Puneeth Rajkumar Live: ಭಾನುವಾರ ಪುನೀತ್ ಅಂತ್ಯಕ್ರಿಯೆ
ನಟ ಪುನೀತ್ ರಾಜ್‌ಕುಮಾರ್ (46) ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಇಂದು ಬೆಳಿಗ್ಗೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ವಿಕ್ರಂ ಆಸ್ಪತ್ರೆ ಬಳಿ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು, ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಇನ್ನೂ ಹಲವರು ಆಗಮಿಸಿದ್ದಾರೆ.
ಆಸ್ಪತ್ರೆ ಬಳಿಕ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಯಶ್, ರವಿಚಂದ್ರನ್, ಇನ್ನೂ ಹಲವಾರು ಸ್ಟಾರ್ ನಟ-ನಟಿಯರು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಹಲವು ನಟರು ಕಣ್ಣೀರು ಹಾಕುತ್ತಿದ್ದಾರೆ.

ನಟಿ ಶ್ರುತಿ ಅವರು ಕಣ್ಣೀರು ಹಾಕುತ್ತಲೇ ಆಸ್ಪತ್ರೆ ಕಡೆಗೆ ಬಂದಿದ್ದಾರೆ. ನಟ ಶ್ರೀಮುರಳಿ ಆಸ್ಪತ್ರೆ ಆವರಣ ಪ್ರವೇಶಿಸುತ್ತಿದ್ದಂತೆ ಅಲ್ಲಿಯೇ ಕುಳಿತು ಕಣ್ಣೀರು ಹಾಕಿದರು. ಅವರನ್ನು ಕೆಲವರು ಒಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದ್ದು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಆಸ್ಪತ್ರೆ ಒಳಗೆ ಬಿಡಿ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
11-47: ಅಪ್ಪು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿರುವ ತೆಲುಗು ಸ್ಟಾರ್ ನಟರ ದಂಡು. ಅಪ್ಪು ಅಂತಿಮ ದರ್ಶನ ಪಡೆದ ತೆಲುಗು ಸ್ಟಾರ್ ನಟ ನಂದಮುರಿ ಬಾಲಕೃಷ್ಣ. ಬೆಂಗಳೂರಿನ ಕಂಠೀರನ ಸ್ಟೇಡಿಯಂಗೆ ಬಾಲಣ್ಣನ್ಲಲಿ ಅಪ್ಪು ದರ್ಶನ ಪಡೆದು ಬಾಲಣ್ಣ ಕಣ್ಣೀರು.
9-55: ಇಂದು ಸಂಜೆ 4.15ಕ್ಕೆ ಬೆಂಗಳೂರು ತಲುಪಲಿರುವ ಪುನೀತ್ ರಾಜ್‌ಕುಮಾರ್ ಪುತ್ರಿ ದ್ರಿತಿ. ಸದ್ಯ ದೆಹಲಿಯತ್ತ ದ್ರಿತಿ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಂದು ಸಂಜೆ 4.15ಕ್ಕೆ ದ್ರಿತಿ ಬೆಂಗಳೂರು ತಲುಪಲಿದ್ದಾರೆ. ಅಮೆರಿಕಾದಿಂದ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಆಮಿಸುತ್ತಿದ್ದಾರೆ ಪುನೀತ್ ಪುತ್ರಿ.
9-48: ಅಮೆರಿಕಾದಿಂದ ಮಗಳು ಆಗಮಿಸುತ್ತಿದ್ದಂತೆಯೇ ಇಂದೇ ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಮಗಳು ಆಮಿಸುತ್ತಿದ್ದಾರೆ.ದೆಹಲಿಗೆ ಮಗಳು ಆಗಮಿಸುತ್ತಿದ್ದಂತೆ ಇಲ್ಲಿ ಮೆರವಣಿಗೆ ಪ್ರಾರಂಭವಾಗಲಿದೆ. ಮಗಳು ಬಂದ ನಂತರ ಇಂದೇ ಅಂತ್ಯಕ್ರಿಯೆ ಮಾಡಲಾಗುತ್ತದೆ.
