ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಎಂದಿದ್ದ ಅಪ್ಪು!
ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾ ರಂಗದಲ್ಲಿ ಕೇವಲ ಒಬ್ಬ ಸ್ಟಾರ್ ನಟನಾಗಿ ಗುರುತಿಸಿ ಕೊಂಡವರಲ್ಲ. ತಮ್ಮ ವ್ಯಕ್ತಿತ್ವದ ಮೂಲಕ ಹೆಚ್ಚಾಗಿ ಎಲ್ಲರಿಗೂ ಹತ್ತಿರ ಆಗುತ್ತಿದ್ದ ವ್ಯಕ್ತಿ. ಸಿನಿಮಾ ಮಂದಿಗೆ ಮಾತ್ರವಲ್ಲ ತಮ್ಮ ಅಭಿಮಾನಿ ಬಳಗಕ್ಕೂ ಅಪ್ಪು ಅತಿಯಾದ ಪ್ರೀತಿ ತೋರುತ್ತಿದ್ದರು. ಅಭಿಮಾನಿಗಳು ಅವರನ್ನು ಎಷ್ಟು ಪ್ರೀತಿಸುತ್ತಿದ್ದರೋ ಅದಕ್ಕಿಂತಲೂ ಹೆಚ್ಚಿನದಾಗಿ ಅಪ್ಪು ಅವರ ಅಭಿಮಾನಿಗಳನ್ನ ಪ್ರೀತಿಸುತ್ತಿದ್ದರು. ಹಾಗಾಗಿಯೇ ಅಪ್ಪು ತಮ್ಮ ಅಭಿಮಾಣಿಗಳನ್ನ ಮನೆ ದೇವರು ಎಂದು ಕರೆದಿದ್ದರು.
ಪುಟ್ಟ ಮಕ್ಕಳ ಫೇವರೆಟ್ ಈ ಅಪ್ಪು!
ಪುನೀತ್‌ಗೆ ಇರುವ ಅಭಿಮಾನಿಗಳ ಬಳಗವೇ ಒಂದು ರೀತಿಯ ವಿಶೇಷ. ಸ್ಟಾರ್ ನಟರಿಗೆ ಅವರದೇ ಆದಂತಹ ವಿಶೇಷವಾದ ಅಭಿಮಾನಿ ಬಳಗ ಇರುತ್ತದೆ. ಆದರೆ ಪುನೀತ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ಅದು ವಿಭಿನ್ನವಾಗಿ ನಿಲ್ಲುತ್ತದೆ. ಯಾಕೆ ಅಂತ ಹೇಳಿದರೆ ಪುನೀತ್ ರಾಜಕುಮಾರ್ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೆ ಅಭಿಮಾನಿಗಳಿದ್ದಾರೆ. ಪುನೀತ್ ಅವರನ್ನು ದೇವರಂತೆ ಪೂಜಿಸುವ ಎಷ್ಟೋ ಸಹಸ್ರಾರು ಮನಸ್ಸುಗಳಿವೆ. ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದುಕೊಳ್ಳಲು ಹೆಚ್ಚಾಗಿ ನಡೆದು ಬಂದಿದ್ದೇ ಮಕ್ಕಳು ಮತ್ತು ಮಹಿಳೆಯರು. ಪುನೀತ್ ರಾಜಕುಮಾರ್ ಗೆ ಒಂದು ಮನೆಯಲ್ಲಿ ಒಬ್ಬ ಮಾತ್ರ ಅಭಿಮಾನಿ ಇದ್ದಾನೆ ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮಕ್ಕಳು, ಅಮ್ಮ, ಅಪ್ಪ, ಅಜ್ಜ ಎಲ್ಲರೂ ಕೂಡ ಅವರ ಅಭಿಮಾನಿಗಳು. ಇದಕ್ಕೆ ಸಾಕ್ಷಿಯಾಗಿರೋದು ಅವರ ಅಂತಿಮ ದರ್ಶನಕ್ಕೆ ಹರಿದು ಬಂದಂತಹ ದೊಡ್ಡ ಜನಸಾಗರ. ಆ ಸಾಗರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದರು. ಕಡೆಯ ಬಾರಿಗೆ ಪುನೀತ್ ರಾಜ್‌ಕುಮಾರ್ ಅವರ ದರ್ಶನವನ್ನು