗ. ಅದೇ ನಿಟ್ಟಿನಲ್ಲಿ ಇತ್ತೀಚೆಗೆ ಕನ್ನಡ ಚಿತ್ರರಂಗದ ಯುವರಾಜ ಇವರೇ ಎಂದು ಅಪ್ಪು ಅಭಿಮಾನಿಗಳು ಘೋಷಣೆ ಮಾಡಿಕೊಂಡಿದ್ದರು.

ಅಪ್ಪು ಕಥೆಯಲ್ಲಿ ಯುವರಾಜ್ ಕುಮಾರ್!

ಅಪ್ಪು ಕಥೆಯಲ್ಲಿ ಯುವರಾಜ್ ಕುಮಾರ್!

ಇನ್ನು ಯುವರಾಜ್ ಕುಮಾರ್ ಅವರ ಒಂದು ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಅದಾಗಲೇ ಅವರು ಜನರ ಮನಸ್ಸಲ್ಲಿ ಹೀರೋ ಆಗಿದ್ದಾರೆ. ಅಪ್ಪು ಬಳಿಕ ಇವರೇ ನಮ್ ಬಾಸ್ ಅಂತಿದೆ ಅಭಿಮಾನಿ ಬಳಗ. ಆದರೆ ಮೊದಲು ತೆರೆಗೆ ಬರುವ ಇವರ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಯಾಕೆಂದರೆ ಒಂದು ಕಡೆ ಈಗಾಗಲೇ ಸೆಟ್ಟೇರಿರುವ 'ಯುವ' ಸಿನಿಮಾ ಒಂದು ಕಡೆ, ಮತ್ತೊಂದು ಕಡೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವರಾಜ್ ಕುಮಾರ್ ಮೊದಲ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actor Yuva Rajkumar Is In Puneeth Rajkumar Path
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X