ಪವರ್‌ಸ್ಟಾರ್ 'ಪುನೀತ್ ರಾಜ್‌ಕಮಾರ್' ಹುಟ್ಟುಹಬ್ಬಕ್ಕೆ ದೊಡ್ಡ ಟ್ರೆಂಡ್!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ಎಲ್ಲರನ್ನು ಆಗಲಿದ್ದರೂ ಕೂಡ, ಅವರನ್ನು ಪ್ರೀತಿಸುವವರ ಮನಸಲ್ಲಿ ಸದಾ ಜೀವಂತ. ಈ ವಿಚಾರ ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ. ಅದರಲ್ಲೂ ನಟ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಅವರನ್ನು ಮೆರೆಸುತ್ತಿರುವ ಪರಿಯನ್ನು ವರ್ಣಿಸಲು ಅಸಾಧ್ಯ.
Recommended Video
ಪ್ರತಿ ವರ್ಷ ಮಾರ್ಚ್ 17 ಬಂತು ಅಂದ್ರೆ ಸಾಕು, ಸದಾಶಿವನಗರದಲ್ಲಿ ಇರುವ ಪುನೀತ್ ರಾಜ್‌ಕುಮಾರ್ ಮನೆಯ ರಸ್ತೆ ಜನರಿಂದ ತುಂಬಿ ಹೋಗುತ್ತಿತ್ತು. ಅಲ್ಲಿ ಸಂಭ್ರಮ ಬಿಟ್ಟರೆ ಮತ್ಯಾವುದಕ್ಕೂ ಜಾಗ ಇರುತ್ತಿರಲಿಲ್ಲ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಅಪ್ಪು ಅವರ ಹುಟ್ಟುಹಬ್ಬ ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಆದರೆ ಇನ್ನು ಮುಂದೆ ಅಂತಹ ಸಂಭ್ರಮ ನೋಡಲು ಸಾಧ್ಯವಾಗುವುದಿಲ್ಲ.
ಆದರೆ ಹಾಗಂತ ಅಪ್ಪು ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಬದಲಿಗೆ ಅವರು ಮೊದಲಿನಂತೆಯೇ ಅಪ್ಪು ಅವರನ್ನು ಮೆರೆಸಲು ಸಜ್ಜಾಗಿದ್ದಾರೆ. ಹೌದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಮೊದಲಿನ ಹಾಗೆ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಹಾಗಾಗಿ ಅದಾಗಲೇ ಕಾಮನ್ ಡಿಪಿ ಟ್ರೆಂಡ್ ಹುಟ್ಟುಹಾಕಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಹಾಗಾಗಿ ಹುಟ್ಟುಹಬ್ಬಕ್ಕೂ ಮೊದಲೇ ಡಿಪಿಯನ್ನು ಟ್ರೆಂಡ್ ಮಾಡಲು ಅಭಿಮಾನಿ ಬಳಗ ಸಜ್ಜಾಗಿದೆ. ಮಾರ್ಚ್ 12ರಂದು ಪುನೀತ್‌ರಾಜ್‌ಕುಮಾರ್ ಅವರ ಡಿಪಿ ರಿಲೀಸ್ ಮಾಡಲಾಗುತ್ತದೆ. ಮತ್ತು ಅಂದೇ ಡಿಪಿ ಫೋಟೊವನ್ನು ಟ್ರೆಂಡ್ ಮಾಡಲಾಗುತ್ತದೆ. ಹಾಗಾಗಿ ಈ ಬಾರಿ ಅಪ್ಪು ಕಾಮನ್ ಡಿಪಿ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಸೃಷ್ಟಿ ಆಗಿವೆ.
ಇದೇ ಮೊದಲ ಬಾರಿಗೆ ಅಪ್ಪು ಇಲ್ಲದೇ, ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮ ಪಡಲಿದ್ದಾರೆ. ಆದರೆ ಕಳೆದ ಎರಡು ವರ್ಷಗಳು ಪುನೀತ್ ರಾಜ್‌ಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೊರೊನಾ ಕಾರಣಕ್ಕೆ ಅಭಿಮಾನಿಗಳ ಜೊತೆಗಿನ ದೊಡ್ಡ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ವರ್ಷ ಆದರೂ ಅಪ್ಪು ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಅದರೆ ಅಪ್ಪು ಅಗಲಿಕೆಯಿಂದ ಅದು ಸಾಧ್ಯ ಆಗಿಲ್ಲ.
ಅಪ್ಪು ಹುಟ್ಟು ಹಬ್ಬಕ್ಕೆ 'ಜೇಮ್ಸ್' ಉಡುಗೊರೆ. ಇನ್ನು ಮತ್ತೊಂದು ವಿಶೇಷ ಅಂದರೆ, ಅಪ್ಪು ಹುಟ್ಟು ಹಬ್ಬಕ್ಕೆ ಅವರ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ತೆರೆಗೆ ಬರ್ತಿದೆ. ಮಾರ್ಚ್ 17ರಂದು ಅಪ್ಪು ಹುಟ್ಟು ಹಬ್ಬದ ಜೊತೆಗೆ ಅಪ್ಪು ಬರ್ತ್ ಡೇ ಆಚರಣೆ ಮಾಡಲು ಅಭಿಮಾನಿ ಮತ್ತು ಪ್ರೇಕ್ಷಕ ಬಳಗ ಸಜ್ಜಾಗಿದೆ.


Click it and Unblock the Notifications











