ಸೈಕಲ್ ಹತ್ತಿ ಬೆಂಗಳೂರು ಸುತ್ತಿ ಬಂದ 'ದೊಡ್ಮನೆ ಹುಡ್ಗ' ಪುನೀತ್

ಫಿಟ್ನೆಸ್ ವಿಚಾರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹಳ ವಿಶೇಷ. 45ರ ವಯಸ್ಸಿನಲ್ಲೂ ಅಪ್ಪು ಡ್ಯಾನ್ಸ್, ಸ್ಟಂಟ್ಸ್ ಹಾಗೂ ವರ್ಕೌಟ್ ನೋಡಿದವರು ವಾಹ್ ಎನ್ನುತ್ತಾರೆ. ನವನಟರು ಸಹ ಈ ವಿಚಾರದಲ್ಲಿ ಪುನೀತ್ ಅವರನ್ನು ಮಾದರಿಯನ್ನಾಗಿಸಿಕೊಂಡಿದ್ದಾರೆ.

Recommended Video

Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

ಫಿಟ್ನೆಸ್ ವಿಚಾರದಲ್ಲಿ ದೊಡ್ಮನೆ ಹುಡ್ಗ ಹೊಸ ಟಾಸ್ಕ್ ಮಾಡಿದ್ದಾರೆ. ಶುಕ್ರವಾರ ಬೆಳ್ಳಂಬೆಳಗ್ಗೆ ಸೈಕಲ್ ಹತ್ತಿ ಬೆಂಗಳೂರು ನಗರವನ್ನು ಸುತ್ತಾಡಿದ್ದಾರೆ. ಸೈಕಲ್‌ನಲ್ಲಿ ನಗರ ಸುತ್ತಿದ್ದ ಪುನೀತ್ ತಮ್ಮ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋ ಅಪ್‌ಲೌಡ್‌ ಮಾಡಿದ್ದಾರೆ.

''Pedal towards fit morning'' ಎಂದು ಕ್ಯಾಪ್ಷನ್ ನೀಡಿರುವ ಪುನೀತ್ ಸಿಲಿಕಾನ್ ಸಿಟಿ ಸುತ್ತಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಎಲ್ಲಿಂದ ಎಲ್ಲಿಗೆ ಹೋಗಿದ್ದರು? ಮುಂದೆ ನೋಡಿ...

ಸದಾಶಿವನಗರ ಟು ವಿಧಾನಸೌಧ

ಸದಾಶಿವನಗರ ಟು ವಿಧಾನಸೌಧ

ಸದಾಶಿವನಗರದ ನಿವಾಸದಿಂದ ಸೈಕಲ್ ಸವಾರಿ ಆರಂಭಿಸಿದ ಪುನೀತ್ ರಾಜ್ ಕುಮಾರ್ ಮೇಖ್ರಿ ಸರ್ಕಲ್, ವಸಂತನಗರ, ಚಾಳುಕ್ಯ ಸರ್ಕಲ್, ವಿಧಾನಸೌಧ, ಬಹುಮಹಡಿ ಕಟ್ಟಡ, ಚಿನ್ನಸ್ವಾಮಿ ಸ್ಟೇಡಿಯಂ, ಎಂಜಿ ರಸ್ತೆಯಲ್ಲಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

ನಂದಿ ಬೆಟ್ಟಕ್ಕೆ ಸೈಕಲ್‌ನಲ್ಲಿ ಹೋಗಿದ್ದ ಅಪ್ಪು

ನಂದಿ ಬೆಟ್ಟಕ್ಕೆ ಸೈಕಲ್‌ನಲ್ಲಿ ಹೋಗಿದ್ದ ಅಪ್ಪು

ಈ ಹಿಂದೆ ಸದಾಶಿವನಗರ ನಿವಾಸದಿಂದ ಚಿಕ್ಕಬಳ್ಳಾಪುರ ಬಳಿ ಇರುವ ನಂದಿಬೆಟ್ಟಕ್ಕೆ ಸೈಕಲ್‌ನಲ್ಲಿ ಸವಾರಿ ಮಾಡಿದ್ದರು. ಆ ಸಂದರ್ಭದಲ್ಲಿ ವಿಡಿಯೋ ಸಹ ವೈರಲ್ ಆಗಿತ್ತು. ಆಗಲೂ ಪುನೀತ್ ಅವರ ಫಿಟ್ನೆಸ್ ಬಗ್ಗೆ ಭಾರಿ ಚರ್ಚೆಯಾಗಿತ್ತು.

ಶಿವಣ್ಣ ಸೈಕಲ್ ಗಿಫ್ಟ್ ನೀಡಿದ್ದ ಅಪ್ಪು

ಶಿವಣ್ಣ ಸೈಕಲ್ ಗಿಫ್ಟ್ ನೀಡಿದ್ದ ಅಪ್ಪು

ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಪುನೀತ್ ರಾಜ್ ಕುಮಾರ್ ಸೈಕಲ್ ಉಡುಗೊರೆ ನೀಡಿದ್ದರು. ಶಿವಣ್ಣ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಕಾರಣ, ಸೈಕಲ್ ನೀಡಿ ಗಮನ ಸೆಳೆದಿದ್ದರು ಪುನೀತ್.

ಐಂದ್ರಿತಾ-ದಿಗಂತ್ ಸೈಕಲ್ ಸವಾರಿ

ಐಂದ್ರಿತಾ-ದಿಗಂತ್ ಸೈಕಲ್ ಸವಾರಿ

ಕನ್ನಡ ನಟ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೈ ಸಹ ಸೈಕಲ್ ಸವಾರಿ ಮಾಡಿದ್ದಾರೆ. ಗೆಳೆಯರ ಜೊತೆ ಸೈಕಲ್ ಸವಾರಿ ಹೋಗಿರುವ ದಂಪತಿಗಳು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

More from Filmibeat

English summary
Kannada actor Puneeth Rajkumar ride bicycle in Bangalore today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X