ಪುನೀತ್‌ ರಾಜ್‌ಕುಮಾರ್- ಅಶ್ವಿನಿ ದಾಂಪತ್ಯಕ್ಕೆ 22 ವರ್ಷ!

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇದೀಗ ಎಲ್ಲರ ಪಾಲಿಗೆ ಧೃವತಾರೆ. ಅಪ್ಪು ಇನ್ನಿಲ್ಲವಾಗಿ ತಿಂಗಳು ಕಳೆದಿದ್ದು, ಬರಿ ನೆನಪು ಮಾತ್ರ ಆಗಿದ್ದಾರೆ. ಅಪ್ಪು ಇಲ್ಲ ಎನ್ನುವ ನೋವಿನ ಜೊತೆಗೆ ಕುಟುಂಬ ಬದುಕಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಆದರಲ್ಲೂ ಅಪ್ಪು ಮಕ್ಕಳು ಮತ್ತು ಪತ್ನಿಗೆ ಇದು ಕ್ಷಣ ಕ್ಷಣಕ್ಕೂ ಎಡಬಿಡದೇ ಕಾಡುವಂತಹ ನೋವು. ಆದರೆ ಈ ನೋವಿನಲ್ಲೂ ಅವರ ಕುಟುಂಬಕ್ಕೆ ಇಂದು ಸಂತಸದ ದಿನ.

ಇಂದು (ಡಿಸೆಂಬರ್ 1) ಪುನೀತ್‌ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಆದ ದಿನ. ಇದು ಶುಭದಿನ ಆದರೂ ಅದನ್ನು ಸಂಭ್ರಮಿಸುವ ಅದೃಷ್ಟವನ್ನು ವಿಧಿ ಕಿತ್ತುಕೊಂಡು ಬಿಟ್ಟಿದೆ.

1999ರಲ್ಲಿ ಅಪ್ಪು- ಅಶ್ವಿನಿ ಮದುವೆ!

1999ರಲ್ಲಿ ಅಪ್ಪು- ಅಶ್ವಿನಿ ಮದುವೆ!

1999ರ ಡಿಸೆಂಬರ್ 1ರಂದು ಅಪ್ಪು- ಅಶ್ವಿನಿ ಮದುವೆ ಆಗಿದ್ದಾರೆ. ಈ ಜೋಡಿ ಮದುವೆಯಾಗಿ 22 ವರ್ಷ ಆಯ್ತು. ಜೀವನ ಪರಿಯಂತ ಜೊತೆಯಾಗಿ ಇರುತ್ತೇನೆ ಎಂದು 22 ವರ್ಷದ ಹಿಂದೆ ಸಪ್ತಪದಿ ತುಳಿದ ಪುನೀತ್‌ ರಾಜ್‌ಕುಮಾರ್‌ ಈಗ ಲೋಕವನ್ನೇ ಬಿಟ್ಟು ತೆರಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರು ಮೂರನೇ ವ್ಯಕ್ತಿಗಳಿಗೆ ಅಷ್ಟು ಪ್ರೀತಿ ನೀಡುತ್ತಿದ್ದರು. ನಗು ನಗುತ್ತಲೇ ಮಾತನಾಡಿಸುತ್ತಿದ್ದರು. ಹಾಗಿರುವಾಗ ಅವರ ಮನೆಯವರಿಗೆ ಇನ್ನೆಷ್ಟು ಪ್ರೀತಿ ಕೊಟ್ಟಿರ ಬೇಡ ಅಲ್ವಾ. ಅಷ್ಟು ಪ್ರೀತಿಯನ್ನು ಪಡೆದವರು ಈಗ ಅವರ ಆ ನೆನಪುಗಳೊಂದಿಗೆ ಬದುಕಬೇಕಾಗಿದೆ.

ವಿವಾಹ ವಾರ್ಷಿಕೋತ್ಸವ ಅಂದರೆ ಅಪ್ಪುಗೆ ವಿಶೇಷ ದಿನ!