ಪಡೆದುಕೊಂಡು ತಮ್ಮ ಅಂತಿಮ ನಮನ ಸಲ್ಲಿಸಬೇಕು ಎಂದು ದೂರದ ಊರುಗಳಿಂದ ಮಹಿಳೆಯರು ಕೂಡ ಬೆಂಗಳೂರಿನ ಕಂಠೀರವದತ್ತ ಬಂದು ಬಿಟ್ಟಿದ್ದಾರೆ. ಇನ್ನು ಪುಟ್ಟ ಮಕ್ಕಳಿಗೆ ಅಪ್ಪು ಅಂದ್ರೆ ಅದೆಷ್ಟು ಪ್ರೀತಿ. ಅಪ್ಪು ಹೆಸರು ಹೇಳಿದರೆ ಸಾಕು ಮಕ್ಕಳಿಗೆ ಖುಷಿಯೋ ಖುಷಿ. ಅಪ್ಪು ಸಿನಿಮಾದಲ್ಲಿ ಒಂದು ಡ್ಯಾನ್ಸ್ ಸ್ಟೆಪ್ ಮಾಡಿದರೆ, ಅದನ್ನು ಕಲಿತು ಖುಷಿ ಪಡುತ್ತಿದ್ದ ಮಕ್ಕಳು ಈ ಮಂಕಾಗಿ ಬಿಟ್ಟಿದ್ದಾರೆ
ಕರುನಾಡ ಮಕ್ಕಳಿಗೆ ಹೀರೋ ಅಂದರೇನೆ ಅದು ಅಪ್ಪು. ಪುನೀತ್ ರಾಜಕುಮಾರ್ ಅವರ ಯಾವುದೇ ಸಿನಿಮಾ ಬಂದರೂ ಕೂಡ ಆ ಸಿನಿಮಾದ ಡೈಲಾಗ್ ಗಳು ಮತ್ತು ಸಾಂಗ್, ಡಾನ್ಸ್ ಕಲಿತು ಅದನ್ನು ಎಂಜಾಯ್ ಮಾಡುತ್ತಾ ಇದ್ದರು. ಈ ಎಲ್ಲಾ ಸಂಭ್ರಮವನ್ನು ಪ್ರತಿಯೊಬ್ಬರ ಬದುಕಲ್ಲು ಕಟ್ಟಿಕೊಡುತ್ತಿದ್ದ ಅಪ್ಪು ಇನ್ನಿಲ್ಲ. ಆದರೆ ಅಭಿಮಾನಿಗಳು ಅಪ್ಪುವನ್ನು ಎಂದೆಂದಿಗೂ ಮನಸ್ಸಿನಲ್ಲಿ ಇಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ.

ಅಪ್ಪು ಸಿನಿಮಾಗಳು ಕಮರ್ಷಿಯಲ್ ವಿಚಾರಕ್ಕೆ ಮಾತ್ರ ಸದ್ದು ಮಾಡಿದಂತಹ ಸಿನಿಮಾಗಳಲ್ಲ. ಪುನೀತ್ ಅವರ ಪ್ರತಿ ಸಿನಿಮಾದಲ್ಲೂ ಕೂಡ ಏನೋ ಒಂದು ಸಂದೇಶ ಇದ್ದೆ ಇರುತ್ತಿತ್ತು. ಸಿನಿಮಾ ನೋಡುವ ಪ್ರೇಕ್ಷಕರ ಪುನೀತ್ ರಾಜಕುಮಾರ್ ಅವರು ಹೇಳುತ್ತಿರುವ ಈ ಮಾತು ಸರ ಅಂತ ಯೋಚೆನೆ ದೂಡುತ್ತಿದ್ದವು. ಅದೆಷ್ಟೋ ಜನ ತಮ್ಮ ಬದುಕನ್ನೇ ಪರಿವರ್ತನೆ ಮಾಡಿಕೊಂಡು ಬದಲಾವಣೆಗಳನ್ನು ಮಾಡಿಕೊಂಡಿರುವುದು ಕೂಡ ಉಂಟು.
ಹಾಗಾಗಿ ಪುನೀತ್ ರಾಜಕುಮಾರ್ ಸಿನಿಮಾ ಬರ್ತಿದೆ ಅಂದ್ರೆ ಇಡೀ ಕುಟುಂಬ ಸಮೇತವಾಗಿ ಚಿತ್ರಮಂದಿರಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹಾಜರಾಗಿ ಬಿಡುತ್ತಾ ಇದ್ದರು. ರಾಜಕುಮಾರದಂತಹ ಸಿನಿಮಾಗಳ ಮೂಲಕ ಅಪ್ಪು ಕಲ್ಲು ಮನಸ್ಸುಗಳನ್ನೇ ಪರಿವರ್ತಿಸಿದರು. ಈಗ ಅಪ್ಪು ನಮ್ಮ ಮಧ್ಯೆ ಇಲ್ಲ ಆದರೆ ಪುನೀತ್ ರಾಜ್‌ಕುಮಾರ್ ಅವರ ಆ ನಿಷ್ಕಲ್ಮಶ ನಗು ಸದಾ ಎಲ್ಲರ ಮನಸ್ಸಲ್ಲಿ ಅಚ್ಚೊತ್ತಿದೆ.


Click it and Unblock the Notifications