01-15: ''ಪುನೀತ್ ರಾಜ್‌ಕುಮಾರ್ ಇಂದು ಬೆಳಿಗ್ಗೆ 11 ಗಂಟೆಗೆ ವಿಕ್ರಂ ಆಸ್ಪತ್ರೆಗೆ ದಾಖಲಾದರು. ಅದಕ್ಕೆ ಮುಂಚೆಯೇ ಎದೆ ನೋವಿಗೆ ಅವರು ತಪಾಸಣೆಗೆ ಒಳಗಾಗಿದ್ದರು. ಅವರು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯ ಗಂಭೀರವಾಗಿತ್ತು. ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇನ್ನು ಒಂದು ಗಂಟೆಯಲ್ಲಿ ಮತ್ತೆ ಅಪ್‌ಡೇಟ್ಸ್ ಕೊಡ್ತೀವಿ'' ಎಂದು ವಿಕ್ರಂ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
01:40- ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಶಿವರಾಜ್ ಕುಮಾರ್ ಜೊತೆ ಬಸವರಾಜ ಬೊಮ್ಮಾಯಿ ಮಾತನಾಡುತ್ತಿದ್ದಾರೆ.
01:40- ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿರುವ ಕಾರಣ ರಾಜ್ಯದೆಲ್ಲೆಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಜೊತೆಗೆ ತಮ್ಮ-ತಮ್ಮ ಸರಹದ್ದುಗಳಲ್ಲಿ ಹೆಚ್ಚಿನ ಜಾಗೃತೆವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ರವಾನಿಸಿದೆ.
01:45- ಬಿಡದಿ ತೋಟದ ಮನೆಯಲ್ಲಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ವಿಕ್ರಂ ಆಸ್ಪತ್ರೆಗೆ ಆಗಮಿಸಿದ್ದಾರೆ.
1:51- ಕೆಲವೇ ಹೊತ್ತಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ.
2:05: ಶಿವಮೊಗ್ಗದಲ್ಲಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಬೆಂಗಳೂರಿನತ್ತ ತೆರಳಿದ್ದಾರೆ.
02:06: ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಿಕ್ರಂ ಆಸ್ಪತ್ರೆಗೆ ಆಗಮಿಸಿದ್ದಾರೆ.
02:20- ಕರ್ನಾಟಕ ಮಾಜಿ ಸಿಎಂ ಯಡಿಯೂರಪ್ಪ ಅವರು ವಿಕ್ರಂ ಆಸ್ಪತ್ರೆಗೆ ಇದೀಗಷ್ಟೆ ಆಗಮಿಸಿದ್ದಾರೆ. ನಟ ಧ್ರುವ ಸರ್ಜಾ ಹಾಗೂ ಇನ್ನೂ ಅನೇಕ ನಟ-ನಟಿಯರು ಆಸ್ಪತ್ರೆಗೆ ಆಗಮಿಸಿದ್ದಾರೆ.
2:30 ವಿಕ್ರಂ ಆಸ್ಪತ್ರೆಯಲ್ಲಿದ್ದ ಶಿವರಾಜ್ ಕುಮಾರ್ ಹಾಗೂ ಇನ್ನೂ ಹಲವು ಕುಟುಂಬಸ್ಥರು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ತೆರಳಿದ್ದಾರೆ.
2:36- ಪುನೀತ್ ರಾಜ್‌ಕುಮಾರ್ ಇನ್ನಿಲ್ಲ.
2:47- ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
03:26 ಪುನೀತ್ ರಾಜ್‌ಕುಮಾರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಪುನೀತ್ ರಾಜ್‌ಕುಮಾರ್ ಅವರ ಸದಾಶಿವನಗರದ ಕಡೆಗೆ ಕೊಂಡೊಯ್ಯಲಾಗುತ್ತಿದೆ.
