ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲಿಯೂ ತೊಡಗಿಸಿಕೊಂಡ ನಟ. ಈಗಾಗಲೇ ಅನೇಕ ರಿಯಾಲಿಟಿ ಶೋ ಗಳ ಮೂಲಕ ಯಶಸ್ಸು ಕಂಡಿರುವ ಅವರು ಇದೀಗ ಹೊಸ ಕಾರ್ಯಕ್ರಮವೊಂದಕ್ಕೆ ಸಜ್ಜಾಗುತ್ತಿದ್ದಾರೆ.
ಹೌದು, ಅಪ್ಪು ಕಲರ್ಸ್ ವಾಹಿನಿಯ ಹೊಸ ರಿಯಾಲಿಟಿ ಶೋ ದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ರಿಯಾಲಿಟಿ ಶೋ ಮಾಡುವುದು ಖಚಿತ ಎಂದು ಹೇಳಿದ್ದಾರೆ. ಆದರೆ, ಇದು ಯಾವ ರೀತಿಯ ಕಾರ್ಯಕ್ರಮ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಇತ್ತೀಚಿಗೆ ಕಲರ್ಸ್ ವಾಹಿನಿಗೆ 'ಫ್ಯಾಮಿಲಿ ಪವರ್' ಎಂಬ ಕಾರ್ಯಕ್ರಮವನ್ನು ಪುನೀತ್ ಮಾಡಿದ್ದರು. ಈ ಕಾರ್ಯಕ್ರಮದ ನಂತರ ವಾಹಿನಿಯ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಪುನೀತ್ ಹೊಂದಿದ್ದು, ಮತ್ತೊಂದು ಪ್ರಾಜೆಕ್ಟ್ ಮಾಡಲು ರೆಡಿಯಾಗಿದ್ದಾರೆ.

ಪುನೀತ್ ಎಂದ ತಕ್ಷಣ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನೆನಪಿಗೆ ಬರುತ್ತದೆ. ಈ ಕಾರ್ಯಕ್ರಮದ ಮೂಲಕ ಕಿರುತೆರೆ ಲೋಕಕ್ಕೆ ಅಪ್ಪು ಬಂದಿದ್ದರು. ಅಂದಹಾಗೆ, ಈ ಬಾರಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ಅಪ್ಪು ಬದಲು ರಮೇಶ್ ಅರವಿಂದ್ ಮುಂದುವರೆಸುತ್ತಿದ್ದಾರೆ.


Click it and Unblock the Notifications











