ಅಪ್ಪು ಹಾದಿಯಲ್ಲಿ ಅಭಿಮಾನಿ : ನೇತ್ರದಾನಕ್ಕಾಗಿ ಹಿಮಾಚಲದಿಂದ ಯಾತ್ರೆ!

ದಿವಂಗತ ನಟ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿ ಅಭಿಮಾನಿಗಳು ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಪ್ಪು ಅವರ ಬಗ್ಗೆ ಪ್ರತಿ ನಿತ್ಯ ಪ್ರಪಂಚದ ಯಾವುದಾದರೂ ಒಂದು ಮೂಲೆಯಲ್ಲಿ ಆದರು ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಅವರ ಹೆಸರಲ್ಲಿ ಅಭಿಮಾನಿಗಳು ಉತ್ತಮ ಕಾರ್ಯಗಳನ್ನು ಮಾಡಲು ಸದಾ ಸಜ್ಜಾಗಿರುತ್ತಾರೆ.

ಅದೆಷ್ಟೋ ಜನ ಅಪ್ಪು ಅವರಿಗಾಗಿ ಪಾದಯಾತ್ರೆ ಮಾಡಿದ್ದಾರೆ. ಅನ್ನ ದಾನ, ರಕ್ತದಾನ, ನೇತ್ರದಾನ ಜೊತೆಗೆ ಅವರ ಹೆಸರಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಪುನೀತ್‌ ಅಭಿಮಾನಿಗಳು ಮಾಡುತ್ತಿದ್ದಾರೆ.

ಸದ್ಯ ಮತ್ತೊಬ್ಬ ಅಭಿಮಾನಿ ಅಪ್ಪುಗಾಗಿ ವಿಶೇಷ ಕಾರ್ಯವೊಂದನ್ನು ಹಮ್ಮಿಕೊಂಡಿದ್ದಾನೆ. ಸದ್ಯ ಈತ ಕೈಗೊಂಡಿರುವ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಾತನಾಡಲಾಗುತ್ತಿದೆ.

Actor Puneeth Rajkumar Fan Traveling From Himachal To Karnataka

ಅಪ್ಪು ಹೆಸರಲ್ಲಿ 2700 ಕಿಲೊಮೀಟರ್ ಯಾತ್ರೆ!

ಹೌದು ಪುನೀತ್ ರಾಜ್‌ಕುಮಾರ್ ಅಭಿಮಾನಿ ಅಪ್ಪುಗಾಗಿ 2700 ಕಿಲೋಮೀಟರ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಹಿಮಾಚಲ ಪ್ರದೇಶದಿಂದ ಕರ್ನಾಟಕದ ತನಕ ಯಾತ್ರೆ ಮಾಡಲಿದ್ದಾರೆ. 'ಮೌಂಟೆನೇರ್ ಗುರುಪ್ರಕಾಶ್' ಗೌಡ ಎನ್ನುವವರು ಡಿಸೆಂಬರ್ 12ರಂದು ಯಾತ್ರೆ ಆರಂಭ ಮಾಡಲಿದ್ದಾರೆ.

ಹಿಮಾಚಲದಿಂದ ಕರ್ನಾಟಕಕ್ಕೆ ಸೈಕಲ್ ಸವಾರಿ!

ಬೈಸಿಕಲ್‌ನಲ್ಲಿ ಹಿಮಾಚಲದಿಂದ ಕರ್ನಾಟಕದ ತನಕ ಯಾತ್ರೆ ಮಾಡಲಿದ್ದಾರೆ. ಕರ್ನಾಟಕದ ಕಂಠೀರವ ಸ್ಟೂಡಿಯೋಗೆ ಬಂದು ತಲುಪಲಿದ್ದಾರೆ. ಅಷ್ಟೇ ಅಲ್ಲ ಕಂಠೀರವ ಸ್ಟುಡಿಯೊ ತಲುಪಿದ ಬಳಿಕ ಅವರು ನೇತ್ರದಾನಕ್ಕೆ ಸಹಿ ಹಾಕಲಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಗುರುಪ್ರಕಾಶ್ ಅವರು ಹಂಚಿಕೊಂಡಿದ್ದಾರೆ. ತಮ್ಮ ನೇತ್ರದಾನ ಜಾಗೃತಿಯ ಕಾರ್ಯದಲ್ಲಿ ಅಭಿಮಾನಿಗಳ ಕೈ ಜೋಡಿಸಿ ಎಂದು ಕೇಳಿಕೊಂಡಿದ್ದಾರೆ.

Actor Puneeth Rajkumar Fan Traveling From Himachal To Karnataka

ಇದು ಕೆವಲ ಈತ ಮಾತ್ರ ಅಲ್ಲ. ಹೀಗೆ ಸಾಕಷ್ಟು ಅಭಿಮಾನಿಗಳು. ಈಗಾಗಲೇ ಸಾಕಷ್ಟು ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ. ಜೊತೆಗೆ ಅಪ್ಪು ಅವರ ಮಾರ್ಗದಲ್ಲಿ ನಡೆಯುವ ನಿಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.

Actor Puneeth Rajkumar Fan Traveling From Himachal To Karnataka

ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯಗಳಲ್ಲಿ ಪುನೀತ್‌ ರಾಜ್‌ಕುಮಾರ್ ಸದಾ ಜೀವಂತ ಆಗಿರುತ್ತಾರೆ. ಈಗಾಗಲೇ ಪುನೀತ್‌ ರಾಜ್‌ಕುಮಾರ್ ಅವರ ನೂರಾರು ಪುತ್ಥಳಿಗಳು ಸ್ಥಾಪನೆ ಆಗಿವೆ. ಜೊತೆಗೆ ಹಲವು ರಸ್ತೆ ಮತ್ತು ಬಸ್‌ ನಿಲ್ದಾಣಕ್ಕೆ ಅಪ್ಪು ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

More from Filmibeat

English summary
Actor Puneeth Rajkumar Fan Traveling From Himachal To Karnataka, know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X