03:30 ಕರ್ನಾಟಕದ ಮನೆ ಮಗನಂತಿದ್ದ ಪುನೀತ್ ರಾಜ್‌ಕುಮಾರ್ ಅಗಲಿಕೆ ನಾಡಿನ ಜನತೆಗೆ ತುಂಬದ ನಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
3:30 ''ಎರಡು ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್ ನಟನೆಯ 'ಅರಸು' ಸಿನಿಮಾವನ್ನು ನೋಡಿದ್ದೆ. ಪುನೀತ್ ಒಳ್ಳ ಅದ್ಭುತ ವ್ಯಕ್ತಿಯಾಗಿದ್ದರು. ಅವರ ತಂದೆಯ ಆದರ್ಶಗಳನ್ನು ಪಾಲಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ'' ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
3:45 ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ಸದಾಶಿವನಗರದ ಅವರ ನಿವಾಸದ ಬಳಿಕ ಕೊಂಡೊಯ್ಯಲಾಗಿದ್ದು, ಯಶ್ ಹಾಗೂ ಇತರರು ಹೆಗಲು ಕೊಟ್ಟು ಪಾರ್ಥಿವ ಶರೀರವನ್ನು ಪುನೀತ್ ನಿವಾಸಕ್ಕೆ ಕೊಂಡೊಯ್ದರು. ಪುನೀತ್ ಅವರನ್ನು ತಬ್ಬಿ ಪತ್ನಿ ಅಶ್ವಿನಿ ಕಣ್ಣೀರು ಹರಿಸಿದರು.
3:45 ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಕಂಠೀರವ ಸ್ಟುಡಿಯೋದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಸಂಜೆ ವರೆಗೆ ಅಂತಿಮ ದರ್ಶನ ಮಾಡಬಹುದಾಗಿದೆ. ನಾಳೆ ಅಥವಾ ಭಾನುವಾರ ಅಂತಿಮ ಸಂಸ್ಕಾರ ಕುಟುಂಬದವರು ಹೇಳಿದ ಜಾಗದಲ್ಲಿ ನಡೆಯಲಿದೆ.
4:30 ಪುನೀತ್ ರಾಜ್‌ಕುಮಾರ್ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ರಮ್ಯಾ ನೋವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗಲ್ಲ. 'ಮಿಸ್ ಯೂ ಅಪ್ಪು' ಎಂದಿದ್ದಾರೆ.
4:45: ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗಿನ ಹಳೆಯ ಫೋಟೊ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ''ಇದು ಅಗಲಿಕೆಯ ವಯಸ್ಸಲ್ಲ. ಅತಿ ಚಿಕ್ಕ ವಯಸ್ಸಿಗೆ ಪ್ರತಿಭಾನ್ವಿತ ನಟ ಅಗಲಿದ್ದಾರೆ. ಮುಂದಿನ ಜನಾಂಗ ನಿಮ್ಮ ಸಾಧನೆಯನ್ನು ನೆನಪಿಟ್ಟುಕೊಳ್ಳಲಿದೆ'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
5:36 ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
7:00 ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂದತ್ತ ತೆರಳಿದ್ದು, ಅಭಿಮಾನಿಗಳ ಉದ್ಘೋಷದೊಂದಿಗೆ ಪುನೀತ್ ಪಾರ್ಥಿವ ಶರೀರ ಸ್ಟೇಡಿಯಂ ಪ್ರವೇಶಿಸಿದೆ.
7: 05: ಕನ್ನಡ ನಾಡಿನ ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಜನತೆ ಹಾಗೂ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ. ಅವರ ನಿಧನದಿಂದ ಚಿತ್ರರಂಗ ಅಪೂರ್ವ ನಟನನ್ನು ಕಳೆದುಕೊಂಡಿದೆ. ಅವರ ಅಭಿಮಾನಿ ಬಳಗ, ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ರಾಜೀವ್ ಚಂದ್ರಶೇಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
11:45 ನಟ ನಂದಮೂರಿ ಬಾಲಕೃಷ್ಣ ಅವರು ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಶಿವರಾಜ್ ಕುಮಾರ್ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಸಾಂತ್ವನ ಹೇಳಿದರು.
11:47 ನಟ ಪ್ರಭುದೇವ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಇಬ್ಬರೂ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆ ಹಾಡು ಇನ್ನೂ ಬಿಡುಗಡೆ ಆಗಿಲ್ಲ. ಪುನೀತ್ ಪಾರ್ಥಿವ ಶರೀರ ನೋಡಿ ಪ್ರಭುದೇವ ಕಣ್ಣೀರು ಹಾಕಿದರು. ಪ್ರಭದೇವ ಜೊತೆಗೆ ಅವರ ಸಹೋದರ ಪ್ರಸಾದ್ ಸಹ ಬಂದಿದ್ದಾರೆ.
11:55 ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಪುನೀತ್ ಪಾರ್ಥಿವ ಶರೀರ ಕಂಡು ಸಿದ್ದರಾಮಯ್ಯ ಮೌನಕ್ಕೆ ಶರಣಾದರು. ''ನನ್ನ ಮನೆ ಮಗನನ್ನೇ ಕಳೆದುಕೊಂಡ ಭಾವ ಆವರಿಸಿದೆ'' ಎಂದು ನಿನ್ನೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
1:02 ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ, ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಶಿವರಾಜ್ ಕುಮಾರ್ ಅವರಿಗೆ ಸಾಂತ್ವನ ಹೇಳಿದರು.
1:05: ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಬಗಲಲ್ಲೇ ಪುನೀತ್ ಮಣ್ಣಾಗಲಿದ್ದಾರೆ.
1: 05 ಪುನೀತ್ ರಾಜ್‌ಕುಮಾರ್ ಪುತ್ರಿ ದ್ರಿತಿ ಅಮೆರಿಕದಿಂದ ಈಗ ದೆಹಲಿಗೆ ಆಗಮಿಸಿದ್ದಾರೆ. ಸಂಝೆ 4 ಗಂಟೆ ವೇಳೆಗೆ ಬೆಂಗಳೂರಿಗೆ ಅವರು ಆಗಮಿಸಲಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಲಿದ್ದಾರೆ.
115 ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಎಸ್.ಎಂ.ಕೃಷ್ಣ ಅವರಿಗೆ ರಾಜ್‌ಕುಮಾರ್ ಕುಟುಂಬದೊಂದಿಗೆ ಬಹಳ ಆತ್ಮೀಯತೆ ಇತ್ತು.
1:31 ಗುರುಕಿರಣ್ ಹಾಗೂ ಅವರ ಪತ್ನಿ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪುನೀತ್ ಸಾಯುವ ಹಿಂದಿನ ದಿನ ರಾತ್ರಿ ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
1:40 ನಟ ಜೂ.ಎನ್‌ಟಿಆರ್, ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಬಹು ಸಮಯ ಪುನೀತ್ ಮುಖವನ್ನೇ ನೋಡುತ್ತಾ ನಿಂತುಬಿಟ್ಟರು. ಜೂ.ಎನ್‌ಟಿಆರ್ ಜೊತೆಗೆ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಸಹ ಇದ್ದರು. ಅಂತಿಮ ದರ್ಶನ ಪಡೆದ ಬಳಿ ಶಿವಣ್ಣನನ್ನು ತಬ್ಬಿಕೊಂಡು ಜೂ.ಎನ್‌ಟಿಆರ್ ಸಾಂತ್ವನ ಹೇಳಿದರು.
1:50: ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಕಾರಣ ಇಂದು ಮತ್ತು ನಾಳೆ ಬೆಳಿಗ್ಗಿನ ಜಾವ ಅಂತಿಮ ದರ್ಶನ ನಡೆಸಿ, ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
4:35 ಬೆಂಗಳೂರಿಗೆ ಆಗಮಿಸಿದ ಪುನೀತ್ ರಾಜ್‌ಕುಮಾರ್ ಪುತ್ರಿ ದ್ರುತಿ.
4:37 ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಶಿವರಾಜ್ ಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಚಿರಂಜೀವಿ ಜೊತೆಗೆ ನಟ ವೆಂಕಟೇಶ್, ಶ್ರೀಕಾಂತ್, ಆಲಿ ಅವರುಗಳು ಒಟ್ಟಿಗೆ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು.


Click it and Unblock the Notifications











