»   » ಪವರ್ ಸ್ಟಾರ್ ಯಂಗ್ ಆಗಿರುವುದರ ಹಿಂದಿನ ಸೀಕ್ರೆಟ್ ಇದು

ಪವರ್ ಸ್ಟಾರ್ ಯಂಗ್ ಆಗಿರುವುದರ ಹಿಂದಿನ ಸೀಕ್ರೆಟ್ ಇದು

Posted By:
Subscribe to Filmibeat Kannada
ಪವರ್ ಸ್ಟಾರ್ ಯಂಗ್ ಆಗಿರುವುದರ ಹಿಂದಿನ ಸೀಕ್ರೆಟ್ ಇದು | Filmibeat Kannada

ಯಾವುದೇ ಸೆಲಿಬ್ರಿಟಿಗಳಾಗಲಿ ಸಾಮಾನ್ಯ ಜನರನ್ನು ಸ್ಫೂರ್ತಿಗೊಳಿಸುವಂತಿರಬೇಕು. ಅದರಲ್ಲೂ ಸಿನಿಮಾ ಸ್ಟಾರ್ ಗಳಾದರೆ ತಮ್ಮ ಬಗ್ಗೆ ತಾವು ಹೆಚ್ಚಿಗೆ ಕೇರ್ ತೆಗೆದುಕೊಳ್ಳಬೇಕಾಗುತ್ತೆ. ಬಿಗ್ ಸ್ಕ್ರೀನ್ ಮೇಲೆ ಮಿಂಚುವವರ ಆರೋಗ್ಯ ಮತ್ತು ಫಿಟ್ ನೆಸ್ ತುಂಬಾ ಚೆನ್ನಾಗಿ ಇರಬೇಕು.

ಇನ್ನು ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸ್ , ಸ್ಟಂಟ್ಸ್ ಎಲ್ಲದರಲ್ಲೂ ಪರ್ಫೆಕ್ಟ್ ಎನ್ನಿಸಿಕೊಂಡಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಯಸ್ಸು ನಲವತ್ತು ದಾಟಿದ್ರು ಕೂಡ ಇನ್ನೂ ಫಿಟ್ ಅಂಟ್ ಫೈನ್ ಆಗಿದ್ದಾರೆ. ಅದೆಷ್ಟೋ ಹುಡುಗರು ಇವರನ್ನು ನೋಡಿ ಇವರಂತೆ ಇರಬೇಕಪ್ಪಾ, ಫಿಟ್ ಅಂದ್ರೆ ಹಿಂಗೇ ಇರಬೇಕು ಎನ್ನುವ ಆಸೆಗಳನ್ನು ಕಟ್ಟಿಕೊಂಡಿದ್ದಾರೆ. ಕರುನಾಡ ಅಪ್ಪು ಇಷ್ಟು ಫಿಟ್ ಆಗಿರುವುದರ ಹಿಂದೆ ಒಂದು ಬಿಗ್ ಸೀಕ್ರೆಟ್ ಇದೆ. ಮುಂದೆ ಓದಿ...

ಅಪ್ಪು ಫಿಟ್ ಆಗಿರುವುದರ ಸೀಕ್ರೆಟ್ ಏನು?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಸಖತ್ ಫಿಟ್ ಆಗಿದ್ದಾರೆ. ಬೆಳ್ಳಿ ಪರದೆ ಮೇಲೆ ತಮ್ಮನ್ನು ತಾವು ಚೆನ್ನಾಗಿ ಕಾಣಿಸಿಕೊಳ್ಳುವಂತೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ವಯಸ್ಸು ನಲವತ್ತು ದಾಟಿದ್ರು ಕೂಡ ನೋಡುಗರನ ಇಂಪ್ರೆಸ್ ಮಾಡುವಂತಿದ್ದಾರೆ

ನಗುವಿನಲ್ಲಿದೆ ಯೌವನ

ಪುನೀತ್ ರಾಜ್ ಕುಮಾರ್ ರ ನಗು ಪ್ರತಿಯೊಬ್ಬ ಸಿನಿಮಾ ಅಭಿಮಾನಿಗೂ ಇಷ್ಟವಾಗುತ್ತೆ. ಸದಾ ಹಸನ್ಮುಖಿಯಾಗಿರುವುದು ಕೂಡ ಅಪ್ಪು ಅವ್ರ ಫಿಟ್ ನೆಸ್ ಸೀಕ್ರೆಟ್ ಅಂದರೆ ತಪ್ಪಿಲ್ಲ. ನಿಮ್ಮ ಯೌವನದ ಸೀಕ್ರೆಟ್ ಏನು ಅಂದ್ರೆ ಪುನೀತ್ ಮುಖದಲ್ಲಿ ಮೊದಲಿಗೆ ಕಾಣುವುದು ನಗು ಮಾತ್ರ.

ಯೋಗನೂ ಮಾಡುತ್ತಾರೆ

ಪುನೀತ್ ರಾಜ್ ಕುಮಾರ್ ಪ್ರತಿನಿತ್ಯ ವರ್ಕ್ ಔಟ್ ಮಾಡುತ್ತಾರೆ. ದಿನಕ್ಕೆ ಒಂದು ಗಂಟೆಗಳ ಕಾಲ ಜಿಮ್ ನಲ್ಲಿ ದೇಹವನ್ನು ದಂಡಿಸುತ್ತಾರೆ. ಅದರ ಜೊತೆಯಲ್ಲಿ ಯೋಗವನ್ನೂ ಮಾಡುತ್ತಾರೆ ಅಪ್ಪು.

ಶುಭಕರ್ ಶೆಟ್ಟಿ ಅಪ್ಪು ಟ್ರೈನರ್

ಪವರ್ ಸ್ಟಾರ್ ಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಇನ್ ಸ್ಟ್ರಕ್ಟ್ ಮಾಡುವ ಟ್ರೈನರ್ ಶುಭಕರ್ ಶೆಟ್ಟಿ. ಸುಮಾರು ಏಳು ವರ್ಷದಿಂದ ಪುನೀತ್ ಜೊತೆಯಲ್ಲೇ ಇರುವ ಶುಭಕರ್ ರಿಗೆ ಅಪ್ಪು ಅವ್ರನ್ನ ಟ್ರೈನ್ ಮಾಡುವುದು ಕೆಲಸ. ಇನ್ನು ಡಯೇಟ್ ಎನ್ನುವುದನ್ನು ಚಾಚು ತಪ್ಪದೇ ಫಾಲೋ ಮಾಡುವ ನಟ ಅಲ್ಲ ಅಪ್ಪು. ಸಿಂಪಲ್ ಆಗಿ ಜೀವಿಸಿ ಬೇರೆಯವರಿಗೆ ಸ್ಯಾಂಪಲ್ ಆಗಿರಿ ಎನ್ನುವ ಹಾಗೆ ಪುನೀತ್ ಇದ್ದಾರೆ.

English summary
Kannada Actor Puneet Rajkumar has done a lot of exercises and yoga everyday and is still fit for it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada