ಪುನೀತ್ ನಿರ್ಮಾಣದಲ್ಲಿ ಮತ್ತೊಂದು ಹೊಸ ಸಿನಿಮಾ : ಹೀರೋ ಯಾರ್ ಗೊತ್ತಾ?
Recommended Video

ನಟ ಪುನೀತ್ ರಾಜ್ ಕುಮಾರ್ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವುಗಳ ನಂತರ ಅವರ ಮೂರನೇ ನಿರ್ಮಾಣದ ಚಿತ್ರಕ್ಕೆ ತಯಾರಿಗಳು ಶುರು ಆಗಿವೆ.
'ಕವಲು ದಾರಿ' ಸಿನಿಮಾದ ಮೂಲಕ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾದರು. ಈ ಚಿತ್ರದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಆ ಬಳಿಕ 'ಮಯಾ ಬಜಾರ್' ಎಂಬ ಹೊಸ ಸಿನಿಮಾವನ್ನು ಅವರು ಶುರು ಮಾಡಿದ್ದರು. ಈ ಎರಡು ಚಿತ್ರಗಳಲ್ಲಿ ನಿರ್ದೇಶಕ, ನಟ, ನಟಿ ಹೀಗೆ ಬಹುತೇಕರು ಹೊಸಬರೇ ಇದ್ದರು.
ಅಂದಹಾಗೆ, 'ಕವಲು ದಾರಿ' ಹಾಗೂ 'ಮಯಾ ಬಜಾರ್' ಚಿತ್ರದ ನಂತರ ಅಪ್ಪು ಈಗ ಇನ್ನೊಂದು ಸಿನಿಮಾಗೆ ಪ್ಲಾನ್ ಮಾಡಿದ್ದಾರೆ. ಈ ಸಿನಿಮಾದ ನಾಯಕ ಯಾರು ಅಂತ ಕೇಳಿದರೆ ನಿಮಗೂ ಒಂದು ಕ್ಷಣ ಅಚ್ಚರಿ ಆಗಬಹುದು. ಮುಂದೆ ಓದಿ...

ಅಪ್ಪು ಪ್ರೊಡಕ್ಷನ್ ನಲ್ಲಿ ದಾನಿಶ್ ಸೇಠ್
ನಟ ಡ್ಯಾನಿಶ್ ಸೇಠ್ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರದ ನಂತರ ಬಳಿಕ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದ ಅವರು ಈಗ ಮೂರನೇ ಸಿನಿಮಾ ಶುರು ಮಾಡಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ.

ಪನ್ನಗ ಭರಣ ನಿರ್ದೇಶನ
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಪುತ್ರ ಪನ್ನಗ ಭರಣ ನಿರ್ದೇಶನ ಮಾಡುತ್ತಿದ್ದಾರೆ. 'ಹ್ಯಾಪಿ ನ್ಯೂ ಹಿಯರ್' ಚಿತ್ರದ ಮೂಲಕ ಡೈರೆಕ್ಷನ್ ಶುರು ಮಾಡಿದ್ದ ಪನ್ನಗ ಭರಣ ಈಗ ಎರಡನೇ ಚಿತ್ರವನ್ನು ಪುನೀತ್ ಬ್ಯಾನರ್ ನಲ್ಲಿ ಮಾಡುವ ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಇದೊಂದು ಕಾಮಿಡಿ ಸಿನಿಮಾ
ಡ್ಯಾನಿಶ್ ಸೇಠ್ ಅಂದರೆ ಮೊದಲು ನೆನಪಾಗುವುದು ಕಾಮಿಡಿ. ತಮ್ಮ ಮೊದಲ ಸಿನಿಮಾದಲ್ಲಿಯೂ ಕಾಮಿಡಿಯ ಮೂಲಕ ಗಮನ ಸೆಳೆದಿದ್ದ ಡ್ಯಾನಿಶ್ ಸೇಠ್ ಈಗ ಅದನ್ನೇ ಮುಂದುವರೆಸಲಿದ್ದಾರೆ. ಚಿತ್ರದಲ್ಲಿ ಹಾಸ್ಯ ಹಾಗೂ ವಿಡಂಬನಾತ್ಮಕ ಕಥೆ ಇದೆಯಂತೆ.

ಡ್ಯಾನಿಶ್ ಸೇಠ್ ಎರಡನೇ ಚಿತ್ರ
ಈ ಚಿತ್ರಕ್ಕೆ ಮೊದಲೇ ಡ್ಯಾನಿಶ್ ಇನ್ನೊಂದು ಸಿನಿಮಾವನ್ನ ಮಾಡುತ್ತಿದ್ದಾರೆ. ಅವರ ಆ ಸಿನಿಮಾಗೆ 'ಸೋಲ್ಡ್' ಎಂಬ ಹೆಸರಿಡಲಾಗಿದೆ. ಈ ಚಿತ್ರಕ್ಕೆ ಕಾವ್ಯ ಶೆಟ್ಟಿ ನಾಯಕಿ ಆಗಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರೇರಣಾ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

ಡ್ಯಾನಿಶ್ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಅಪ್ಪು
ಡ್ಯಾನಿಶ್ ಅವರ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಒಂದು ಸಣ್ಣ ಪಾತ್ರ ಮಾಡಿದ್ದರು. ಪುನೀತ್ ಆಗಿಯೇ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಅವರು ನಿರ್ವಹಿಸಿದ್ದರು. ಇದೀಗ ಡ್ಯಾನಿಶ್ ಜೊತೆಗೆ ಹೊಸ ಸಿನಿಮಾಗೆ ಅಪ್ಪು ಮುಂದಾಗಿದ್ದಾರೆ.


Click it and Unblock the Notifications