ವಿವಾಹ ವಾರ್ಷಿಕೋತ್ಸವ ಅಂದರೆ ಅಪ್ಪುಗೆ ವಿಶೇಷ ದಿನ!

ಎಲ್ಲರಂತೆ ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಅವರಿಗೂ ವಿವಾಹ ವಾರ್ಷಿಕೋತ್ಸವ ಅಂದರೆ ವಿಶೇಷ. ಅವರು ಕೂಡ ಪ್ರತೀ ವರ್ಷ ವಿಶೇಷವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಅಷ್ಟಕ್ಕೂ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಮನೆಯಲ್ಲಿ ಇರುತ್ತಿರಲಿಲ್ಲ. ಸತಿ-ಪತಿ ಇಬ್ಬರು ಪ್ರವಾಸ ಕೈಗೊಳ್ಳುತ್ತಾ ಇದ್ದರು. ವಿಶೇಷವಾದ ಹಲವು ತಾಣಗಳಿಗೆ ಭೇಟಿ ನೀಡಿ, ಪ್ರಪಂಚ ಸುತ್ತಿ ಬರುತ್ತಿದ್ದರು.

ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಆ ದಿನಗಳನ್ನು ನೆನೆದು ಸಂತಸ ಪಡುವ ಸ್ಥಿತಿಯಲ್ಲೂ ಇಲ್ಲ ಅಪ್ಪು ಪತ್ನಿ ಅಶ್ವಿನಿ. ಆದರೂ ಆ ಸಂತಸದ ಕ್ಷಣಗಳನ್ನು ನೆನೆದು ಬದುಕು ಸಾಗಿಸುವ ಅನಿವಾರ್ಯತೆ ಅವರ ಮುಂದಿದೆ.

ಅಶ್ವಿನಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಅಪ್ಪು!

ಅಶ್ವಿನಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಅಪ್ಪು!

ಅಪ್ಪು ಸೂಪರ್‌ ಸ್ಟಾರ್ ಆದ ಜರ್ನಿಯಲ್ಲಿ ಅಶ್ವಿನಿ ಅವರದ್ದು ಪ್ರಮುಖ ಪಾತ್ರ. 1999ರಲ್ಲಿ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರ ಪ್ರೇಮಕಥೆ ಸಂಚಲನ ಮೂಡಿಸಿತ್ತು. ಪುನೀತ್ ರಾಜಕುಮಾರ್, ಅಶ್ವಿನಿ ಸ್ನೇಹಿತರಾಗಿದ್ದರು. ಬಳಿಕ ಪ್ರೇಮಿಗಳಾದರು. ಇವರ ಪ್ರೇಮಕಥೆಯಲ್ಲಿ ಸಿನಿಮಾ ರೀತಿಯಲ್ಲೇ ಹಲವು ಟ್ವಿಸ್ಟ್‌ಗಳು ಇವೆ. ಪುನೀತ್ ರಾಜ್‌ಕುಮಾರ್‌ ಪ್ರೇಮ ನಿವೇದನೆ ಮಾಡಿಕೊಂಡಾಗ ಅಶ್ವಿನಿ ಒಪ್ಪಿದರೂ, ಅವರ ಮನೆಯ ಹಿರಿಯರು ಒಪ್ಪಿರಲಿಲ್ಲವಂತೆ. ಆದರೆ ಮಗನ ನಿರ್ಧಾರಕ್ಕೆ ಪುನೀತ್ ಪೋಷಕರು ಮೊದಲಿನಿಂದಲೂ ಬೆಂಬಲ ನೀಡಿದ್ದರು. ಕೊನೆಗೆ ಅಶ್ವಿನಿಯ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತು. ನಂತರ ಇಬ್ಬರ ಪ್ರೇಮಕಥೆ ಮದುವೆಯೊಂದಿಗೆ ಮುಂದುವರೆಯಿತು. 1999ರ ಡಿಸೆಂಬರ್ 1ರಂದು ಈ ಜೋಡಿ ವೈವಾಹಿಕ ಬಾಳಿಗೆ ಕಾಲಿಟ್ಟಿತು.

