ಕರುಣಾನಿಧಿ ಮನೆಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

By Bharath Kumar

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಎಂ ಕರುಣಾನಿಧಿ ಅವರ ಮನೆಗೆ ಕನ್ನಡ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಚೆನ್ನೈನ ಗೋಪಾಲಪುರಂದಲ್ಲಿರುವ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿದ ಪುನೀತ್ ಅವರ ಮನೆಯವರ ಜೊತೆ ಮಾತನಾಡಿದರು. ಕರುಣಾನಿಧಿ ಅವರ ಮಗ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಅವರಿಗೆ ಧೈರ್ಯ ತುಂಬಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪುನೀತ್ ರಾಜ್ ಕುಮಾರ್ ''ಕರುಣಾನಿಧಿ ಅವರೊಬ್ಬ ದಿಗ್ಗಜ ನಾಯಕ. ಅವರ ನಿಧನಕ್ಕೆ ಸಂತಾಪ ಸೂಚಿಸಬೇಕಾಗಿರುವುದು ನಮ್ಮ ಕರ್ತವ್ಯ, ಹೀಗಾಗಿ ಅವರ ಮನೆಗೆ ಬಂದಿದ್ದೇನೆ'' ಎಂದರು.

Actor Puneeth Rajkumar met DMK Leader MK Stalin

''ನಮ್ಮ ತಂದೆ ರಾಜ್ ಕುಮಾರ್ ಅವರ ಅಪಹರಣವಾಗಿದ್ದ ವೇಳೆ ಕರುಣಾನಿಧಿ ಅವರು ತುಂಬಾ ಸಹಾಯ ಮಾಡಿದ್ದಾರೆ. ಅವರ ಕುಟುಂಬದ ನಮ್ಮ ಕುಟುಂಬ ಒಳ್ಳೆ ನಂಟು ಹೊಂದಿದೆ. ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದೇನೆ ಅಷ್ಟೇ'' ಎಂದು ತಿಳಿಸಿದರು.

ಕರುಣಾನಿಧಿ ಅವರು ಆಗಸ್ಟ್ 7 ರಂದು ಸಂಜೆ ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕೇವಲ ರಾಜಕಾರಣದಲ್ಲಿ ಮಾತ್ರವಲ್ಲದೇ ಸಿನಿಮಾರಂಗದಲ್ಲೂ ಕರುಣಾನಿಧಿ ಉತ್ತಮ ಸಂಬಂಧ ಹೊಂದಿದ್ದರು. ಸುಮಾರು 60 ಕ್ಕೂ ಅಧಿಕ ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆ ಬರೆದಿದ್ದರು.

More from Filmibeat

English summary
Kannada Actor Puneeth Rajkumar met DmkLeader MK Stalin and expressed his condolence over the demise of Kalaignar Ayya earlier today (august 13th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X