ಕತಾರ್ ನಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ಕಿದೆ ಹೊಸ ಬಿರುದು
Recommended Video
ಪವರ್ ಸ್ಟಾರ್, ರಾಜರತ್ನ ಎಂದು ಕರೆಸಿಕೊಳ್ಳುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಈಗ ಹೊಸ ಬಿರುದು ಪಡೆದುಕೊಂಡಿದ್ದಾರೆ. ಕತಾರ್ ನಲ್ಲಿ ಅಪ್ಪುಗೆ ಹೊಸದೊಂದು ಬಿರುದು ನೀಡಿ ಗೌರವ ಸಲ್ಲಿಸಲಾಗಿದೆ.
ಕತಾರ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್ ಕುಮಾರ್ ಹಾಗೂ ಸಾಹಿತಿ ಎಸ್ ಎಲ್ ಭೈರಪ್ಪ ಭಾಗಿಯಾಗಿದ್ದರು. ಭೈರಪ್ಪನವರಿಗೆ ಕತಾರ್ ಕನ್ನಡ ಸನ್ಮಾನ್ ಪ್ರಶಸ್ತಿ ನೀಡಲಾಯಿತು.
ಪುನೀತ್ ರಾಜ್ ಕುಮಾರ್ ರಿಗೆ 'ಕಲಾ ಸಾರ್ವಭೌಮ' ಎಂದು ಹೊಸ ಬಿರುದು ನೀಡಲಾಗಿದೆ. ಈ ಮೂಲಕ ಪವರ್ ಸ್ಟಾರ್ ಗೆ ಮತ್ತೊಂದು ಹೆಸರು ಸಿಕ್ಕಿದೆ. ರಾಜ್ ಕುಮಾರ್ ನಟ ಸಾರ್ವಭೌಮ, ಶಿವರಾಜ್ ಕುಮಾರ್ ನಾಟ್ಯ ಸಾರ್ವಭೌಮ ಎಂದು ಹೆಸರು ಪಡೆದಿದ್ದು, ಇದೀಗ ಅಪ್ಪು 'ಕಲಾ ಸಾರ್ವಭೌಮ' ಆಗಿದ್ದಾರೆ.

ಈ ವರ್ಷ ಕತಾರ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿ ಆಗಿದ್ದರು. ಅವರ ಪತ್ನಿ ಅಶ್ವಿನಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಾದ್ಯಗೋಷ್ಟಿಯ ಮೆರವಣಿಗೆ ಮೂಲಕ ಸಮಾರಂಭಕ್ಕೆ ಅವರನ್ನು ಕರೆತಂದು ಸನ್ಮಾನಿಸಿದ್ದು, ಪ್ರಮುಖ ಆಕರ್ಷಣೆ ಆಗಿತ್ತು.
ಅಂದಹಾಗೆ, ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.


Click it and Unblock the Notifications