ಇವರ ಪ್ರೇಮಕಥೆ ಹುಟ್ಟಿಕೊಂಡಿದ್ದು ಜಿಮ್ ನಲ್ಲಿ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಇಬ್ಬರು ಕೂಡ ಒಂದೇ ಜಿಮ್‌ಗೆ ಹೋಗುತ್ತಿದ್ದರು. ಅಲ್ಲಿ ಸ್ನೇಹಿತರಾದರು ಸ್ನೇಹ, ಪ್ರೇಮವಾಯಿತು. ಈ ಹಿಂದೆ ಅಶ್ವಿನಿ ತಮ್ಮ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಪುನೀತ್ ಅವರ ಸರಳ ವ್ಯಕ್ತಿತ್ವ, ಮತ್ತೊಬ್ಬರಿಗೆ ಸಹಾಯ ಮಾಡಬೇಕು ಅನ್ನುವ ಗುಣ ನನಗೆ ತುಂಬಾ ಇಷ್ಟವಾಯಿತು. ಪುನೀತ್ ಅವರು ವ್ಯಕ್ತಿಗಳನ್ನು ತುಂಬಾ ಸರಳವಾಗಿ ನಂಬಿ ಬಿಡುತ್ತಾರೆ ಅವರಿಗೆ ಟ್ರಾವೆಲ್‌ ಮಾಡುವುದು ಮತ್ತು ಒಳ್ಳೆಯ ಸ್ನೇಹಿತರನ್ನು ಪಡೆಯುವುದು ತುಂಬಾ ಇಷ್ಟ. ಅವರ ಈ ಗುಣಗಳು ನನಗೆ ತುಂಬಾ ಇಷ್ಟವಾಯಿತು' ಎಂದು ಅಶ್ವಿನಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಪ್ಪು-ಅಶ್ವಿನಿ ಆದರ್ಶ ದಂಪತಿಗಳು!

ಅಪ್ಪು-ಅಶ್ವಿನಿ ಆದರ್ಶ ದಂಪತಿಗಳು!

ಇವರಿಬ್ಬರೂ ಆದರ್ಶ ದಂಪತಿಗಳು. ಪುನೀತ್ ಮತ್ತು ಅಶ್ವಿನಿ ಇಲ್ಲಿ ತನಕ ಕೈಗೊಂಡಿರುವ ಕಾರ್ಯಗಳು, ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅಂಶಗಳು ಮತ್ತೊಬ್ಬರಿಗೆ ಆದರ್ಶ. ಪುನೀತ್ ರಾಜ್‌ಕುಮಾರ್ 22 ವರ್ಷಗಳು ಬಾಳ ದೋಣಿಯಲ್ಲಿ ಪತ್ನಿಗೆ ಜೀವಕ್ಕೆ ಜೀವ ಆಗಿದ್ದರು. ಆದರೆ ಈಗ ಬಾಳ ಪಯಣದಲ್ಲಿ ಅಪ್ಪು ಅಶ್ವಿನಿ ಅವರನ್ನು ಒಂಟಿ ಮಾಡಿ ಹೋಗಿದ್ದಾರೆ. ಆದರೆ ಅಪ್ಪು ಮಾಡಬೇಕಿದ್ದ ಅದೆಷ್ಟೋ ಕಾರ್ಯಗಳನ್ನು ಮಾಡಲು ಅಶ್ವಿನಿ ಅವರು ಮುಂದಾಗಿದ್ದಾರೆ. ಹಾಗಾಗಿ ಅವರಿಗೆ ನೋವು ಸಹಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

More from Filmibeat

English summary
Today Puneeth Rajkumar And Ashwini 22nd Wedding Anniversary,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X